ಪುತ್ತೂರು ಆನಂದ ಟೈಲರ್ ಮನೆಗೆ ಕಡಮಜಲು ವಿಪುಲ ಎಸ್. ರೈ ಭೇಟಿ

0

ಪುತ್ತೂರು: ನ್ಯೂಯಾರ್ಕ್ ಜಾಗತಿಕ ವ್ಯಾಪಾರ ಕಟ್ಟಡ ದುರಂತದಲ್ಲಿ ಹುತಾತ್ಮರಾದ ವಿಪ್ರೊ ಕಂಪೆನಿಯಲ್ಲಿ ಸಿಸ್ಟಮ್ ಮ್ಯಾನೇಜರ್ ಆಗಿದ್ದ ಹೇಮಂತ್ ಕುಮಾರ್ ರವರ ನ್ಯೂಯಾರ್ಕ್ ನ ದುರಂತ ನಡೆದ ಸ್ಥಳದಲ್ಲಿರುವ ಸ್ಮಾರಕಕ್ಕೆ  ಭೇಟಿ ನೀಡಿ ನಮನ ಸಲ್ಲಿಸಿದ್ದ ಕಡಮಜಲು ವಿಪುಲ ಎಸ್. ರೈಯವರು ತವರು ದೇಶಕ್ಕೆ ಬಂದು ಅ.22ರಂದು ಹೇಮಂತ್ ಕುಮಾರ್ ರವರ ತಂದೆ ಪುತ್ತೂರು ಆನಂದ ಟೈಲರ್ ರವರನ್ನು ಭೇಟಿ ಮಾಡಿದರು.

ಇದೇ ವೇಳೆ ಮಾತನಾಡಿದ ವಿಪುಲ ರೈಯವರು ‘ದುರಂತದಲ್ಲಿ ಮಡಿದ 3000 ಮಂದಿಯ ಹೆಸರುಗಳನ್ನು ಅಲ್ಲಿ ಸ್ಮಾರಕ ಮಾಡಲಾಗಿದೆ. ಅದರಲ್ಲಿ ಹೇಮಂತ್ ಕುಮಾರ್ ರವರ ಹೆಸರು ಹುಡುಕಿ ಅದರ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿ ಬಂದಿದ್ದೇವೆ’ ಎಂದು ಹೇಳಿ ಆನಂದ‌ ಟೈಲರ್ ರವರ ಬಗ್ಗೆ ಗುಣಗಾನ ಮಾಡಿದರು. ಕಡಮಜಲು ಸುಭಾಸ್ ರೈಯವರು ಮಾತನಾಡಿ ಆನಂದ ಟೈಲರ್ ರವರ ಪರಿಶ್ರಮ ಮತ್ತು ಸರಳ ಸಜ್ಜನತೆಯ ಬಗ್ಗೆ ಹೇಳಿ ಅಭಿನಂದನೆ ಸಲ್ಲಿಸಿ, ಪುತ್ರ ಶೋಕ ಶಮನವಾಗಲು ದೇವರು ಅನುಗ್ರಹಿಸಲಿ’ ಎಂದರು. 

ಈ ವೇಳೆ ಆನಂದ್ ಟೈಲರ್ ರವರು ಮಾತನಾಡಿ ‘ಅಮೆರಿಕ ದುರಂತ ನಡೆದು ಒಂದು ವರ್ಷದ ಬಳಿಕ ನ್ಯೂಯಾರ್ಕ್ ಗೆ ಭೇಟಿ ನೀಡಿದ್ದೇವೆ. ಆಗ ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿತ್ತು’ ಎಂದರು.

ಈ ವೇಳೆ ಆನಂದ್ ಟೈಲರ್ ರವರ ಪತ್ನಿ  ಕುಸುಮಾ ಪಿ., ಸೊಸೆ ಶ್ವೇತಾ ಪ್ರಶಾಂತ್, ಪ್ರೀತಿ ಎಸ್. ರೈ ಕಡಮಜಲು, ಶಶಿಕುಮಾರ್ ರೈ ಬಾಲ್ಯೊಟ್ಟು, ಆರ್.ಸಿ. ನಾರಾಯಣ್, ಕಿರಣ್ ರೈ ಬಲ್ನಾಡು, ಮಾ. ಸಿದ್ಧಾರ್ಥ್  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here