ಚಿನ್ನಾಭರಣ ಖರೀದಿ ವೇಳೆ ಬೆಳ್ಳಿ ಉಚಿತ
ವಜ್ರಾಭರಣ ಖರೀದಿಗೆ ಚಿನ್ನದ ನಾಣ್ಯ ಉಚಿತ
ಪ್ಲಾಟಿನಂ ಮೇಲೆ 7% ರಿಯಾಯಿತಿ
ವಜ್ರಗಳ ಮೇಲೆ 20% ರಿಯಾಯಿತಿ
ಮದುವೆ ಖರೀದಿಗೆ ವಿಶೇಷ ರೀಯಾಯಿತಿ
ಸರಗಳ ಮೇಕಿಂಗ್ ಚಾರ್ಜ್ 4.99% ನಿಂದ ಆರಂಭ
ಲಕ್ಕಿ ಡ್ರಾ ಮೂಲಕ ಕಾರು ಗೆಲ್ಲುವ ಅವಕಾಶ
ಹಳೆಯ ಚಿನ್ನಾಭರಣಗಳನ್ನು ಉತ್ತಮ ಬೆಲೆಯಲ್ಲಿ ಎಕ್ಸ್ ಚೇಂಜ್ ಗೆ ಅವಕಾಶ
ಪುತ್ತೂರು: ಗ್ರಾಹಕರ ಅಚ್ಚುಮೆಚ್ಚಿನ ಚಿನ್ನಾಭರಣ ಮಳಿಗೆಯಲ್ಲಿ ಒಂದಾಗಿರುವ ಪುತ್ತೂರಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ವ್ಯವಹಾರ ನಡೆಸುತ್ತಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಅಲುಕಾಸ್ ನಲ್ಲಿ ದೀಪಾವಳಿ ಫೆಸ್ಟಿವಲ್ ಸೇಲ್ ಆರಂಭಗೊಂಡಿದೆ.
ಫೆಸ್ಟಿವಲ್ ಸೇಲ್ ಸಂದರ್ಭದಲ್ಲಿ ಚಿನ್ನದ ಆಭರಣಗಳನ್ನು, ಖರೀದಿಸಿದಾಗ ಬೆಳ್ಳಿ ಉಚಿತವಾಗಿ ಲಭಿಸಲಿದೆ. ರೂ.60,000 ಮೌಲ್ಯದ ವಜ್ರಾಭರಣಗಳನ್ನು ಖರೀದಿಸಿದಾಗ ಚಿನ್ನದ ನಾಣ್ಯ ಉಚಿತವಾಗಿ ಲಭಿಸಲಿದೆ. ವಜ್ರಾಭರಣಗಳ ಮೇಲೆ ೨೦% ರಿಯಾಯಿತಿ ದೊರೆಯಲಿದೆ. ಪ್ಲಾಟಿನಂ ಆಭರಣಗಳ ಮೇಲೆ 7% ರಿಯಾಯಿತಿ ದೊರೆಯಲಿದೆ.
ಸರಗಳ ಮೇಕಿಂಗ್ ಚಾರ್ಜ್ 4.99% ನಿಂದ ಆರಂಭಗೊಳ್ಳಲಿದೆ. ಪ್ರತಿಯೋರ್ವ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಕಾರು ಗೆಲ್ಲುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ. ಉಳಿದಂತೆ ವಿವಿಧ ಕೊಡುಗೆಗಳನ್ನು ಸಂಸ್ಥೆ ನೀಡಲಿದ್ದು, ನಿಮ್ಮ ಹಳೆಯ ಚಿನ್ನವನ್ನು ಹೊಸ BIS HUID ಹಾಲ್ ಮಾರ್ಕ್ ನ ಆಭರಣಗಳಿಗೆ ಹೆಚ್ಚಿನ ಲಾಭಗಳೊಂದಿಗೆ ಎಕ್ಸೇಂಜ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಸಂಸ್ಥೆ ಮಾಡಿದೆ.
ಸಂಸ್ಥೆಯು ಈ ಭಾರಿಯ ಬೆಳಕಿನ ಹಬ್ಬ ದೀಪಾವಳಿಗೆ ಮತ್ತಷ್ಟು ಮೆರಗು ನೀಡಲು ಮುಂದಾಗಿದ್ದು, ಗ್ರಾಹಕರಿಗಾಗಿ ದೀಪಾವಳಿ ವಿಶೇಷ ವಜ್ರಾಭರಣಗಳ ಸಂಗ್ರಹವನ್ನು ಸಂಸ್ಥೆಯಲ್ಲಿ ವ್ಯವಸ್ಥೆ ಮಾಡಿದೆ. ಗ್ರಾಹಕ ಮನಸ್ಸಿಗೊಪ್ಪುವ ವಿವಿಧ ವಿನ್ಯಾಸದ ವಜ್ರಾಭರಣಗಳ ಸಂಗ್ರಹವೇ ಇಲ್ಲಿದೆ. ಈಗಾಗಲೇ ಆರಂಭಗೊಂಡಿರುವ ದೀಪಾವಳಿ ಫೆಸ್ಟ್ ಸೇಲ್ ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಕಳೆದ ಕೆಲ ವರುಷಗಳಿಂದ ಪುತ್ತೂರಿನ ಹೃದಯಭಾಗದಲ್ಲಿರುವ ಜೋಸ್ ಅಲುಕ್ಯಾಸ್ ಜ್ಯುವೆಲ್ಲರಿ ಚಿನ್ನಭರಣ ಪ್ರಿಯರಿಗೆ ಹೊಸತನದ ಖರೀದಿಗೆ ಅವಕಾಶ ಕಲ್ಪಿಸುತ್ತಿದ್ದು ಒಂದಲ್ಲ
ಒಂದು ಹಬ್ಬದ ಪ್ರಯುಕ್ತ ವಿಶೇಷ ಆಫರ್, ರಿಯಾಯಿತಿ ಮಾರಾಟಗಳ ಮೂಲಕ ವೈಶಿಷ್ಟ್ಯಮಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.ಮಾತ್ರವಲ್ಲದೆ ಗ್ರಾಹಕರ ವಿಶ್ವಾಸನೀಯ ಸಂಸ್ಥೆಗಳಲ್ಲೊಂದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 91885 23916, 08251 298526 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.