ಪುತ್ತೂರು: ಅರಿಯಡ್ಕ ಪಂಚಾಯತ್ ಸದಸ್ಯರಾದ ಶಂಕರ ಮಾಡನ್ನೂರು ನಿಧನದಿಂದ ತೆರವಾದ ಸ್ಥಾನಕ್ಕೆ ನ.23ರಂದು ಚುನಾವಣೆ ನಡೆಯಲಿದ್ದು, ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕುರಿತು ಅ.26ರಂದು ಮಾಡನ್ನೂರು ಕೆ.ಕೆ ಇಬ್ರಾಹಿಂ ಹಾಜಿಕೊಚ್ಚಿ ಇವರ ಮನೆಯಲ್ಲಿ ಕಾಂಗ್ರೆಸ್ ಸಭೆ ನಡೆಸಿತು.ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ವಹಿಸಿದ್ದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಬುಶ್ರಾ ಅಬ್ದುಲ್ ಹಜೀದ್ ಕಾವು, ಕೆ.ಕೆ ಮೈದು ಮಾಡನ್ನೂರು, ರವಿಪ್ರಸಾದ್ ಶೆಟ್ಟಿ, ಗಣೇಶ್ ಶೆಟ್ಟಿ, ಉಮ್ಮರ್ ಮಾಡನ್ನೂರು, ಕಾಂಗ್ರೆಸ್ ಅಭ್ಯರ್ಥಿ ವಿನಯ,ಅರಿಯಡ್ಕ ಪಂಚಾಯತ್ ಸದಸ್ಯೆ ಜಯಂತಿ ಪಟ್ಟುಮೂಲೆ, ಪಂಚಯಾತ್ ಸದಸ್ಯ ಮೋನಪ್ಪ ಪೂಜಾರಿ ಕೆರೆಮಾರು,ಪಂ ಮಾಜಿ ಸದಸ್ಯ ನವೀನ ಬಿ.ಡಿ, ಮಾಜಿ ಸದಸ್ಯರಾದ ರವೀಂದ್ರ ಪೂಜಾರಿ ಮಂಜೆಕೊಟ್ಯ, ಬಿ ಎಮ್ ಅಬ್ದುಲ್ಲ ಮಾಡನ್ನೂರು, ಖಾಲಿದಾ ಮಾಡನ್ನೂರು,ಮಾಜಿ ಪಂಚಾಯತ್ ಅಧ್ಯಕ್ಷೆ ಕಮಲ, ಗಂಗಾದರ ಪಟ್ಟುಮೂಲೆ, ಮಾಡನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಬಲ್ಯಾಯ ಮದ್ಲ, ರಾಜೀವಿ ನನ್ಯ, ಇಬ್ರಾಹಿಂ ಮಂಜೆಕೊಟ್ಯ, ಯೂಸುಫ್ ಮಾಡನ್ನೂರು, ಇನ್ನೀತರ ಕಾರ್ಯಕರ್ತರು ಉಪಸ್ಥಿತರಿದ್ದರು.
ಅರಿಯಡ್ಕ ಪಂಚಾಯತ್ ಸದಸ್ಯರಾದ ದಿವ್ಯನಾಥ ಶೆಟ್ಟಿ ಸ್ವಾಗತಿಸಿ,ಮೋನಪ್ಪ ಪೂಜಾರಿ ವಂದಿಸಿದರು.