ಪುತ್ತೂರು: ಬ್ಲಾಕ್ ಕಾಂಗ್ರೆಸ್ಗೆ 23 ಮಂದಿಯನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಶಾಸಕ ಅಶೋಕ್ ಕುಮಾರ್ ರೈಯವರ ಸೂಚನೆಯಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಈ ನೇಮಕ ಮಾಡಿದ್ದಾರೆ.
ಕೊಳ್ತಿಗೆ ಗ್ರಾ.ಪಂ ಮಾಜಿ ಅಧ್ಯಕ್ಷ ಶ್ಯಾಮಸುಂದರ ರೈ, ಸಿಝ್ಲರ್ ಸಾಫ್ಟ್ಡ್ರಿಂಕ್ಸ್ನ ಮ್ಹಾಲಕ ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಕಾವು, ಪಿ.ಜಿ ಭಟ್ ಪಾಣಾಜೆ, ಕಾವು ಬುಶ್ರಾ ಎಜ್ಯುಕೇಶನಲ್ ಟ್ರಸ್ಟ್ನ ಅಧ್ಯಕ್ಷ ಅಬ್ದುಲ್ ಅಝೀಝ್ ಬುಶ್ರಾ ಮಾಡ್ನೂರು, ಕೆದಂಬಾಡಿ ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರ್, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಮಾಜಿ ಸದಸ್ಯ ಕೆ.ಎಂ ಮುಹಮ್ಮದ್ ಕುಂಞಿ ಮೇನಾಲ, ಕೊಳ್ತಿಗೆ ಗ್ರಾ.ಪಂ ಸದಸ್ಯರು, ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿರುವ ವಸಂತ ಕುಮಾರ್ ರೈ ಕೊಳ್ತಿಗೆ, ನಗರ ಸಭಾ ನಾಮನಿರ್ದೇಶಿಕ ಸದಸ್ಯ ರೋಶನ್ ರೈ ಬನ್ನೂರು, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಜಿಲ್ಲಾ ಕಾಂಗ್ರೆಸ್ ಸದಸ್ಯ ಐತ್ತಪ್ಪ ಪೇರಲ್ತಡ್ಕ, ಪಾಣಾಜೆ ಗ್ರಾ.ಪಂ ಅಧ್ಯಕ್ಷೆ ಮೈನೂನತ್ತುಲ್ ಮೆಹ್ರಾ, ಗುತ್ತಿಗೆದಾರ ಆಲಿಕುಂಞಿ ಕೊರಿಂಗಿಲ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಶಾರದಾ ಅರಸ್, ನಗರ ಸಭಾ ಸದಸ್ಯ ಯೂಸುಫ್ ಡ್ರೀಮ್, ಮೌರೀಸ್ ಕುಟಿನ್ಹಾ, ಸಿದ್ದಿಕ್ ನೆಹರುನಗರ, ಆಸೀಪ್ ನಿಡ್ಪಳ್ಳಿ, ಮಾಧವ ಅಜಲಡ್ಕ, ಹಂಝ ಎಲಿಯ ಸೊರಕೆ, ವಿಜಯ ಸೋಣಂಗೇರಿ ಬಡಗನ್ನೂರು ಅವರನ್ನು ನೇಮಕ ಮಾಡಲಾಗಿದೆ.