ಇಲೆಕ್ಟ್ರೋನಿಕ್ಸ್ ಐಟಂಗಳ ಮಾರಾಟ ಹಾಗೂ ಸೇವಾ ಮಳಿಗೆ ಆಗಸ್ತ್ಯ ಇಲೆಕ್ಟ್ರೋನಿಕ್ಸ್ ಶುಭಾರಂಭ

0

ಪುತ್ತೂರು: ವಿವಿಧ ಕಂಪೆನಿಗಳ ಸುಪ್ರಸಿದ್ಧ ಇಲೆಕ್ಟ್ರೋನಿಕ್ಸ್ ಐಟಂಗಳ ಹಾಗೂ ಸಿಸಿ ಕ್ಯಾಮೆರಾ ಇದರ ಮಾರಾಟ ಹಾಗೂ ಸೇವಾ ಮಳಿಗೆ ಆಗಸ್ತ್ಯ ಇಲೆಕ್ಟ್ರೋನಿಕ್ಸ್ ಸಂಸ್ಥೆಯು ಅ.11 ರಂದು ಮರೀಲು ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ ಮುಂಭಾಗದ ಈಶ್ವರ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಉದ್ಘಾಟನೆಗೊಂಡಿತು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ಸಂಚಾಲಕ ಅರುಣ್ ಕುಮಾರ್ ಪುತ್ತಿಲರವರು ನೂತನ ಸಂಸ್ಥೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಹಾಗೂ ದೀಪ ಬೆಳಗಿಸಿ ಉದ್ಘಾಟಿಸಿ ನೂತನ ಸಂಸ್ಥೆಗೆ ಚಾಲನೆ ನೀಡಿದರು ‌ ಬಳಿಕ ಮಾತನಾಡಿದ ಅರುಣ್ ಕುಮಾರ್ ಪುತ್ತಿಲರವರು, ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಇಲೆಕ್ಟ್ರೋನಿಕ್ಸ್ ಸಂಸ್ಥೆಯು ಉದ್ಘಾಟನೆಗೊಂಡಿರುವುದು ಒಳ್ಳೆಯ ಬೆಳವಣಿಗೆ ಮಾತ್ರವಲ್ಲ ಈ ಭಾಗದ ಜನರಿಗೆ ಬಹಳ ಉಪಯುಕ್ತವಾಗಿದೆ ‌ ಸಂಸ್ಥೆಯ ಮೂಲಕ ಉತ್ತನ ಸೇವೆಗಳು ಸಾರ್ವಜನಿಕರಿಗೆ ಸಿಗುವಂತಾಗಲಿ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಂಸ್ಥೆಗೆ ಆಗಮಿಸಿ ವಸ್ತುಗಳನ್ನು ಖರೀದಿ ಮಾಡಿ ಸಂಸ್ಥೆಗೆ ಶಕ್ತಿ ತುಂಬುವ ಕೆಲಸವಾಗಲಿ ಎಂದು ಹೇಳಿ ಸಂಸ್ಥೆಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರು ಹಾಗೂ ಸುಬ್ರಹ್ಮಣ್ಯ ಸ್ವಾಮಿ ಆಶೀರ್ವದಿಸಲಿ ಎಂದರು.

ಪುತ್ತೂರು ನಗರಸಭೆ ಉಪಾಧ್ಯಕ್ಷ ಹಾಗೂ ಕಟ್ಟಡದ ಮಾಲಕ  ಬಾಲಚಂದ್ರ ಕೆಮ್ಮಿಂಜೆ ಮಾತನಾಡಿ, ಹೊಸ ಉದ್ಯಮಗಳು ಪುತ್ತೂರಿಗೆ ಆಗಮಿಸುತ್ತಿರುವುದು ಪುತ್ತೂರಿನ ಬಾಹುಬಲವನ್ನು ಹೆಚ್ಚಿಸಿದೆ. ಮರೀಲಿನ ಈ ಸಂಕೀರ್ಣದಲ್ಲಿ ಇಲೆಕ್ಟ್ರೋನಿಕ್ಸ್ ಮಳಿಗೆಯು ಲೋಕಾರ್ಪಣೆಗೊಂಡಿರುವುದು ಈ ಭಾಗದ ಜನತೆಗೆ ಉಪಯೋಗವಾಗಲಿದೆ. ಗ್ರಾಹಕರು ಐಟಂಗಳನ್ನು ಖರೀದಿ ಮಾಡುವ ಮೂಲಕ ವ್ಯವಹಾರ ನಡೆಸಿ ಉದ್ಯಮವು ಬೆಳೆಯುವಂತಾಗಲಿ ಆ ಮೂಲಕ ಸಂಸ್ಥೆಯ ಮಾಲಕರಾದ ಹರ್ಷಿತ್ ರವರ ಕನಸಿನ ಈ ಸಂಸ್ಥೆ ಅಭಿವೃದ್ಧಿ ಹೊಂದಲಿ ಎಂದರು.

ಕುಂಟಾರು ಗುರುರಾಜ್ ತಂತ್ರಿರವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ರೂಪೇಶ್ ನಾಯ್ಕ್, ನವೀನ್, ರೋಹಿತ್ ಪಿ, ಜಯಪ್ರಕಾಶ್, ಯತೀನ್, ಹೊಟೇಲ್ ಅಭಿನಂದನ್ ನ ಕೃಷ್ಣ ಕೆ.ಎಸ್, ಶರತ್ ರೈ, ಜಯಪ್ರಕಾಶ್, ನಿತಿನ್ ಹಾಗೂ ಸಂಸ್ಥೆಯ ಮಾಲಕ ಹರ್ಷಿತ್ ರವರ ತಂದೆ ಬಾಲಕೃಷ್ಣ ಮರುವಂಜ, ತಾಯಿ ಪ್ರೇಮಲತಾ, ಸಹೋದರ ಪುನೀತ್ ಸಹಿತ ಹಲವರು ಆಗಮಿಸಿ ಶುಭ ಹಾರೈಸಿದರು. ನೂತನ ಮಳಿಗೆ ಆಗಸ್ತ್ಯ ಇಲೆಕ್ಟ್ರೋನಿಕ್ಸ್ ಮಾಲಕ ಹರ್ಷಿತ್ ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಗ್ರಾಹಕರು ಪ್ರೋತ್ಸಾಹಿಸಿ ಹರಸಬೇಕು…
ನಮ್ಮ ಸಂಸ್ಥೆಯಲ್ಲಿ ವಿವಿಧ ಕಂಪೆನಿಗಳ ಟಿವಿ, ವಾಷಿಂಗ್ ಮೆಷಿನ್, ಎಸಿ, ಮಿಕ್ಸಿ, ಸಿಸಿ ಕ್ಯಾಮರಾ ಹಾಗೂ ಇನ್ನಿತರ ಇಲೆಕ್ಟ್ರೋನಿಕ್ಸ್ ಉಪಕರಣಗಳು ಮಾರಾಟ ಹಾಗೂ ಸೇವೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊ.8050846994, 9481726994 ನಂಬರಿಗೆ ಸಂಪರ್ಕಿಸಬಹುದಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗೆ ಭೇಟಿ ನೀಡಿ ನಮ್ಮನ್ನು ಪ್ರೋತ್ಸಾಹಿಸಿ ಹರಸಬೇಕು.
-ಹರ್ಷಿತ್, ಮಾಲಕರು, ಆಗಸ್ತ್ಯ ಇಲೆಕ್ಟ್ರೋನಿಕ್ಸ್

ಶುಭಾರಂಭದ ಪ್ರಯುಕ್ತ ಕೂಪನ್ ಡ್ರಾ..
ಸಂಸ್ಥೆಯು ಗ್ರಾಹಕರಿಗೆ ಬಹುಮಾನವಾಗಿ ಕೂಪನ್ ಡ್ರಾವನ್ನು ಆಯೋಜಿಸಿದ್ದು ಸಂಸ್ಥೆಯ ಉದ್ಘಾಟನೆಯ ಆಮಂತ್ರಣ ಪತ್ರಿಕೆಯೊಂದಿಗೆ ಈ ಕೂಪನ್ ಅನ್ನು ಲಗತ್ತಿಸಿದೆ. ಗ್ರಾಹಕರು ಈ ಕೂಪನ್ ಅನ್ನು ಭರ್ತಿ ಮಾಡಿ ಮಳಿಗೆಗೆ ಭೇಟಿ ಮಾಡಿ ಮಳಿಗೆಯಲ್ಲಿನ ಡ್ರಾಪ್ ಬಾಕ್ಸ್ ನಲ್ಲಿ ಹಾಕಿ ವಿಶೇಷ ಬಹುಮಾನವನ್ನು ಗೆಲ್ಲುವ ಸುವರ್ಣಾವಕಾಶವನ್ನು ಸಂಸ್ಥೆಯ ಮಾಲಕರು ಗ್ರಾಹಕರಿಗೆ ಒದಗಿಸಿಕೊಟ್ಟಿದ್ದು ಇದರ ಪ್ರಯೋಜನವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕಾಗಿದೆ.

ಸನ್ಮಾನ..
ಈ ಸಂದರ್ಭದಲ್ಲಿ ಮಳಿಗೆಯ ಮಾಲಕರಾದ ಹರ್ಷಿತ್ ಹಾಗೂ ಅವರ ತಂದೆ ಬಾಲಕೃಷ್ಣ ಮರುವಂಜ, ತಾಯಿ ಪ್ರೇಮಲತಾರವರು ಜೊತೆಗೂಡಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ಸಂಚಾಲಕ ಅರುಣ್ ಕುಮಾರ್ ಪುತ್ತಿಲರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here