ಪುತ್ತೂರು: ನಿಮ್ಮ ಮನೆಗೆ ದೂರದ ನೆಂಟರು ಬಂದಿದ್ದಾರೆ.. ‘ನಿಮ್ಮ ಪುತ್ತೂರಿನಲ್ಲಿ ರಿಲ್ಯಾಕ್ಸ್ ಮಾಡ್ಕೊಂಡು ಎಂಜಾಯ್ ಮಾಡೋ ಪ್ಲೇಸ್ ಯಾವ್ದಾದ್ರೂ ಇದ್ಯಾ..?’ ಎಂದು ಕೇಳಿದ್ರೆ ನೀವು ಥಟ್ ಅಂತ ಹೇಳಬಹುದಾದ ಹೆಸರು ‘ರಿವರ್ ಕ್ವೀನ್ ಕೆಫೆ’!. ಯೆಸ್, ಕುಟುಂಬ ಸದಸ್ಯರೆಲ್ಲರೂ ಜಾಲಿ ಮೂಡಿನಲ್ಲಿ ಟೈಂ ಪಾಸ್ ಮಾಡ್ಲಿಕ್ಕೆ ಮತ್ತು ಆ ಮೂಲಕ ಮೈ-ಮನಸ್ಸುಗಳನ್ನು ರಿಲ್ಯಾಕ್ಸ್ ಮಾಡಿಕೊಳ್ಳಲೆಂದೇ ಪುತ್ತೂರಿನಿಂದ 15 ಕಿ.ಮೀ ದೂರದಲ್ಲಿ ಕುಮಾರಧಾರೆಯ ತಟದಲ್ಲಿ ಕುದ್ಮಾರಿನ ಶಾಂತಿಮೊಗರು ಬ್ರಿಡ್ಜ್ ಬಳಿ ತಲೆ ಎತ್ತಿ ನಿಂತಿದೆ ಈ ‘ರಿವರ್ ಕ್ವೀನ್ ಕೆಫೆ’.
ಇಲ್ಲಿನ ನೋಟವೇ ನಮ್ಮನ್ನು ಸೆಳೆಯುವಂತಿದೆ. ಒಂದೆಡೆ ಸಾವಧಾನವಾಗಿ ಹರಿಯುತ್ತಿರುವ ಕುಮಾರಧಾರಾ ನದಿ, ಇದರ ಇಕ್ಕೆಲಗಳಲ್ಲಿ ಹಸಿರಿನ ಸೊಬಗು, ಕುಮಾರಧಾರೆಗೆ ನಿರ್ಮಾಣಗೊಂಡಿರುವ ವಿಶಾಲ ಸೇತುವೆ, ನಮ್ಮ ವಿರಾಮದ ಸಮಯವನ್ನು ‘ಗುಡ್ ಟೈಂ’ ಮಾಡಲು ಇಷ್ಟು ಸಾಕಲ್ಲವೇ..?
ಏನೇನಿದೆ ರಿವರ್ ಕ್ವೀನ್ ಕೆಫೆಯಲ್ಲಿ..?
ಇಂತಹ ಮನಮೋಹ ಪರಿಸರದಲ್ಲಿ ಇರುವ ಈ ರಿವರ್ ಕ್ವೀನ್ ಕೆಫೆಗೆ ನೀವು ವಿಸಿಟ್ ಮಾಡಿದ್ರೆ ನಿಮಗಿಲ್ಲಿ ‘ಎಂಟರ್ಟೈನ್ಮೆಂಟ್ ಅನ್ ಲಿಮಿಟೆಡ್..!’. ಶಾಂತವಾಗಿ ಹರಿಯುತ್ತಿರುವ ಕುಮಾರಧಾರಾ ನದಿಯಲ್ಲಿ ಬೋಟಿಂಗ್, ಜೆಟ್ ಸ್ಕೀ, ಕಯಾಕಿಂಗ್, ಇದ್ಯಾವುದೂ ಬೇಡ ಅಂದ್ರೆ ಜೋಡಿಗಳಿಗಿದೆ ಪೆಡಲ್ ಬೋಟಿಂಗ್..! ಹೀಗೆ, ನೀವಿಲ್ಲಿಗೆ ಫ್ಯಾಮಿಲಿ ಸಹಿತ ಬಂದ್ರೆ, ಎಲ್ಲಾ ವಯೋಮಾನದವರಿಗೆ ಸೆಟ್ ಆಗುವ ರೀತಿಯ ಬೋಟಿಂಗ್ ಫೆಸಿಟಿಲಿ ಇಲ್ಲಿದೆ. ನೀವು ಎಲ್ಲಾ ಟೆನ್ಷನ್ ಬಿಟ್ಟು ಕುಮಾರಧಾರೆಯಲ್ಲಿ ರಿಲ್ಯಾಕ್ಸ್ ಆಗಿ ವಿಹರಿಸಿದ್ರೆ ಆಯ್ತು ಅಷ್ಟೇ..! ಹ್ಞಾಂ.. ಅಂದ ಹಾಗೆ ನದಿಯ ಒಡಲಿನಲ್ಲಿ ವಿಹರಿಸುವಾಗ ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಸೇಫ್ಟಿ ಬಗ್ಗೆ ಚಿಂತೆ ಬೇಡ.. ಇದಕ್ಕೆ ಅಗತ್ಯವಿರುವ ಲೈಫ್ ಗಾರ್ಡ್, ಸೇಫ್ಟೀ ಜಾಕೆಟ್, ಫ್ಲೋಟಿಂಗ್ ಬಾಲ್ ಮೊದಲಾದ ಸುರಕ್ಷತಾ ಪರಿಕರಗಳನ್ನು ನಿಮಗೆ ತೊಡಿಸಿಯೇ ನಿಮ್ಮನ್ನು ನದಿಗಿಳಿಸುತ್ತಾರೆ ‘ರಿವರ್ ಕ್ವೀನ್ ಕೆಫೆ’ಯ ಸ್ಟಾಫ್ ಗಳು!
ನೀರಾಟವಾಡಿದ ಮೇಲೆ ಸುಸ್ತಾಗಿ ಏನಾದ್ರೂ ತಿನ್ಬೇಕು ಅಂದ್ರೆ, ನಿಮ್ಮಿಷ್ಟದ ಲೈಟ್ ಫುಡ್ ಗಳೂ ಸಹ ಇಲ್ಲಿ ಲಭ್ಯವಿದೆ. ನಿಮಗೆ ಬೇಕಾದ ಫುಡ್ ಗಳನ್ನು ಆರ್ಡರ್ ಮಾಡಿ ನದಿ ಮತ್ತು ಸುತ್ತಲಿನ ಪರಿಸರದ ಸೌಂದರ್ಯವನ್ನು ಸವಿಯುತ್ತಾ ಫುಡ್ ಟೇಸ್ಟ್ ಮಾಡೋದ್ರಲ್ಲಿ ಇರೋ ಖುಷಿಯೇ ಬೇರೆ..! ಇನ್ನು, ಇಲ್ಲಿ ಆರ್ಚರಿ ಮತ್ತು ಶೂಟಿಂಗ್ ಗೇಮ್ ಗಳನ್ನೂ ಆಡುವ ಅವಕಾಶವಿದೆ (ಮಕ್ಕಳಿಗೆ ಈ ಸೌಲಭ್ಯವಿಲ್ಲ). ಮಳೆಗಾಲ ಬಹುತೇಕ ಮುಗಿದು ಪ್ರಕೃತಿ ಹಸುರುಟ್ಟು ಸಂಭ್ರಮಿಸುವ ಕಾಲವಿದು. ಕುಮಾರಧಾರೆಯ ಒಡಲೂ ತುಂಬಿದ್ದು, ಈ ನೋಟವೇ ಚಿತ್ತಾಕರ್ಷಕ. ಮಳೆಗಾಲದ ಬಳಿಕ ಇದೀಗ ‘ರಿವರ್ ಕ್ವೀನ್ ಕೆಫೆ’ ಅಕ್ಟೋಬರ್ 12ರಿಂದ ರಿ ಓಪನ್ ಆಗಿದ್ದು, ನಿಮ್ಮ ವೀಕೆಂಡನ್ನು ಅರ್ಥಪೂರ್ಣವಾಗಿ ನಿಸರ್ಗದ ನಡುವೆ ಕಳೆಯಲು ಇದಕ್ಕಿಂತ ಬೆಸ್ಟ್ ಚಾಯ್ಸ್ ಈ ಭಾಗದಲ್ಲಿರಲಾರದು.
ಟೈಮಿಂಗ್ಸ್ ಮತ್ತು ಬುಕ್ಕಿಂಗ್ಸ್ ಹೇಗೆ..?
‘ರಿವರ್ ಕ್ವೀನ್ ಕೆಫೆ’ಯಲ್ಲಿ ವಾಟರ್ ಅಡ್ವೆಂಚರ್ ಬೆಳಿಗ್ಗೆ 10 ರಿಂದ ಸಾಯಂಕಾಲ 6 ಗಂಟೆಯವರೆಗೆ ನಡೆಸಲು ಅವಕಾಶವಿದೆ. ಇಲ್ಲಿನ ಕೆಫೆ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತದೆ. ನೀವು ಮೊದಲೇ ಬುಕ್ಕಿಂಗ್ ಮಾಡಿಯೂ ಇಲ್ಲಿಗೆ ಭೇಟಿ ನೀಡಬಹುದು. ಬುಕ್ಕಿಂಗ್ ಗಾಗಿ 9535604303 ನಂಬರ್ ಗೆ ಕಾಲ್ ಮಾಡಿದ್ರೆ ಆಯ್ತು. ವಾರದ ಏಳೂ ದಿನ ಕಾರ್ಯಾಚರಿಸುವ ಈ ಕೆಫೆಗೆ ನೀವೊಂದು ದಿನ ಫಿಕ್ಸ್ ಮಾಡ್ಕೊಂಡು ನಿಮ್ಮ ಫ್ಯಾಮಿಲಿ ಮೆಂಬರ್ಸ್ ಜೊತೆ, ಫ್ರೆಂಡ್ಸ್ ಜೊತೆ ಹೋಗಿ ಬನ್ನಿ.. ಪ್ರಕೃತಿ ಸೌಂದರ್ಯದ ಜೊತೆ ಸಾಹಸಮಯ ವಾಟರ್ ಅಡ್ವೆಂಚರನ್ನು ಆಸ್ವಾದಿಸಿ, ನಿಮ್ಮ ಔಟಿಂಗನ್ನು ಸ್ಮರಣೀಯವಾಗಿಸಿ.