puttur: ಅ.20 ರಂದು ಶಾರದಾ ಸಮೂಹ ಸಂಸ್ಥೆಗಳು ತಲಪಾಡಿ ಮಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರ ಮಟ್ಟದ ಬಾಲ ವರ್ಗದ ಕಥಾಕಥನ ಸ್ಪರ್ಧೆಯಲ್ಲಿ ರಾಜಗೋಪಾಲ್ ಭಟ್ ಹಾಗೂ ಸವಿತಾ ಪಟ್ಟೆ ದಂಪತಿಗಳ ಪುತ್ರ 7ನೇ ತರಗತಿ ವಿದ್ಯಾರ್ಥಿ ಅಭಿನವರಾಜ್ ಎನ್ ಪ್ರಥಮ ಸ್ಥಾನ ಪಡೆದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.
ಹಾಗೂ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳು ಎಂಬ ವಿಷಯದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಶಿವರಾಮ ರೈ ಪಿ ಹಾಗೂ ಹಿಮಲಾಕ್ಷಿ ಪಂಬೆತಡ್ಕ ದಂಪತಿಗಳ ಸುಪುತ್ರಿ ಕುಮಾರಿ ಹಂಶಿತಾ 10ನೇ ತರಗತಿ ಪ್ರಥಮ ಸ್ಥಾನ ಪಡೆದು ರಾಜಸ್ಥಾನದ ಜೈಪುರದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪ್ರಮೇಯ ಹಾಗೂ ಉಪ ಪ್ರಮೇಯ ಸಿದ್ಧಾಂತಗಳ ಗಣಿತ ಮಾದರಿಯಲ್ಲಿ ಶ್ರೀಹರಿ ಆರ್ ಭರ್ಣೇಕರ್ ಹಾಗೂ ಜಯಮಾಲಾ ಕೆ ಪಡ್ರೆ ದಂಪತಿಗಳ ಸುಪುತ್ರಿ ಹತ್ತನೇ ತರಗತಿ ವಿದ್ಯಾರ್ಥಿನಿ ಪೂರ್ವಿ ಭರ್ಣೆಕರ್ ಪ್ರಥಮ ಸ್ಥಾನ ಪಡೆದು ಒಡಿಶಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳನ್ನು ಶಾಲಾ ಮುಖ್ಯ ಗುರುಗಳು ಅಧ್ಯಾಪಕ ವೃಂದ ಸೇರಿದಂತೆ ಆಡಳಿತ ಮಂಡಳಿಯವರು ಅಭಿನಂದಿಸಿರುತ್ತಾರೆ.