ವಿಸ್ತೃತ ಮಳಿಗೆಯನ್ನು ಉದ್ಘಾಟಿಸಿ ,ಶುಭ ಹಾರೈಸಿದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ
ಅತ್ಯುತ್ತಮ ದರ್ಜೆಯ ಕಂಪ್ಯೂಟರ್ , ಲ್ಯಾಪ್ ಟಾಪ್ ಗಳೆಲ್ಲಾ 50% ರಿಯಾಯಿತಿ ಜತೆ ವ್ಯಾರಂಟಿಯೊಂದಿಗೆ ಲಭ್ಯ…
ಪುತ್ತೂರು: ಕಳೆದ ಏಳು ವರ್ಷಗಳಿಂದ ನವೀಕರಿಸಿದ ಹಲವಾರು ಕಂಪನಿಗಳು ಹೊಸ ಹೊಸ ತಂತ್ರಜ್ಞಾನದ ಲ್ಯಾಪ್ಟಾಪ್ ಮತ್ತು ಡೆಸ್ಕ್ಟಾಪ್ ಅದರಲ್ಲೂ ಪ್ರಮುಖವಾಗಿ ಮ್ಯಾಕ್ಬುಕ್ ಮತ್ತು ವಿಂಡೋಸ್ , ಗೇಮೀಂಗ್ ಕಂಪ್ಯೂಟರ್, ರೆಂಟಲ್ ಕಂಪ್ಯೂಟರ್ (ಬಾಡಿಗೆ )ಬಿಲ್ಲಿಂಗ್ ಸಾಫ್ಟ್ ವೇರ್ ಸಹಿತ ಎಲ್ಲಾ ರೀತಿಯ ಕಂಪ್ಯೂಟರ್ ಬಿಡಿಭಾಗಗಳು, ಪ್ರಿಂಟರ್, ಸಿಸಿಟಿವಿ ಅಳವಡಿಕೆ, ಬಯೋಮೆಟ್ರಿಕ್ ಅಟೆಂಡೆನ್ಸ್ ಉಪಕರಣಗಳ ಮಾರಾಟ ಸೇವಾ ಮಳಿಗೆ ಇಲ್ಲಿನ ಮುಖ್ಯ ರಸ್ತೆ ಮಹಾಲಸ ಆರ್ಕೇಡ್ ಇಲ್ಲಿ ವ್ಯವಹರಿಸುತ್ತಿರುವ ಸುಳ್ಯ ಮತ್ತು ಮಂಗಳೂರಿನಲ್ಲಿ ಶಾಖೆ ಹೊಂದಿರುವಂಥ, ಅನೂಪ್ ಕೆ.ಜೆ ಯವರ ಮಾಲೀಕತ್ವದ ಕೋರ್ ಟೆಕ್ನಾಲಜೀಸ್ ವಿಸ್ತೃತ ಗೊಂಡು ಅ. 24ರಂದು ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ಸುದ್ದಿ ಸಮೂಹ ಸಂಸ್ಥೆ ಇದರ ಆಡಳಿತ ನಿರ್ದೇಶಕರಾದ ಡಾ. ಯು.ಪಿ. ಶಿವಾನಂದ ಉದ್ಘಾಟಿಸಿ ಹಾರೈಸಿದರು. ಶ್ಯಾಮ್ ಜುವೆಲ್ಸ್ ಪ್ರೈ .ಲಿ. ಇದರ ಆಡಳಿತ ನಿರ್ದೇಶಕರಾದ ಕೇಶವ ಪ್ರಸಾದ್ ಮುಳಿಯ ದೀಪ ಪ್ರಜ್ವಲನೆ ನೆರವೇರಿಸಿದರು. ವರ್ತಕ ಸಂಘದ ಅಧ್ಯಕ್ಷರಾದ ವಾಮನ ಪೈ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹರಸಿದರು.
ಈ ವೇಳೆ ಎವಿಜಿ ಅಸೋಸಿಯೇಟ್ಸ್ ಇದರ ಮಾಲೀಕ ಎ.ವಿ.ನಾರಾಯಣ ಮರಿಕೆ ಸಾವಯವ ಮಳಿಗೆಯ ಸುಹಾಸ್ ಮರಿಕೆ, ಮಾಲೀಕರ ತಂದೆ ತಾಯಿ ನಿವೃತ್ತ ಬ್ಯಾಂಕ್ ಉದ್ಯೋಗಿ ಜನಾರ್ಧನ ಮತ್ತು ಕುಸುಮ ಜನಾರ್ಧನ ದಂಪತಿ, ಅತ್ತೆ -ಮಾವ ರುಕ್ಮಯ ಗೌಡ ಕಮಲ ರುಕ್ಮಯ ದಂಪತಿ ಸಹಿತ ಸಂಸ್ಥೆ ಸಿಬ್ಬಂದಿಗಳಾದ ಚಂದ್ರಹಾಸ ಶೆಟ್ಟಿಗಾರ್, ಕೀರ್ತನ್ ಭಟ್, ಸುಬ್ರಹ್ಮಣ್ಯ ಶೆಟ್ಟಿ, ಆಶಿಶ್, ಆದರ್ಶ್ ಮತ್ತು ಸೌಮ್ಯ ಹಾಜರಿದ್ದರು.
ಪ್ರಥಮ ಗ್ರಾಹಕರಾಗಿ ಸುಹಾಸ್ ಮರಿಕೆ ಕಂಪ್ಯೂಟರ್ ಖರೀದಿಸಿದರು. ಮಾಲೀಕ ಅನೂಪ್ ಕೆ.ಜೆ ಎಲ್ಲರನ್ನು ಸ್ವಾಗತಿಸಿ, ಸಹಕಾರ, ಬೆಂಬಲ ಯಾಚಿಸಿದರು. ವಿ.ಜೆ. ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.