ಅರಿಯಡ್ಕ: ಶ್ರೀ ವಿಷ್ಣು ಸೇವಾ ಮಹಿಳಾ ಬಳಗ ದರ್ಬೆತ್ತಡ್ಕ ಇದರ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮವು ಅ.6 ರಂದು ಶ್ರೀ ಅಯ್ಯಪ್ಪ ಭಜನಾ ಮಂದಿರದ ಮಣಿಕಂಠ ಸಭಾಭವನದಲ್ಲಿ ಪ್ರಮೋದಿನಿ ನವೀನ್ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ಸಾವಿತ್ರಿ ಯವರು ವಾರ್ಷಿಕ ವರದಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ವಿಷ್ಣುಸೇವಾ ಬಳಗ ದರ್ಬೆತ್ತಡ್ಕ ಇದರ ಪದಗ್ರಹಣ ಮತ್ತು ಸೇವಾ ಬಳಗಕ್ಕೆ ಸಮವಸ್ತ್ರವನ್ನು ಬಿಡುಗಡೆಗೊಳಿಸಲಾಯಿತು.
ಹಲವಾರು ಸಂಘಟನೆಗಳಲ್ಲಿ ಗುರುತಿಸಿಕೊಂಡು ಸಂಘಟನೆಗಳನ್ನು ರಚಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ರವೀಂದ್ರ ಮಣಿಯಾಣಿ ದರ್ಬೆತ್ತಡ್ಕ ಇವರನ್ನು ಈ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ನಂತರ ಶ್ರೀಮಣಿಕಂಠ ಕುಣಿತ ಭಜನಾ ತಂಡಕ್ಕೆ ಸಮವಸ್ತ್ರವನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ಅಮ್ಮ ಮಗಳ ಬಾಂಧವ್ಯವನ್ನು ಹೊಂದಿರುವ ಉಡಲ ಗುಡಿತ ದೇವೆರ್ ಎಂಬ ತುಳು ಆಲ್ಬಮ್ ಸಾಂಗ್ ನ್ನು ಜಯರಾಮ್ ಪೂಜಾರಿ ಕುಕ್ಕುತ್ತಡಿ ಇವರು ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ವಾಸು ಮಣಿಯಾಣಿ, ಮಾಲತಿ ಜಯರಾಮ್, ಹರಿಪ್ರಸಾದ್ ಶೆಟ್ಟಿ, ಪುರಂದರ ರೈ, ಶಿವರಾಮ ಮಣಿಯಾಣಿ,ವೆಂಕಟೇಶ್ ಪ್ರಸಾದ್,ರಾಜೇಶ್ ಕೆ ಮಯೂರ, ಸದಾನಂದ ಮಣಿಯಾಣಿ, ಸಾವಿತ್ರಿ, ಶ್ರೀಧರ್,ಪುಷ್ಪರಾಜ್ ಕುಡ್ಚಿಲ,ರಮೇಶ್ ಸುವರ್ಣ, ಮೋಹನ್ ಕೆ ದರ್ಬೆತ್ತಡ್ಕ ಉಪಸ್ಥಿತರಿದ್ದರು.ಮಹಿಳಾ ಬಳಗದ ಸದಸ್ಯರು ಸಹಕರಿಸಿದರು.ಹರ್ಷಿತ ಶ್ರೀನಿಕ,ಶ್ರೀನಿಧಿ ಪ್ರಾರ್ಥಿಸಿ, ಸಂಘದ ಸದಸ್ಯೆ ರಾಜೇಶ್ವರಿ ಸ್ವಾಗತಿಸಿದರು. ಸದಸ್ಯೆ ಸಹನಾ ಕುಮಾರಿ ಧನ್ಯವಾದವಿತ್ತರು. ಶಿವಪ್ರಸಾದ್ ಬೆಟ್ಟಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ತರುವಾಯ ಕುಸಲ್ದ ರಂಗ್ ಮನೋರಂಜನ ಕಾರ್ಯಕ್ರಮವನ್ನು ನಡೆಸಲಾಯಿತು.