ಪರ್ಪುಂಜ ಶಾಲೆಯ ಜಯಮಾಲಾ, ಸವಣೂರು ಮೊಗರು ಶಾಲೆಯ ದಯಾಮಣಿ ಕೆ. ಆಯ್ಕೆ
ಸವಣೂರು : ಕಾವ್ಯ ಶ್ರೀ ಸೇವಾ ಟ್ರಸ್ಟ್ ವತಿಯಿಂದ ನೀಡಲಾಗುವ ಅತ್ಯುತ್ತಮ ಅತಿಥಿ ಶಿಕ್ಷಕ ಪ್ರಶಸ್ತಿ -“ಶಿಕ್ಷಕ ರತ್ನ” ಪ್ರಶಸ್ತಿಗೆ ಪುತ್ತೂರಿನ ಇಬ್ಬರು ಅತಿಥಿ ಶಿಕ್ಷಕರು ಆಯ್ಕೆಯಾಗಿದ್ದಾರೆ.ಪುತ್ತೂರು ತಾಲೂಕಿನ ಪರ್ಪುಂಜ ಸ.ಹಿ.ಪ್ರಾ.ಶಾಲೆಯಲ್ಲಿ 5ವರ್ಷಗಳಿಂದ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯಮಾಲಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಯಮಾಲಾ ಅವರು ಕೆಯ್ಯೂರು, ಕುಟ್ಟಿನೋಪಿನಡ್ಕ,ಶಾಂತಿಗೋಡು, ಇಡ್ಯೊಟ್ಟು, ತಿಂಗಳಾಡಿ,ಸುಳ್ಯ “ಸ್ನೇಹ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸುಮಾರು 6ವರುಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದು, ಒಟ್ಟು 11ವರ್ಷಗಳಿಂದ ಅತಿಥಿ ಶಿಕ್ಷಕಿಯಾಗಿ ಸೇವೆಸಲ್ಲಿಸುತ್ತಿದ್ದಾರೆ.
ಕಡಬ ತಾಲೂಕಿನ ಸವಣೂರು ಮೊಗರು ಶಾಲೆಯಲ್ಲಿ ಕಳೆದ 4 ವರ್ಷಗಳಿಂದ ಅತಿಥಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ದಯಾಮಣಿ ಕೆ. ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ದಯಾಮಣಿ ಅವರು ಸವಣೂರು ಆರೇಲ್ತಡಿ ಸ.ಕಿ.ಪ್ರಾ.ಶಾಲೆಯಲ್ಲಿ 8 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಒಟ್ಟು ಸುಮಾರು 12ವರ್ಷದಿಂದ ಅತಿಥಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ಅ.18ರಂದು “ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದೆ.