ಕಡಬ: ಹಿರೆಬಂಡಾಡಿ ಗ್ರಾಮದ ಕೆಮ್ಮಾರ ಶ್ರೀ ಚೌಡೇಶ್ವರಿ ಕೃಪಾಪೋಷಿತ ಯಕ್ಷಗಾನ ಚಿಕ್ಕ ಮೇಳದ ಉದ್ಘಾಟನೆ ಜೀರ್ಣೊದ್ದಾರಗೊಳ್ಳುತ್ತಿರುವ ಕೆಮ್ಮಾರ ಶ್ರೀ ಚೌಡೇಶ್ವರಿ (ಶ್ರೀ ದುರ್ಗಾಪರಮೇಶ್ವರಿ)ದೇವಸ್ಥಾನದ ವಠಾರದಲ್ಲಿ ಅ.14ರಂದು ನಡೆಯಿತು.
ತೆಂಕುತಿಟ್ಟು ಪ್ರಸಿದ್ದ ಭಾಗವತರಾದ ಅನೇಕಲ್ ಗಣಪತಿ ಭಟ್ ಉದ್ಘಾಟಿಸಿದರು. ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಚೌಡೇಶ್ವರಿ ದೇವಿಯ ನೂತನ ವಿಗ್ರಹ ನಿರ್ಮಾಣದ ನಿಧಿ ಸಂಚಯನಕ್ಕೆ ಚಾಲನೆ ನೀಡಿದರು. ಚಿಕ್ಕ ಮೇಳದ ಮಾರ್ಗದರ್ಶಕ ಜಗನ್ನಾಥ ಕೆಮ್ಮಾರ ಮಾತನಾಡಿದರು. ಗೋಕುಲನಗರ ಯಕ್ಷನಂದನ ಕಲಾ ಸಂಘದ ಗೌರವಾಧ್ಯಕ್ಷ ಮುರಳಿಕೃಷ್ಣ ಭಟ್ ಬಡಿಲ ಅಧ್ಯಕ್ಷತೆ ವಹಿಸಿದ್ದರು. ತೆಂಕುತಿಟ್ಟು ಚಿಕ್ಕಮೇಳಗಳ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಸರಪಾಡಿ ಆಶೋಕ್ ಶೆಟ್ಟಿ, ಪ್ರಮುಖರಾದ ಸದಾನಂದ ಶೆಟ್ಟಿ ಕೆಮ್ಮಾರಗುತ್ತು, ಚಿಕ್ಕಮೇಳದ ಸಂಚಾಲಕ ಗಿರೀಶ್ ಆಚಾರ್ಯ, ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರನ್ನು ಗೌರವಿಸಲಾಯಿತು. ದೇವಸ್ಥಾನದಲ್ಲಿ ಪ್ರಾರ್ಥಿಸಿ ಚಿಕ್ಕಮೇಳದ ಕಿರು ಪ್ರಸಂಗ ಪ್ರದರ್ಶನ ನಡೆಸಲಾಯಿತು. ಕೆಮ್ಮಾರ ಶ್ರೀ ಚೌಡೇಶ್ವರಿ (ಶ್ರೀ ದುರ್ಗಾಪರಮೇಶ್ವರಿ)ದೇವಸ್ಥಾನದ ಅನುವಂಶಿಕ ಮೊಕ್ತೇಸರ ಸಂಜೀವ ಬಡ್ಡಮೆ ಪ್ರಸ್ತಾವಿಸಿದರು. ಮೋಹನ್ ದಾಸ್ ಶೆಟ್ಟಿ ಸ್ವಾಗತಿಸಿದರು. ಪ್ರಕಾಶ್ ಕೆಮ್ಮಾರ ವಂದಿಸಿ, ನಿರೂಪಿಸಿದರು.