ನೆಕ್ಕಿಲಾಡಿ: ಬಿಜೆಪಿ ಬೆಂಬಲಿತ ಸದಸ್ಯರಿಂದ ಮತದಾನ
ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಎಲ್ಲಾ 11 ಸದಸ್ಯರು ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದು, ಗ್ರಾ.ಪಂ.ನಲ್ಲಿದ್ದ ವಿಧಾನ ಪರಿಷತ್ ಉಪಚುನಾವಣೆಯ ಮತದಾನ ಕೇಂದ್ರಕ್ಕೆ ಎಲ್ಲಾ ಒಟ್ಟಾಗಿ ಬಂದು ಮತ ಚಲಾಯಿಸಿದರು.
ಈ ಸಂದರ್ಭ ಬಿಜೆಪಿ ಪ್ರಮುಖರಾದ ಪುರುಷೋತ್ತಮ ಮುಂಗ್ಲಿಮನೆ, ಸದಾನಂದ ನೆಕ್ಕಿಲಾಡಿ, ರಾಜೇಶ್ ಶಾಂತಿನಗರ ಹಾಗೂ ೩೪ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ, ಉಪಾಧ್ಯಕ್ಷ ಹರೀಶ್ ಡಿ., ಸದಸ್ಯರಾದ ಪ್ರಶಾಂತ ನೆಕ್ಕಿಲಾಡಿ, ಸ್ವಪ್ನ, ವಿಜಯಕುಮಾರ್, ವೇದಾವತಿ, ತುಳಸಿ, ಹರೀಶ ಕೆ., ಕೆ. ರಮೇಶ ನಾಯ್ಕ್, ಎ. ರತ್ನಾವತಿ, ಗೀತಾ ಉಪಸ್ಥಿತರಿದ್ದರು.

ಉಪ್ಪಿನಂಗಡಿ: ಬಿಜೆಪಿ ಬೆಂಬಲಿತ ಸದಸ್ಯರಿಂದ ಮತದಾನ
ಇಲ್ಲಿನ ಗ್ರಾ.ಪಂ.ನಲ್ಲಿ ವಿಧಾನ ಪರಿಷತ್ ಉಪಚುನಾವಣೆಯ ಮತದಾನ ಕೇಂದ್ರಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಬಂದು ಮತ ಚಲಾಯಿಸಿದರು.
ಈ ಸಂದರ್ಭ ಚುನಾವಣಾ ಪ್ರಭಾರಿ ಆರ್.ಸಿ. ನಾರಾಯಣ, ಮಂಡಲ ಉಪಾಧ್ಯಕ್ಷ ವಿದ್ಯಾಧರ ಜೈನ್, ಬಿಜೆಪಿ ಮುಖಂಡರಾದ ಉಮೇಶ್ ಶೆಣೈ, ಪ್ರಸಾದ್ ಬಂಡಾರಿ, ಚಂದ್ರಶೇಖರ ಮಡಿವಾಳ, ಗ್ರಾ.ಪಂ. ಸದಸ್ಯರಾದ ಸುರೇಶ್ ಅತ್ರೆಮಜಲು, ಧನಂಜಯ ನಟ್ಟಿಬೈಲು, ಉಷಾಚಂದ್ರ ಮುಳಿಯ, ಲೊಕೇಶ ಬೆತ್ತೋಡಿ, ವನಿತಾ ಆರ್ತಿಲ, ಜಯಂತಿ ರಂಗಾಜೆ, ರುಕ್ಮಿಣಿ, ಉಷಾ ನಾಯ್ಕ, ಶೋಭಾ ನಟ್ಟಿಬೈಲು ಮತ್ತಿತರರು ಉಪಸ್ಥಿತರಿದ್ದರು.
ಬಜತ್ತೂರು: ಬಿಜೆಪಿ ಬೆಂಬಲಿತ ಸದಸ್ಯರಿಂದ ಮತದಾನ
ಇಲ್ಲಿನ ಬಜತ್ತೂರು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಮತದಾನ ನಡೆಸಿದರು.
ಈ ಸಂದರ್ಭಬಿಜೆಪಿ ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷ ಮುಕುಂದ ಗೌಡ ಬಜತ್ತೂರು, ಶಕ್ತಿ ಕೇಂದ್ರದ ಪ್ರಮುಖ್ ಆನಂದ ಮೇಲೂರು, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಬಜತ್ತೂರು ಶಕ್ತಿ ಕೇಂದ್ರದ ನಿಕಟಪೂರ್ವ ಪ್ರಮುಖ್ ವಸಂತ ಪಿಜಕ್ಕಳ, ಪುಣಚ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕಿರಣ್, ಗ್ರಾ.ಪಂ. ಅಧ್ಯಕ್ಷ ಗಂಗಾಧರ ನೆಕ್ಕರಾಜೆ, ಸದಸ್ಯ ಸಂತೋಷ್ ಕಮಾರ್ ಪಂರ್ದಾಜೆ, ಮೋನಪ್ಪ ಬೆದ್ರೋಡಿ ಉಪಸ್ಥಿತರಿದ್ದರು.
ಹಿರೇಬಂಡಾಡಿ: ಕಾಂಗ್ರೆಸ್ ಬೆಂಬಲಿತ ಸದಸ್ಯರಿಂದ ಮತದಾನ
ಇಲ್ಲಿನ ಹಿರೇಬಂಡಾಡಿ ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಿರೇಬಂಡಾಡಿ ಗ್ರಾ.ಪಂ.ನ ವಿಧಾನ ಪರಿಷತ್ ಉಪಚುನಾವಣೆಯ ಮತದಾನ ಕೇಂದ್ರದಲ್ಲಿ ಮತದಾನ ನಡೆಸಿದರು.
ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ಸತೀಶ್ ಶೆಟ್ಟಿ ಹೆನ್ನಾಳ, ಸವಿತಾ ಹರೀಶ್, ಗೀತಾ ದಾಸರಮೂಲೆ ಉಪಸ್ಥಿತರಿದ್ದರು.