ಪುತ್ತೂರು ಸೋಮವಾರ ಸಂತೆ: ಮುಖ್ಯ ಪ್ರವೇಶ ದ್ವಾರ ಬಂದ್ ಮಾಡಿ ಹಿಂಬದಿ ದ್ವಾರದಿಂದ ಸಂತೆ – ಜನ ವಿರಳ

0

ಪುತ್ತೂರು: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರ ದಿನದ ವಿಧಾನ ಪರಿಷತ್ ಉಪಚುನಾವಾಣೆಗೆ ಸಂಬಂಧಿಸಿ ನಗರಸಭೆ ಮತಗಟ್ಟೆ ಕೇಂದ್ರವಾದರೂ ಕಿಲ್ಲೆ ಮೈದಾನದಲ್ಲಿ ಸೋಮವಾರ ಸಂತೆ ಎಂದಿನಂತೆ ನಡೆಯುವ ರೀತಿಯಲ್ಲಿ ಕಿಲ್ಲೆ ಮೈದಾನದ ಮುಖ್ಯ ಪ್ರವೇಶ ದ್ವಾರ ಬಂದ್ ಮಾಡಿ ಹಿಂಬದಿಯ ದ್ವಾರದಿಂದ ಅವಕಾಶ ನೀಡಲಾಗಿದೆ.


ವಿಧಾನಪರಿಷತ್ ಚುನಾವಣೆಗೆ ನಗರಸಭೆ ಮತಗಟ್ಟೆ ಕೇಂದ್ರವಾದ್ದರಿಂದ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿಯಾಗಿರುವ ಹಿನ್ನಲೆಯಲ್ಲಿ ಸಂತೆಯನ್ನು ರದ್ದು ಗೊಳಿಸಿರುವ ಕುರಿತು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿತು. ಬಳಿಕ ಸಾರ್ವಜನಿಕರ ಮನವಿ ಮತ್ತು ಶಾಸಕರ ಸೂಚನೆಯಂತೆ ಸಂತೆಯನ್ನು ನಡೆಸುವಂತೆ ನಿರ್ಧರಿಸಿ ಚುನಾವಣೆಗೆ ತೊಂದರೆ ಆಗದಂತೆ ಕಿಲ್ಲೆ ಮೈದಾನದ ಪ್ರವೇಶ ದ್ವಾರ ಬಂದ್ ಮಾಡಿ ಚಿಣ್ಣರ ಪಾರ್ಕ್ ಬಳಿಯಲ್ಲಿನ ಕಿಲ್ಲೆ ಮೈದಾನದ ಪ್ರವೇಶದ್ವಾರದಿಂದ ಸಂತೆಗೆ ಸಂಪರ್ಕ ಕಲ್ಪಿಸುವಂತೆ ಸೂಚಿಸಿ ಸಂತೆ ನಡೆಸಲು ಅವಕಾಶ ನೀಡಲಾಯಿತು. ಆದರೆ ಇಂದು ಸಾರ್ವಜನಿಕರಿಗೆ ಗೊಂದಲವಾಗಿದ್ದು ಸಂತೆಯಲ್ಲಿ ಜನಸಂಖ್ಯೆ ವಿರಳವಾಗಿದೆ.


ನಗರಸಭೆಯ ಎರಡು ಕಡೆ ರಸ್ತೆಗೆ ಬ್ಯಾರಿಕೇಡ್ ಅಳವಡಿಕೆ:.
ನಗರಸಭೆ ಮತದಾನ ಕೇಂದ್ರವಾಗಿದರಿಂದ ಆ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಹಾಗಾಗಿ ನಗರಸಭೆಗೆ ಸಂಪರ್ಕ ಕಲ್ಪಿಸುವ ಎರಡು ಕಡೆ ಬ್ಯಾರಿಕೇಡ್ ಅಳವಡಿಸಲಾಗಿದೆ.

LEAVE A REPLY

Please enter your comment!
Please enter your name here