ಪುತ್ತೂರು: 33ಕೆ.ವಿ. ಕಾವು-ಸುಳ್ಯ ಏಕಪಥ ಮಾರ್ಗವನ್ನು ಕೌಡಿಚ್ಚಾರಿನಿಂದ ಕಾವು ಜಂಕ್ಷನ್ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ನ.9ರಂದು ಶನಿವಾರ ಪೂರ್ವಾಹ್ನ ೦9:30ರಿಂದ ಸಾಯಂಕಾಲ ೦5:೦೦ ಗಂಟೆಯವರೆಗೆ 33ಕೆ.ವಿ ಕಾವು-ಸುಳ್ಯ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಆದ್ದರಿಂದ 33/11ಕೆ.ವಿ. ಕಾವು ಹಾಗೂ ಸುಳ್ಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ ಫೀಡರ್ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.