ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಆಶೀರ್ವಚನ ಕಾರ್ಯಕ್ರಮ

0

ಮಡಂತ್ಯಾರು ಚರ್ಚ್ ಧರ್ಮಗುರು ವಂ|ಸ್ಟ್ಯಾನಿ ಗೋವಿಯಸ್ ರವರಿಂದ ಆಶೀರ್ವಚನ

ಪುತ್ತೂರು: ಎಪಿಎಂಸಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಮೇಲೆ ಆಶೀರ್ವಚನ ಕಾರ್ಯಕ್ರಮ ಅ.14 ರಂದು ಬೆಳಿಗ್ಗೆ ನೆರವೇರಿತು.

ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳಾದ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್, ಕ್ರಿಸ್ಟೋಫರ್ ಬ್ಯಾಂಕ್ವೆಟ್ ಸಭಾಂಗಣ, ಕ್ರಿಸ್ಟೋಫರ್ ಕಟ್ಟಿಗೆ ಡಿಪೋ, ತ್ರಿ ಸಿಕ್ಸ್ಟಿ ರೆಸ್ಟೋರೆಂಟ್ & ಬಾರ್, ಕ್ರಿಸ್ಟೋಫರ್ ಪೆಡಲ್ಸ್ & ಫಿಟ್ನೆಸ್ ಸೆಂಟರ್, ಕ್ರಿಸ್ಟೋಫರ್ ದ್ವಿಚಕ್ರ ಸರ್ವಿಸ್ ಸ್ಟೇಷನ್, ಕ್ರಿಸ್ಟೋಫರ್ ಇನ್ಸೂರೆನ್ಸ್ ಪಾಯಿಂಟ್ ಇವುಗಳ ಆಶೀರ್ವಚನ ಕಾರ್ಯಕ್ರಮವನ್ನು ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಲೇರಿಯನ್ ಡಾಯಸ್ ರವರ ಸಂಬಂಧಿ ಧರ್ಮಗುರು, ಮಡಂತ್ಯಾರು ಸೆಕ್ರೇಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ಗೋವಿಯಸ್ ರವರು ನೆರವೇರಿಸಿ, ಬೈಬಲ್ ವಾಚಿಸಿ, ಸಂಸ್ಥೆಗಳ ಮೇಲೆ ಪವಿತ್ರ ಜಲ ಸಿಂಪಡಿಸಿ ಮಾತನಾಡಿ, ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಮಾಲಕ ವಲೇರಿಯನ್ ಡಾಯಸ್ ರವರು ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವವರು. ಅವರು ನಡೆದು ಬಂದ ದಾರಿ ಬಗ್ಗೆ ನಮಗೆ ಎಲ್ಲರಿಗೂ ತಿಳಿದಿದೆ. ಪ್ರಾಮಾಣಿಕ ಹಾಗೂ ನಿರಂತರ ಶ್ರಮ ಜೊತೆಗೆ ದೇವರ ಹಾಗೂ ಹಿರಿಯರ ಆಶೀರ್ವಾದದಿಂದ ಸಂಸ್ಥೆಯು ಬೆಳೆದು ನಿಂತಿದೆ. ಇದೀಗ ವಲೇರಿಯನ್ ಡಾಯಸ್ ರವರ ಪುತ್ರ ಮನೋಜ್ ಡಾಯಸ್ ರವರೂ ಕೂಡ ತಂದೆಯೊಂದಿಗೆ ಕೈಜೋಡಿಸಿ ಸಂಸ್ಥೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಕಥೋಲಿಕ್ ಸಭಾ ಪುತ್ತೂರು ಘಟಕದ ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಜೆರೋಮಿಯಸ್ ಪಾಯಿಸ್ ಹಾಗೂ ಪ್ರೆಸ್ಸಿ ಪಾಯಿಸ್ ದಂಪತಿ, ಫಿಲೋಮಿನಾ ಕಾಲೇಜು ನಿವೃತ್ತ ಮ್ಯಾನೇಜರ್ ವಿ.ಜೆ ಫೆರ್ನಾಂಡೀಸ್, ಲೂಯಿಸ್ ಫೆರ್ನಾಂಡೀಸ್ ಎಪಿಎಂಸಿ ರಸ್ತೆ, ಜೋಕಿಂ ಲೂಯಿಸ್ ಬೆದ್ರಾಳ, ರೋಶನ್ ಡಾಯಸ್ ಬಪ್ಪಳಿಗೆ, ಆವಿನ್ ಕಾಂಪ್ಲೆಕ್ಸ್ ಮಾಲಕ ಮೆಲ್ವಿನ್ ಫೆರ್ನಾಂಡೀಸ್, ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ನೆಕ್ಕಿಲಾಡಿ, ಅರುಣ್ ಪಿಂಟೊ ಸಾಮೆತ್ತಡ್ಕ, ರೊನಾಲ್ಡ್ ಮೊಂತೇರೊ ಮೊಟ್ಟೆತ್ತಡ್ಕ, ಪಾವ್ಲ್ ಮೊಂತೇರೊ ಕಲ್ಲಾರೆ, ಜೋನ್ ಪೀಟರ್ ಡಿ’ಸಿಲ್ವ ಕಲ್ಲಾರೆ, ದೀಪಕ್ ಡಾಯಸ್ ಎಪಿಎಂಸಿ ರಸ್ತೆ,ರೋಯಿಸ್ಟನ್ ಡಾಯಸ್ ಎಪಿಎಂಸಿ ರಸ್ತೆ, ನವನೀತ್ ಬಜಾಜ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. 

ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಲೇರಿಯನ್ ಡಾಯಸ್ ಹಾಗೂ ಅವರ ಪತ್ನಿ ಲೆತ್ತೀಶಿಯಾ ಮಸ್ಕರೇನ್ಹಸ್, ನಿರ್ದೇಶಕರಾದ ಮನೋಜ್ ಡಾಯಸ್ ಹಾಗೂ ನಿಶಾ ಮಸ್ಕರೇನ್ಹಸ್ ದಂಪತಿ ಅತಿಥಿಗಳನ್ನು ಸ್ವಾಗತಿಸಿದರು.

ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳು..
*ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್
*ಕ್ರಿಸ್ಟೋಫರ್ ಬ್ಯಾಂಕ್ವೆಟ್ ಸಭಾಂಗಣ
*ಕ್ರಿಸ್ಟೋಫರ್ ಕಟ್ಟಿಗೆ ಡಿಪೋ
*ತ್ರಿ ಸಿಕ್ಸ್ಟಿ ರೆಸ್ಟೋರೆಂಟ್ & ಬಾರ್,
*ಕ್ರಿಸ್ಟೋಫರ್ ಪೆಡಲ್ಸ್ & ಫಿಟ್ನೆಸ್ ಸೆಂಟರ್
*ಕ್ರಿಸ್ಟೋಫರ್ ದ್ವಿಚಕ್ರ ಸರ್ವಿಸ್ ಸ್ಟೇಷನ್
*ಕ್ರಿಸ್ಟೋಫರ್ ಇನ್ಸೂರೆನ್ಸ್ ಪಾಯಿಂಟ್

LEAVE A REPLY

Please enter your comment!
Please enter your name here