ಎಡನೀರು ಶ್ರೀಗಳ ಶುಭಾಶೀರ್ವಾಚನದೊಡನೆ-ಐಕಾನಿಕ್ ಸೆರಾಮಿಕ್ಸ್ ಇದರ 2ನೇಯ ಶಾಖೆ ” ಐಕಾನಿಕ್ ಟೈಲ್ ಗ್ಯಾಲರಿ ಪುತ್ತೂರಿನಲ್ಲಿ ಅದ್ಧೂರಿ ಶುಭಾರಂಭ…

0

ಪುತ್ತೂರು : ಪ್ರತಿಷ್ಠಿತ ಬ್ರ್ಯಾಂಡೆಡ್ ಟೈಲ್ಸ್ ಮತ್ತು ಸ್ಯಾನಿಟರಿ ಸಾಮಗ್ರಿಗಳನ್ನೊಳಗೊಂಡ ಮಾರಾಟ ಮಳಿಗೆ ಐಕಾನಿಕ್ ಟೈಲ್ ಗ್ಯಾಲರಿ ಅ.22 ರಂದು ಇಲ್ಲಿನ ಕೇಪುಳು ಸರ್ಕಲ್ ಸಮೀಪದ ಶ್ರೀ ಗುರು ಆರ್ಕೇಡ್‌ನಲ್ಲಿ ಶುಭಾರಂಭಗೊಂಡಿತು.

ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮಳಿಗೆಯನ್ನು ಉದ್ಘಾಟಿಸಿ , ದೀಪ ಪ್ರಜ್ವಲನೆ ನೆರವೇರಿಸಿ , ಶುಭಾ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಸಂಸದ ಬ್ರಿಜೇಶ್ ಚೌಟ ,ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬನ್ನೂರು ಕೆಥೋಲಿಕ್ ಸಭಾ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವೆಸ್ ಕೂಡ ನೂತನ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹಾರೈಸಿದರು.


ಮಾಸ್ಟರ್ ಫ್ಲಾನರಿ ನಿರ್ದೇಶಕ ಅಕ್ಷಯ್ ಎಸ್.ಕೆ., ನಿರ್ಮಾಣ್ ಅಸೋಸಿಯೇಟ್ಸ್ ಮಾಲಕ ಸಚ್ಚಿದಾನಂದ, ಶ್ರೀ ಗುರು ಆರ್ಕೇಡ್ ಮಾಲಕ ಅರುಣ್ ಕುಮಾರ್ ,ಸಂಸ್ಥೆಯ ಆಡಳಿತ ನಿರ್ದೇಶಕಿ ಪ್ರೇಮಲತಾ ಎಂ., ನಿರ್ದೇಶಕರಾದ ರೇವತಿ ಸುಭಾಷ್ ಚಂದ್ರಬೋಸ್ ಮತ್ತು ರಮೇಶ್ ನೆನ್ನಣಿ ಹಾಗೂ ಗ್ರಾಹಕರು ಮತ್ತು ಐಕಾನಿಕ್ ಸಮೂಹ ಸಂಸ್ಥೆಯ ಸಿಬಂದಿಗಳು ಉಪಸ್ಥಿತರಿದ್ದರು.
ರವಿಚಂದ್ರ ಸುಳ್ಯ ಪ್ರಾರ್ಥನೆ ನೆರವೇರಿಸಿ , ವಿ.ಜೆ. ವಿಖ್ಯಾತ್ ಸುಳ್ಯ ನಿರ್ವಹಿಸಿ , ಸುರೇಶ್ ನೆಲ್ಲಿಕುಂಜೆ ವಂದಿಸಿದರು.

ಐಕಾನಿಕ್ ಸಂಸ್ಥೆಯ ಬಗ್ಗೆ….
ಐಕಾನಿಕ್ ಟೈಲ್ ಗ್ಯಾಲರಿಯು ಕಣ್ಣೂರಿನ ಕರಿವೆಲ್ಲೂರ್ ನಲ್ಲಿ ಐಕಾನಿಕ್ ಸೆರಾಮಿಕ್ಸ್ ಮಾತೃ ಸಂಸ್ಥೆಯನ್ನು ಹೊಂದಿದ್ದು , ಕಾಸರಗೋಡಿನ ಛಯ್ಯೊಂಮ್ ಬಳಿ ತನ್ನ ಮೊದಲ ಶಾಖೆಯನ್ನು ಆರಂಭಿಸಿ ಕಳೆದ ಕೆಲ ವರ್ಷಗಳಿಂದ ವಿಶ್ವಾಸಾರ್ಹ ವ್ಯವಹಾರ ಮೂಲಕ ಗ್ರಾಹಕ ಜನತೆಯ ಮನ ಗೆದ್ದಿದೆ. ಇದೀಗ ತನ್ನ ಎರಡನೆಯ ಶಾಖೆಯನ್ನು ಪುತ್ತೂರು ಹಾಗೂ ಸುತ್ತಲಿನ ತಾಲೂಕು ಕೇಂದ್ರಗಳ ಜನರ ಬೇಡಿಕೆ ಮೇರೆಗೆ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಪುತ್ತೂರಿನಲ್ಲೂ ವ್ಯವಹಾರ ಪ್ರಾರಂಭಿಸಿದೆ.


ಮಳಿಗೆಯಲ್ಲಿ ಬ್ಯಾಂಡೆಡ್, ಐಷರಾಮಿ ಟೈಲ್, ಸ್ಯಾನಿಟರಿ ಸಾಮಗ್ರಿಗಳನ್ನು ಪ್ರಮುಖ ಉತ್ಪಾದಕ ಸಂಸ್ಥೆಗಳಾದ ಕಜಾರಿಯಾ, ರ್ಯಾಕ್ , ಹಿಂದ್ವೇರ್, ಸೇರಾ , ಸೋಮಾನಿ, ವಿಟೇರೋ, ಜಾನ್ಸ್ಸನ್ ಹಾಗೂ ಇತರ ಟೈಲ್ಸ್ ಉತ್ಪಾದಕರಿಂದ ನೇರ ಖರೀದಿ ಮೂಲಕ ಗ್ರಾಹಕರಿಗೆ ನೀಡುತ್ತದೆ.
ಬಾತ್ ರೂಂ, ಮಾಡ್ಯೂಲರ್ ಕಿಚನ್ ಫಿಟ್ಟಿಂಗ್ಸ್ ಇಂಟೀರಿಯರ್ ಸಾಮಗ್ರಿಗಳೆಲ್ಲಾ ಅತ್ಯುತ್ತಮ ದರದಲ್ಲಿ ಸದಾ ಲಭ್ಯವಿದೆಯೆಂದು ಸಂಸ್ಥೆಯ ಆಡಳಿತ ನಿರ್ದೇಶಕಿ ಪ್ರೇಮಲತಾ ಎಂ., ನಿರ್ದೇಶಕರಾದ ರೇವತಿ ಸುಭಾಷ್ ಚಂದ್ರಬೋಸ್ ಮತ್ತು ರಮೇಶ್ ನೆನ್ನಣಿ ತಿಳಿಸಿ ,ಎಲ್ಲರ ಸಹಕಾರ ಕೋರಿದ್ದಾರೆ.

LEAVE A REPLY

Please enter your comment!
Please enter your name here