ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಆಟೋ ಚಾಲಕ ಮಾಲಕ ಸಂಘದ ಆಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿ ಅವಿನಾಶ್ ಹೆಚ್ ಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕನ್ನಡ ನಾಡು ನುಡಿಯ ರಕ್ಷಣೆ ಪ್ರತಿಯೋರ್ವರ ಕರ್ತವ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಧ್ವಜದೊಂದಿಗೆ ಆಟೋ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷಿ ಪ್ರಭು, ವರ್ತಕರ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯೂನಿಕ್, , ನೇತ್ರಾವತಿ ಅಟೋ ಚಾಲಕ ಮಾಲಕ ಸಂಘದ ಮುಂದಾಳುಗಳಾದ ಶಬೀರ್ ಕೆಂಪಿ, ಫಾರೂಕ್ ಜಿಂದಗಿ, ನಝೀರ್ ಮಠ, ಅನಿಲ್, ಹರಿಶ್ಚಂದ್ರ, ಗಗನ್, ಅಶೋಕ್ ಬಂಡಾಡಿ, ಅನ್ಸ್ಸಾರ್ ಮಠ , ಸೇಸಪ್ಪ ನೆಕ್ಕಿಲು, ಕಲಂದರ್ ಶಾಫಿ, ಮಜೀದ್ ಕುದ್ಲೂರು ಮೊದಲಾದವರು ಭಾಗವಹಿಸಿದ್ದರು.