ಅ.14: ರಾಮಕುಂಜದಲ್ಲಿ ಪಂಚಗವ್ಯ ಚಿಕಿತ್ಸಾ ಶಿಬಿರ, ವಿಚಾರಗೋಷ್ಠಿ

0

ರಾಮಕುಂಜ: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳು, ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಕೊಯಿಲ ಇವರ ಆಶ್ರಯದಲ್ಲಿ ಗೋ ಸೇವಾ ಗತಿನಿಧಿ ಮತ್ತು ಗ್ರಾಮ ವಿಕಾಸ ಗತಿನಿಧಿ ಮಂಗಳೂರು ವಿಭಾಗ ಇವರ ಸಹಯೋಗದೊಂದಿಗೆ ’ ಆನ್ಸರ್ ಫಾರ್ ಕ್ಯಾನ್ಸರ್ ಖ್ಯಾತಿಯ ಡಾ| ಡಿ.ಪಿ.ರಮೇಶ ಬೆಂಗಳೂರು ಇವರಿಂದ ಪಂಚಗವ್ಯ ಚಿಕಿತ್ಸಾ ಶಿಬಿರ ಮತ್ತು ವಿಚಾರಗೋಷ್ಠಿ ಅ.14ರಂದು ಬೆಳಿಗ್ಗೆ 9.30ರಿಂದ ಶ್ರೀ ರಾಮಕುಂಜೇಶ್ವರ ಪ.ಪೂ.ವಿದ್ಯಾಲಯದಲ್ಲಿ ನಡೆಯಲಿದೆ.

ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕುವೆಚ್ಚಾರು ಉದ್ಘಾಟಿಸಲಿದ್ದಾರೆ. ಪ್ರಗತಿಪರ ಕೃಷಿಕ ಬಾಲಕೃಷ್ಣ ಭಟ್ ಬರೆಂಬಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ.ಪ್ರಸನ್ನ ಕುಮಾರ್ ಹೆಬ್ಬಾರ್ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 10.30ರಿಂದ 11.30ರ ತನಕ ನಡೆಯುವ ಗೋಷ್ಠಿಯಲ್ಲಿ ಪಂಚಗವ್ಯ ಚಿಕಿತ್ಸೆಗೆ ಮಣಿಯುವ ಖಾಯಿಲೆಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದರ ಮಹತ್ವ ಕುರಿತು ಆಯುರ್ವೇದ ವೈದ್ಯರು ಮತ್ತು ಪಂಚಗವ್ಯ ಚಿಕಿತ್ಸಾ ತಜ್ಞ ಡಾ.ಡಿ.ಪಿ.ರಮೇಶ ಅವರು ಮಾಹಿತಿ ನೀಡಲಿದ್ದಾರೆ. ಬೆಳಿಗ್ಗೆ 11.30ರಿಂದ 1.00ರ ತನಕ ನಡೆಯುವ 2ನೇ ಗೋಷ್ಠಿಯಲ್ಲಿ ಪಂಚಗವ್ಯ ಚಿಕಿತ್ಸೆ, ಸಂಶೋಧನೆ, ಅಧ್ಯಯನ ಮತ್ತು ಪ್ರಸ್ತುತತೆ ಕುರಿತು ಸೈಕನ್ಯೂರೋ ಇಮ್ಯುನೋಲಾಜಿಸ್ಟ್ ಹಾಗೂ ಪರ್ಯಾಯ ಚಿಕಿತ್ಸಾ ವಿಧಾನಗಳ ತಜ್ಞರಾದ ಡಾ.ಅವಿನಾಶ್ ಸಲ್ಗಾರ್ ಬೆಂಗಳೂರು ಮಾಹಿತಿ ನೀಡಲಿದ್ದಾರೆ.

ಮಧ್ಯಾಹ್ನ 2 ರಿಂದ 3.30ರ ತನಕ ನಡೆಯುವ 3ನೇ ಗೋಷ್ಠಿಯಲ್ಲಿ ಮನೋದೈಹಿಕ ಖಾಯಿಲೆಗಳು ಮತ್ತು ತಡೆಗಟ್ಟುವಿಕೆ ಮತ್ತು ಪಂಚಗವ್ಯದಂತಹ ನೈಸರ್ಗಿಕ ಪರಿಹಾರೋಪಾಯಗಳ ಕುರಿತು ಡಾ.ಅವಿನಾಶ್ ಸಲ್ಗಾರ್ ಬೆಂಗಳೂರು ಮಾಹಿತಿ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಸಮಾರೋಪ ನಡೆಯಲಿದೆ. ಬೆಳಿಗ್ಗೆ 11 ರಿಂದ ಸಮಾರೋಪದ ತನಕ ಚಿಕಿತ್ಸೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಮಾಹಿತಿಗಾಗಿ 9448369381, 9448761519ಗೆ ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here