





ಪುತ್ತೂರು: ಕಳೆದ ಹಲವು ವರ್ಷಗಳಿಂದ ಬೊಳುವಾರಿನ ಸೂರ್ಯಪ್ರಭ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೆಲ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್ನ ಕಚೇರಿಯು ಅ.24ರಂದು ಉರ್ಲಾಂಡಿ ಸುಶ್ರುತ ಆಯುರ್ವೇದ ಆಸ್ಪತ್ರೆಯ ಮುಂಭಾಗದಲ್ಲಿರುವ ಭ್ರಮರಾಂಬಿಕ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.


ವಾರಾಣಾಸಿ ಫಾರ್ಮ್ಸ್ನ ಕೃಷ್ಣ ಮೂರ್ತಿ ಮಾತನಾಡಿ, ಸೆಲ್ಕೋ ಸೋಲಾರ್ ಸಂಸ್ಥೆಯ ಸಿಬ್ಬಂದಿಗಳ ಮೂಲಕ ಉತ್ತಮ ಸೇವೆ ದೊರೆಯುತ್ತಿದೆ. ವಿದೇಶದಲ್ಲಿ ವಿದ್ಯಾಭ್ಯಾಸ ಪಡೆದು ದೇಶದಲ್ಲಿ ಸೇವೆ ನೀಡುತ್ತಿರುವ ಸಂಸ್ಥೆಯ ಮುಖ್ಯ ಹರೀಶ್ ಹಂದೆಯವರ ಸಾಧನೆ ಅದ್ಬುತ. ಅವರ ಮೂಲಕ ಹಳ್ಳಿ ಹಳ್ಳಿಗಳಲ್ಲೂ ಬೆಳಕು ನೀಡುವ ಕೆಲಸವಾಗಿದೆ. ಸಿಡಿಲು, ಮಿಂಚಿನಿಂದ ಸೋಲಾರ್ನಲ್ಲಿ ಇನ್ವರ್ಟರ್ನಲ್ಲಿ ಸಮಸ್ಯೆ ಉಂಟಾಗುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ತಂತ್ರಜ್ಞಾನದ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದರು.






ಸಂತ ಫಿಲೋಮಿನಾ ಕಾಲೇಜಿನ ಪ್ರೊಫೇಸರ್ ಡಾ.ಎ.ಪಿ ರಾಧಾಕೃಷ್ಣ ಮಾತನಾಡಿ, ವಿಜ್ಞಾನ ಹಾಗೂ ತಂತ್ರಜ್ಞಾನಗಳು ಎರಡು ನಾಗರಿಕತೆ ದಾರಿಗಳು. ಎರಡೂ ಒಂದನೊಂದು ಬಿಟ್ಟು ಇಲ್ಲ. ವಿಜ್ಞಾನ ಹೊಸತನ ಹುಡುಕಿದರೆ ತಂತ್ರಜ್ಞಾನ ಬದುಕಿಗೆ ದಾರಿ ನೀಡುತ್ತದೆ. ಸೋಲಾರ್ನಲ್ಲಿ ಅಗಾದವಾದ ಕ್ರಾಂತಿ ಆಗಿದೆ. ಸೆಲ್ಕೋ ಸೋಲಾರ್ ಮೂಲಕ ಸುಮಾರು 10 ಲಕ್ಷ ಗ್ರಾಹಕರಿದ್ದಾರೆ. ಸೋಲಾರ್ನಲ್ಲಿಯೂ ತಂತ್ರಜ್ಞಾನ ಮುಂದುವರಿದಿದ್ದು ಆನ್ ಗ್ರಿಡ್, ಆಪ್ ಗ್ರಿಡ್ ಬಳಸುವ ದೂರಗಾಮಿ ಯೋಜನೆಯಾಗಿ ವಿದ್ಯುತ್ ಉತ್ಪಾದನೆ ಜನಜೀವನಕ್ಕೆ ಇನ್ನಷ್ಟು ಅನುಕೂಲವಾಗಲಿ ಎಂದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಸೆಲ್ಕೋ ಅಂದರೆ ಸೋಲಾರ್, ಸೋಲಾರ್ ಅಂದರೆ ಸೆಲ್ಕೋ ಅನ್ನುವಷ್ಟರ ಮಟ್ಟಿಗೆ ಸೆಲ್ಕೋ ಸೋಲಾರ್ ಬೆಳೆದಿದೆ. ಸೆಲ್ಕೋ ಸಂಸ್ಥೆಯು ಕೇವಲ ವ್ಯವಹಾರಕ್ಕೆ ಸೀಮಿತವಾಗಿರದೆ ಸಾಮಾಜಿಕವಾಗಿಯೂ ತೊಡಗಿಸಿಕೊಂಡಿದ್ದು ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ಗಳನ್ನು ಒದಗಿಸುತ್ತಿದೆ. ಬಡ ಉದ್ಯಮಿಗಳಿಗೂ ಸಹಕಾರ ನೀಡುತ್ತಿದೆ ಎಂದ ಅವರು ಆರ್ಯಾಪು ಗ್ರಾ.ಪಂನಲ್ಲಿ ಕುಡಿಯುವ ನೀರಿನ ಘಟಕಕ್ಕೆ ಸೆಲ್ಕೋ ಸೋಲಾರ್ ಅಳವಡಿಸುವ ಮೂಲಕ ರಾಜ್ಯದಲ್ಲಿಯೇ ಮಾದರಿಯಾಗಿ ಗುರುತಿಸಿಕೊಂಡಿದೆ ಎಂದರು.
ಸನ್ಮಾನ ಸ್ವೀಕರಿಸಿದ ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್ ಎಂ.ಮಾತನಾಡಿ, ಸೆಲ್ಕೋ ಸಂಸ್ಥೆಗೆ ಉತ್ಪನ್ನಗಳ ಮಾರಾಟ ಮಾತ್ರವೇ ಉದ್ದೇಶವಲ್ಲ. ನಂತರದ ಸೇವೆಯನ್ನು ಉತ್ತಮವಾಗಿ ನೀಡುತ್ತಿದ್ದು ಸಂಸ್ಥೆ ಯಶಸ್ವಿಯಾಗಿ ಬೆಳೆಯುತ್ತಿದೆ. ನೈಸರ್ಗಿಕವಾಗಿ ದೊರೆಯುವ ಸೂರ್ಯನ ಬೆಳಕಿನ್ನು ಬಳಸಿ ವಿದ್ಯುತ್ ಉತ್ಪಾದಿಸಿಕೊಂಡು ಸಾರ್ವಜನಿಕ ಉದ್ದೇಶಗಳಿಗೆ ಬಳಸುವುದಕ್ಕೆ ಸರಕಾರ ಜಿಎಸ್ಟಿಯಿಂದ ಮುಕ್ತ ಮಾಡಬೇಕು ಎಂದರು.
ಸೆಲ್ಕೋ ಸೋಲಾರ್ನ ಡಿಜಿಎಂ ಗುರುಪ್ರಕಾಶ್ ಶೆಟ್ಟಿ ಮಾತನಾಡಿ, ಸೆಲ್ಕೋ ಸೋಲಾರ್ ಸಂಸ್ಥೆಯು ಕಳೆದ 30 ವರ್ಷಗಳಿಂದ ನಿರಂತರವಾಗಿ ಸೇವೆ ನೀಡುತ್ತಿದೆ. ಆರ್ಥಿಕವಾಗಿ ಮಾತ್ರವಲ್ಲ ಸಾಮಾಜಿಕವಾಗಿ ಸಂಸ್ಥೆ ಗುರುತಿಸಿಕೊಂಡಿದೆ. ಜೀವನೋಪಾಯಕ್ಕೆ ಆಧಾರವಾಗಿಯು ಪರಿಕರಗಳನ್ನು ನೀಡುತ್ತಿದೆ. ತುರ್ತು ಸಂದರ್ಭದಲ್ಲಿ ಆರೋಗ್ಯ ಕೇಂದ್ರಗಳು ವಿದ್ಯುತ್ನಿಂದ ಸ್ವತಂತ್ರವಾಗಿ ಕೆಲಸ ಮಾಡಲು ಸೋಲಾರ್ ಸಹಕಾರಿಯಾಗಲಿದೆ. ಸ್ವಾವಲಂಬಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಪರಿಸಕ್ಕೆ ಉದ್ದೇಶದಲ್ಲಿ ಸೆಲ್ಕೋ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ. ಮುಂದಿನ ದಿನಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮೂಲಕ ಸಾಕಷ್ಟು ಉದ್ಯೋಗಾವಕಾಶಗಳು ಬರಲಿದೆ ಎಂದರು.
ಸನ್ಮಾನ:
ಸೆಲ್ಕೋ ಸೋಲಾರ್ ಸಂಸ್ಥೆಯ ಪುತ್ತೂರಿನ ಪ್ರಥಮ ಗ್ರಾಹಕರಾಗಿದ್ದ ದ.ಅರವಿಂದ ರೈಯವರ ಪತ್ನಿ ಅನುಸೂಯ ರೈ, ಗ್ರಾಹಕ ವಾಸು ಪೂಜಾರಿ, ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್ ಎಂ.ರವರನ್ನು ಸನ್ಮಾನಿಸಲಾಯಿತು. ಜೀವಣೋಪಾಯ ಪರಿಕರ ಅಳವಡಿಸಿದ ಗ್ರಾಹಕರಾದ ಚಂದ್ರಶೇಖರ, ಧನ್ಯಶ್ರೀ, ವಿಶ್ವನಾಥ, ರೂಪ, ಜನಾರ್ದನ ಗೌಡ ಸ್ಮರಣಿಕ ನೀಡಿ ಗೌರವಿಸಲಾಯಿತು.
ಪ್ರಕಾಶ್ ಪ್ರಾರ್ಥಿಸಿದರು. ಪುತ್ತೂರು ಶಾಖಾ ವ್ಯವಸ್ಥಾಪಕ ಸುಧಾಕರ ಆಳ್ವ ಸ್ವಾಗತಿಸಿದರು. ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ನವೀನ್ ನೆರಿಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಿಬಂದಿಗಳಾದ ಚಿದಾನಂದ, ಜಗದೀಶ್, ರಾಜೇಶ್, ಸುಶಾಂತ್, ರೋಶನ್, ಗಣೇಶ್, ಪ್ರಿಯ, ಮನೋಹರ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಕ್ಷೇತ್ರ ವ್ಯವಸ್ಥಾಪಕರಾದ ಪ್ರಸಾದ್, ವೇಣುಗೋಪಾಲ, ಸಂಜಿತ್ ರೈ, ಮಂಗಳೂರು ಶಾಖಾ ವ್ಯವಸ್ಥಾಪಕ ನವೀನ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು.








