ಪುತ್ತೂರು ಬೈಪಾಸ್‌ನಲ್ಲಿ ‘ಕಾರ್ ಹಬ್’ ಶುಭಾರಂಭ

0


*ಪುತ್ತೂರಿನಲ್ಲಿ ಉದ್ಯಮಗಳು ಬೆಳೆಯಬೇಕು-ಅಶೋಕ್ ರೈ

*‘ಕಾರ್ ಹಬ್’ ಕಾರುಗಳ ಅಂದಚಂದ ಹೆಚ್ಚಿಸಲಿದೆ-ಮಠಂದೂರು

ಪುತ್ತೂರು: ಕಾರುಗಳ ಮೋಡಿಫಿಕೇಶನ್ ವರ್ಕ್, ಎಸಿ ವರ್ಕ್, ಟಿಂಟ್ ವರ್ಕ್ ಹಾಗೂ ಇನ್ನಿತರ ಕಾರಿಗೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ಮಾಡಿಕೊಡುವ ಸಂಸ್ಥೆ ‘ಕಾರ್ ಹಬ್’ ಇಲ್ಲಿನ ದರ್ಬೆ ಬೈಪಾಸ್ ದೇರಣ್ಣ ದುಗ್ಗಮ್ಮ ಹಾಲ್ ಬಳಿ ನ.4ರಂದು ಶುಭಾರಂಭಗೊಂಡಿತು.
ಸಯ್ಯದ್ ಎನ್‌ಪಿಎಂ ಜಲಾಲುದ್ದೀನ್ ತಂಙಳ್ ಸಂಸ್ಥೆಯನ್ನು ಉದ್ಘಾಟಿಸಿ ಪ್ರಾರ್ಥನೆ ನೆರವೇರಿಸಿದರು.

ಅತಿಥಿಯಾಗಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಉದ್ಯಮಗಳು ಹೆಚ್ಚಾದಂತೆ ಪೇಟೆ ಅಭಿವೃದ್ಧಿ ಹೊಂದುತ್ತದೆ, ಪುತ್ತೂರಿನಲ್ಲಿ ಉದ್ಯಮಗಳು ಬೆಳೆಯಬೇಕು, ಒಂದಷ್ಟು ಮಂದಿಗೆ ಉದ್ಯೋಗ ದೊರೆಯಬೇಕು, ಯುವ ಉದ್ಯಮಿಗಳು ಸೃಷ್ಟಿಯಾಗಬೇಕು ಎಂದು ಹೇಳಿದರು.

ಪುತ್ತೂರಿನಲ್ಲಿ ಕಾರ್ ಹಬ್ ಶುಭಾರಂಭಗೊಂಡಿರುವುದು ಒಳ್ಳೆಯ ವಿಚಾರ, ಕಾರಿಗೆ ಎಕ್ಸ್ಟ್ರಾ ಫಿಟ್ಟಿಂಗ್ ಮಾಡುವುದರ ಜೊತೆಗೆ ಉತ್ತಮ ಸೇವೆ ನೀಡಿದಾಗ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಪುತ್ತೂರು ವಾಣಿಜ್ಯ ಕೇಂದ್ರವಾಗಿದ್ದು ಅತೀ ಹೆಚ್ಚು ವ್ಯಾಪಾರ ಉದ್ಯಮಗಳು ಪುತ್ತೂರಿನಲ್ಲಿದೆ, ಇದೀಗ ಕಾರಿನ ಅಂದ ಚಂದವನ್ನು ಹೆಚ್ಚಿಸಲು ಈಶ್ವರಮಂಗಲದ ಯುವಕರು ಮನಸ್ಸು ಮಾಡಿ ಕಾರ್ ಹಬ್ ಎನ್ನುವ ಸಂಸ್ಥೆಯನ್ನು ಪ್ರಾರಂಭಿಸಿದ್ದು ಇದು ಉತ್ತರೋತ್ತರ ಅಭಿವೃದ್ಧಿ ಕಾಣಲಿ ಎಂದು ಶುಭ ಹಾರೈಸಿದರು.


ಕುಂಬ್ರ ಕೆಐಸಿ ವಿದ್ಯಾಸಂಸ್ಥೆಯ ಪ್ರೊ. ಅನೀಸ್ ಕೌಸರಿ ಮಾತನಾಡಿ ಗುಣಮಟ್ಟದ ಸೇವೆಯ ಮೂಲಕ ಕಾರ್ ಹಬ್ ಸಂಸ್ಥೆ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿ ಎಂದು ಹಾರೈಸಿದರು.
ಬನ್ನೂರು ಮಸೀದಿಯ ಖತೀಬ್ ಸಿರಾಜುದ್ದೀನ್ ಸಖಾಫಿ, ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ನೆ.ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ರಾಮ ಮೇನಾಲ, ಶ್ರೀನಿಧಿ ಕಾಂಪ್ಲೆಕ್ಸ್ ಮಾಲಕ ಪ್ರಕಾಶ್, ಶಾಫಿ ಅಹ್ಸನಿ, ಗಿರೀಶ್ ಕುಮಾರ್ ರೈ ಮರಕ್ಕಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಉದ್ಯಮಿ ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಯೂಸುಫ್ ಹಾಜಿ ಪಟ್ರೋಡಿ, ಶಿಹಾಬುದ್ದೀನ್ ಫೈಝಿ, ಕಾರ್‌ಸೂಕ್ ಮಾಲಕ ಮುಸ್ತಫಾ ಮೇನಾಲ, ಶಾಕಿರ್ ಕುಂಬ್ರ, ಮೇನಾಲ ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ಲ ಮೆಣಸಿನಕಾನ, ಇ.ಪಿ ಮುಹಮ್ಮದ್ ಕುಂಞಿ ಹಾಜಿ, ಇ.ಎ ಮಹಮ್ಮದ್ ಕುಂಞಿ, ಇಸ್ಮಾಯಿಲ್ ಮಲ್ಲಕೂಟ, ರಫೀಕ್ ಝೆನ್, ಹಾರಿಸ್ ಪಿ.ಎಸ್, ಅಬ್ಬು ಮೇನಾಲ, ಅಕ್ಕು ಬಿ.ಸಿ ಮತ್ತಿತರ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು. ಅಬ್ದುಲ್ ಸಲಾಂ ಮೇನಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here