ದೀಪಾವಳಿ ವಿಶೇಷಾಂಕವನ್ನು ಪಡೆದ ಶಾಸಕಿ ಭಾಗೀರಥಿ ಮುರುಳ್ಯ

0

ಪುತ್ತೂರು: ದೀಪಾವಳಿ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಸುದ್ದಿ ಬಿಡುಗಡೆ ಪುತ್ತೂರು ಹೊರತಂದಿರುವ ದೀಪಾವಳಿ ವಿಶೇಷಾಂಕ 2024 – ‘ಬೆಳಕಿನ ಹಬ್ಬಕ್ಕೆ ಅಕ್ಷರಗಳ ಹಣತೆ’ ವಿಶೇಷಾಂಕವನ್ನು ಸುಳ್ಯ ಚಾನೆಲ್‌ ಮುಖ್ಯಸ್ಥ ದುರ್ಗಪ್ರಸಾದ್‌ ನಾಯರ್‌ ಕೆರೆ ಅವರು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ನೀಡಿದರು.

150 ಪುಟಗಳ ಈ ವಿಶೇಷಾಂಕದಲ್ಲಿ ನಾಡಿನ ಖ್ಯಾತ ಕಥೆಗಾರ ಜೋಗಿ, ಈ ನೆಲದ ಬರಹಗಾರ ಡಾ. ಪ್ರಭಾಕರ ಶಿಶಿಲ ಸೇರಿದಂತೆ ಹಲವು ಲೇಖಕರ ಬರಹಗಳು, ಪ್ರವಾಸಿ ಕಥನ, ಆರೋಗ್ಯ ಮಾಹಿತಿ, ಸೆಲ್ಫೀ ಕಾರ್ನರ್, ಮಕ್ಕಳ ಚಿತ್ರ, ಕವನಗಳು ಸೇರಿದಂತೆ ವೈವಿಧ್ಯಮಯ ವಿಷಯಗಳಿದ್ದು, 50 ರೂಪಾಯಿ ಬೆಲೆಯ ಈ ವಿಶೇಷಾಂಕ ಪುತ್ತೂರು ಹಾಗೂ ಕಡಬ ತಾಲೂಕಿನೆಲ್ಲೆಡೆ ಓದುಗರಿಗೆ ಲಭ್ಯವಿದೆ.

LEAVE A REPLY

Please enter your comment!
Please enter your name here