ಪುತ್ತೂರು: ರೈ ಎಸ್ಟೇಟ್ ಆಂಡ್ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಗಳ ಕುರಿತು ಸ್ವರ ಮಾಧುರ್ಯ ಸಂಗೀತ ಬಳಗದ ಸೋನಿಕಾ ಜನಾರ್ದನ್ ಸಾರಥ್ಯದ ತಂಡ ಹೊರ ತಂದಿರುವ ಮಂಗಳೂರಿನ ಬಾಲ ಪ್ರತಿಭೆ ಅಶ್ಮಿತ್ ಎ.ಜೆ ಮತ್ತು ಸೋನಿಕಾ ಜನಾರ್ದನ್‌ರವರ ಸುಮಧುರ ಕಂಠದಲ್ಲಿ ಮೂಡಿಬಂದಿರುವ ‘ಜನಸೇವಕ ಜನ ನಾಯಕ’ ಎಂಬ ವೀಡಿಯೋ ಆಲ್ಬಂ ಹಾಡಿನ ಟ್ರೇಲರ್ ಅನ್ನು ಅ.21 ರಂದು ಪುತ್ತೂರು ಕೊಂಬೆಟ್ಟು ಕ್ರೀಡಾಂಗಣದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಬಿಡುಗಡೆಗೊಳಿಸಿದರು.
ಪುತ್ತೂರು ಸುದಾನ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ವಿಜಯ ಹಾರ್ವಿನ್‌ರವರ ನಿರ್ಮಾಣದಲ್ಲಿ ಮೂಡಿಬಂದಿರುವ ವೀಡಿಯೋ ಆಲ್ಬಂ ಸಾಂಗ್‌ಗೆ ಪುತ್ತೂರು ಸವಿ ಸಂಗೀತ್ ಸ್ಟುಡಿಯೋದ ಅಶ್ವಿನ್ ಬಾಬಣ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ರೈ ಎಜುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಶಾಂತಿನಗರ, ಜೆಸಿಐ ಹಿಲ್ಸ್ ಪುತ್ತೂರು ಇದರ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರ ಸಂಪೂರ್ಣ ಸಹಕಾರದೊಂದಿಗೆ ಸಾಂಗ್ ಮೂಡಿಬಂದಿದೆ. ಶೀನಪ್ಪ ಪೂಜಾರಿ ಮಂಗಳೂರು, ಹಾರೂನ್ ಅಖ್ತರ್ ದಾವಣಗೆರೆ, ಸಿಶೇ ಕಜೆಮಾರ್, ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ, ದಾಮೋದರ್ ಮುರರವರು ಸಹಕಾರ ನೀಡಿದ್ದಾರೆ. ವೀಡಿಯೋ ಸಾಂಗ್ ಬಿಡುಗಡೆ ಸಂದರ್ಭದಲ್ಲಿ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಸಹಿತ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.
ಬಾಲ ಪ್ರತಿಭೆಗಳ ಕಂಠದಿಂದ ಮೂಡಿಬಂದ ಹಾಡು
ಜನ ಸೇವಕ-ಜನ ನಾಯಕ ವೀಡಿಯೋ ಆಲ್ಬಂ ಸಾಂಗ್‌ನಲ್ಲಿ ಇಬ್ಬರು ಬಾಲಪ್ರತಿಭೆಗಳು ಧ್ವನಿಗೂಡಿಸಿದ್ದಾರೆ. ಮಂಗಳೂರು ಆರನೇ ಜೆಎಂಎಫ್ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಬಿ.ಪುತ್ತೂರುರವರ ಪುತ್ರಿ ಸೋನಿಕಾ ಜನಾರ್ದನ್ ಸಾರಥ್ಯದ ತಂಡ ಈ ವೀಡಿಯೋ ಆಲ್ಬಂ ಸಾಂಗ್ ಹೊರತಂದಿದ್ದಾರೆ. ಇದರಲ್ಲಿ ಸೋನಿಕಾ ಜನಾರ್ದನ್‌ರೊಂದಿಗೆ ಅಶ್ಮಿತ್ ಎ.ಜೆ ಧ್ವನಿ ನೀಡಿದ್ದಾರೆ. ಸೋನಿಕಾ ಜನಾರ್ದನ್‌ರವರು ಮಂಗಳೂರು ಬೆಸೆಂಟ್ ಇಂಗ್ಲೀಷ್ ಮೀಡಿಯಂ ಶಾಲೆಯ ಯುಕೆಜಿ ಪುಟಾಣಿಯಾಗಿದ್ದು ಅಶ್ಮಿತ್ ಎ.ಜೆಯವರು ಮಂಗಳೂರು ಸೈಂಟ್ ಅಲೋಶಿಯಸ್ ಶಾಲೆಯ 6 ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಆಲ್ಬಂ ಸಾಂಗ್ ಬಿಡುಗಡೆ ಸಮಯದಲ್ಲಿ ಸೋನಿಕಾ ಜನಾರ್ದನ್‌ರವರ ತಾಯಿ ಪ್ರಮೀಳಾ ಜನಾರ್ದನ್, ತಂದೆ ಜನಾರ್ದನ್ ಉಪಸ್ಥಿತರಿದ್ದರು. ಸಂಪೂರ್ಣ ಹಾಡು ನ.2 ರಂದು ನಡೆಯುವ ಅಶೋಕ ಜನಮನ 2024 ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ.