‌ಕೂರ್ನಡ್ಕ: ʼಐಡಿಯಲ್‌ ಚಿಕನ್‌ ಸೆಂಟರ್‌ʼ ಉಚಿತ ಕೂಪನ್ ಡ್ರಾ ಫಲಿತಾಂಶ

0

ಪುತ್ತೂರು: ಕೂರ್ನಡ್ಕದಲ್ಲಿ ಆರಂಭಗೊಂಡು ತನ್ನ ಗುಣಮಟ್ಟದ ಸೇವೆಯಿಂದ ಪುತ್ತೂರಿನ ಚಿಕನ್‌ ಪ್ರಿಯರ ಮನೆಮಾತಾಗಿರುವ ʼಐಡಿಯಲ್‌ ಚಿಕನ್‌ ಸೆಂಟರ್‌ʼ 2ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಇದರ ಅಂಗವಾಗಿ ಗ್ರಾಹಕರಿಗೆ ನೀಡಲಾದ ಉಚಿತ ಬಹುಮಾನ ಕೂಪನ್‌ ಗಳ ಡ್ರಾ ಅ.20ರಂದು ನಡೆಯಿತು.

ಅತಿಥಿಗಳಾಗಿ ಆಗಮಿಸಿದ್ದ ಪುತ್ತೂರು ನಗರ ಸಭೆ ಉಪಾಧ್ಯಕ್ಷ ಬಾಲಚಂದ್ರ ಕೆ, ಕೂರ್ನಡ್ಕ ಪೀರ್‌ ಮೊಹಲ್ಲಾ ಜುಮಾ ಮಸೀದಿ ಅಧ್ಯಕ್ಷ ಕೆ ಎಚ್‌ ಖಾಸಿಂ ಹಾಜಿ, ಹುಸೈನ್‌ ದಾರಿಮಿ ರೆಂಜಲಾಡಿ, ಯುವಕ ಕಾಂಗ್ರೇಸ್‌ ಮಾಜಿ ಅಧ್ಯಕ್ಷ ಮೊೖದೀನ್‌ ಅರ್ಷಾದ್‌ ದರ್ಬೆ, ಮರಿಯಂ ಕಾಂಪ್ಲೆಕ್ಸ್‌ ಮಾಲಕ ಮಹಮ್ಮದ್‌ ಹಾರೀಸ್‌, ಹಾಜಿ ಅಬ್ದುಲ್‌ ರಹಿಮಾನ್‌ ಬಾಳಾಯ,ಐಡಿಯಲ್‌ ಚಿಕನ್‌ ಸಂಸ್ಥೆಯ ನಾಸೀರ್‌ ಕಂಬಳಬೆಟ್ಟು, ಡ್ರಾ ನೆರವೇರಿಸಿ ಬಹುಮಾನ ವಿತರಿಸಿದರು.

ಪ್ರಥಮ ಬಹುಮಾನವನ್ನು ದಿನೇಶ್‌ ಕುಮಾರ್‌(0077), ದ್ವಿತೀಯ ಬಹುಮಾನ ಸಾದ್‌ ಇಝಾನ್‌ (0770) ಮತ್ತು ತೃತೀಯ ಬಹುಮಾಣ ಅಶಾಝ್‌ ಅಶ್ರಫ್‌ (0855) ಗೆದ್ದು ಕೊಂಡಿದ್ದಾರೆ. ಇನ್ನುಳಿದಂತೆ 10 ಆಕರ್ಷಕ ಬಹುಮಾನ ಶೋಭಾ (0454), ಮಹಮ್ಮದ್‌ ಝೈನ್‌ (0526), ನಸೀಮಾ(0321), ಶೇಕ್‌ ಉಮ್ಮರ್‌ ಫಾರೂಕ್‌ (0066), ರಿಶಾನ್‌ ಸಾಲ್ಮರ(0276), ಅಬೂ ತವ್ವಾಬ್‌ (0877), ಸಮೀರ್‌ ( 0441), ಮುಮ್ತಾಝ್‌ (0334), ಮುಶ್ಪಾಮ್‌ (0791), ರಿಯಾಝ್(0658)‌ ಪಾಲಾಗಿದೆ.

ಸಂಸ್ಥೆಯ ಮಾಲಕ ಝುಬೈರ್‌ ಬುಳೇರಿಕಟ್ಟೆ, ಸೀದಿ ಹಾಜಿ ಬುಳೇರಿಕಟ್ಟೆ, ಖಲಂದರ್‌ ಪರ್ತಿಪ್ಪಾಡಿ, ನೌಶೀನ್‌ ಬದ್ರಿಯಾ ,ಪುತ್ತೂರು ಕಮ್ಯುನಿಟಿ ಸೆಂಟರ್‌ ನ ಇಂತಿಯಾಜ್‌ ಪಾರ್ಲೆ,ಇಸಾಖ್‌ ವಿಟ್ಲ ಮತ್ತು ಮಹಮ್ಮದ್‌ ಪಿ ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಾಕಿರ್‌ ಅಳಕೆಮಜಲು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here