ಬಡಗನ್ನೂರು: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದ್ದು ಸತ್ಯ ಧರ್ಮ ಚಾವಡಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.ಜಿಲ್ಲೆ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಮಹಾ ಮಾತೆಯ ದರುಶನ ಪಡೆಯುತ್ತಿದ್ದಾರೆ.
ನವರಾತ್ರಿಯ ವಿಶೇಷ ದಿನವಾದ ಅ.12 ಶನಿವಾರ ವಿಜಯದಶಮಿಯಂದು ಬೆಳಿಗ್ಗೆ 11ಗಂಟೆಗೆ ಶಾರದಾ ಪೂಜೆ, ಮಕ್ಕಳಿಗೆ ಅಕ್ಷರಾಭ್ಯಾಸ, ಅವಳಿ ಮಕ್ಕಳಿಂದ ವಿಶೇಷ ಸೇವೆ, 12.30ಕ್ಕೆ ಮಹಾಪೂಜೆ, ಪುಟಾಣಿಗಳಿಗೆ ಅನ್ನಪ್ರಾಶನ ಹಾಗೂ ಮಹಾ ಅನ್ನಸಂತರ್ಪಣೆ ಜರಗಲಿದೆ. ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ ಮಹಾಮಾತೆ ಹಾಗೂ ಕ್ಷೇತ್ರದ ಸರ್ವ ಶಕ್ತಿಗಳ ಕೃಪೆಗೆ ಪಾತ್ರರಾಗಬೇಕೆಂದು ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.