ತೆಂಕಿಲ ವಿವೇಕಾನಂದ ಕ್ಯಾಂಪಸ್‌ನಲ್ಲಿ ವಿದ್ಯಾಭಾರತಿ ಸಂಯೋಜಿತ ಶಾಲೆಗಳ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

0

*ಯುವ ಶಕ್ತಿಯಿಂದ ವಿಶ್ವಗುರು ಸ್ಥಾನದ ದೇಶಕ್ಕೆ ಬೆಂಬಲ-ಡಾ.ಪ್ರಭಾಕರ ಭಟ್ ಕಲ್ಲಡ್ಕ
*ಸೋತರೂ ಧೃತಿಗೆಡದೆ ಗೆಲುವಿನ ಗುರಿಯಿರಲಿ-ಪರಮೇಶ್ವರ ಹೆಗ್ಗಡೆ

ಪುತ್ತೂರು:ಕ್ರೀಡೆ ಒಗ್ಗಟ್ಟಿನ ಪ್ರದರ್ಶನವಾಗಿದ್ದು, ಪ್ರತಿಯೊಬ್ಬರೂ ಸ್ಪೂರ್ತಿಯಿಂದ ಭಾಗವಹಿಸಬೇಕು.ಯುವ ಶಕ್ತಿ ಹೆಚ್ಚು ಭಾಗವಹಿಸುವ ಮೂಲಕ ವಿಶ್ವಗುರು ಸ್ಥಾನದ ದೇಶಕ್ಕೆ ಬೆಂಬಲ ನೀಡಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.


ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕ್ಯಾಂಪಸ್‌ನಲ್ಲಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನಮ್, ವಿದ್ಯಾಭಾರತಿ ಕರ್ನಾಟಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಾಲ್ಕು ದಿನ ನಡೆಯಲಿರುವ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟದ ಉದ್ಘಾಟನೆ ಸಂದರ್ಭ ಯಾದವಶ್ರೀ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವನ್ನು ಅವರು ಅ.16ರಂದು ಸಂಜೆ ಉದ್ಘಾಟಿಸಿ ಮಾತನಾಡಿದರು.ಕ್ರೀಡೆ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದ್ದು,ಯುವ ಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ವಿಶ್ವಗುರು ಸ್ಥಾನದ ದೇಶಕ್ಕೆ ಬೆಂಬಲ ನೀಡಬೇಕು ಎಂದು ಅವರು ಹೇಳಿದರು.


ಸೋತರೂ ಧೃತಿಗೆಡದೆ ಗೆಲುವಿನ ಗುರಿಯಿರಲಿ: ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಭಾರತಿ ಕರ್ನಾಟಕ ಇದರ ಅಧ್ಯಕ್ಷ ಪರಮೇಶ್ವರ ಹೆಗ್ಗಡೆ ಅವರು ಮಾತನಾಡಿ, ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ.ಆದರೆ ಕ್ರೀಡಾ ಸ್ಪೂರ್ತಿಯಲ್ಲಿ ಭಾಗವಹಿಸುವುದು ಮುಖ್ಯವಾಗಿದೆ.ಪ್ರತಿಯೊಬ್ಬರು ಕ್ರೀಡೆಯಲ್ಲಿ ಗೆಲುವಿನ ಗುರಿಯೊಂದಿಗೆ ಸ್ಪಽಸಬೇಕು.ಸೋತವರು ಧೃತಿಗೆಡದೆ ಮುಂದಿನ ಬಾರಿ ಗೆಲ್ಲಲು ಪ್ರಯತ್ನ ಪಡಬೇಕೆಂದರು.ವಿದ್ಯಾರ್ಥಿನಿ ಶ್ರೀವರ್ಣ ಕ್ರೀಡಾರ್ಥಿಗಳಿಗೆ ಪ್ರಮಾಣ ವಚನ ಬೋಽಸಿದರು.ಪದ್ಮಲಕ್ಷ್ಮೀ ಉದ್ಘಾಟನಾ ಮಂತ್ರ ಪಠಿಸಿದರು.ದಕ್ಷಿಣ ಕ್ಷೇತ್ರ ಖೇಲ್ ಸಂಯೋಜಕ್ ಯು.ಪಿ.ಹರಿದಾಸ್, ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟದ ಸಂಯೋಜಕ್ ಕಿಶೋರ್ ಚೌವಾಣ್, ವಿದ್ಯಾಭಾರತಿ ಪ್ರಾಂತ ಕಾರ್ಯದರ್ಶಿ ವಸಂತ ಮಾಧವ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶಿವಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಹ ಖೇಲ್ ಕೂದ್ ಪ್ರಮುಖ್ ದೇವೆಂದ್ರ, ವಿವೇಕಾನಂದ ವಿದ್ಯಾಲಯದ ಸಂಚಾಲಕ ರವಿನಾರಾಯಣ ಅತಿಥಿಗಳನ್ನು ಗೌರವಿಸಿದರು.ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರು ಸತೀಶ್ ಕುಮಾರ್ ರೈ ಸ್ವಾಗತಿಸಿದರು.ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರ ಖೇಲ್ ಪ್ರಮುಖ್ ಕೆ.ಆರ್.ಕೆ. ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು.ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಭಾರತಿ ಖೇಲ್ ಪ್ರಮುಖ್ ಕರುಣಾಕರ ವಂದಿಸಿದರು.ಶಿಕ್ಷಕಿಯರಾದ ಸೌಮ್ಯ ಕುಮಾರಿ, ಸುಜಾತ ಕಾರ್ಯಕ್ರಮ ನಿರೂಪಿಸಿದರು.

606 ಕ್ರೀಡಾಪಟುಗಳು
ಪಂದ್ಯಾಟದಲ್ಲಿ 10 ಕ್ಷೇತ್ರಗಳಿಂದ 606 ಕ್ರೀಡಾಪಟುಗಳು ಭಾಗವಹಿಸಿದ್ದಾರೆ.ಬಾಲ ವರ್ಗದಲ್ಲಿ 20 ತಂಡ, ಕಿಶೋರ ವರ್ಗದಲ್ಲಿ 22 ತಂಡ, ತರುಣ ವರ್ಗದಲ್ಲಿ 20 ತಂಡಗಳ ನಡುವೆ ಹಣಾಹಣಿ ನಡೆಯಲಿದೆ.ಬೆಳಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಪಂದ್ಯಾಟ ನಡೆಯಲಿದೆ.ಇದಕ್ಕಾಗಿ 6 ಕ್ರೀಡಾಂಗಣಗಳನ್ನು ಸಿದ್ದಪಡಿಸಲಾಗಿದ್ದು, 4 ಕ್ರೀಡಾಂಗಣದಲ್ಲಿ ಈಗಾಗಲೇ ಪಂದ್ಯಾಟ ಪ್ರಾರಂಭವಾಗಿದೆ.ಪ್ರತಿ ಪಂದ್ಯಾಟಕ್ಕೆ ಸುಮಾರು 1.30 ಗಂಟೆಯ ಅವಧಿಯನ್ನು ನಿಗದಿಪಡಿಸಿಕೊಳ್ಳಲಾಗಿದೆ.ಮಳೆಯ ಹಿನ್ನೆಲೆಯಲ್ಲಿ ಅ.16ರಂದು ಬೆಳಗ್ಗಿನಿಂದಲೇ ಪಂದ್ಯಾಟ ಆರಂಭಿಸಲಾಗಿತ್ತು. ಸಂಜೆ ಕ್ರೀಡಾಪಟುಗಳನ್ನು ಸ್ವಾಗತಿಸುವ ಜಾಥಾವನ್ನು ಮಳೆಯ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು.

LEAVE A REPLY

Please enter your comment!
Please enter your name here