ಬೆಳ್ತಂಗಡಿ: 1994ರಲ್ಲಿ ಪ್ರಾರಂಭಗೊಂಡಿರುವ ಪ್ರವೀಣ್ ಕ್ಯಾಪಿಟಲ್ ಪ್ರೈವೆಟ್ ಲಿಮಿಟೆಡ್‌ನ 13ನೇ ಶಾಖೆ ಬೆಳ್ತಂಗಡಿ ಸಂತೆಕಟ್ಟೆಯ ಶೃಂಗಾರ್ ಜುವೆಲ್ಲರ‍್ಸ್ ಎದುರಿನ ಬಾಳಿಗ ಬಿಲ್ಡಿಂಗ್‌ನ ಹನುಮಾನ್ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ನ.8ರಂದು ಶುಭಾರಂಭಗೊಂಡಿತು. ಶಾರದಾ ಟ್ರೇಡರ್ಸ್ ಮಾಲಕ ರಮೇಶ್ ಭಟ್ ಉದ್ಘಾಟಿಸಿ ಶುಭ ಹಾರೈಸಿದರು.
ಪ್ರತೀ ಜಿಲ್ಲೆಯಲ್ಲಿಯೂ ಸಂಸ್ಥೆ ಪ್ರಾರಂಭ-ಅಮೋಘ ಜೆ. ರೈ:
ಪ್ರವೀಣ್ ಕ್ಯಾಪಿಟಲ್ ಪ್ರೈವೆಟ್ ಲಿಮಿಟೆಡ್‌ನ ಚೀಫ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಮೋಘ ಜೆ. ರೈ ಅವರು ಮಾತನಾಡಿ ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ನಮ್ಮ ಸಂಸ್ಥೆ ಹಣಕಾಸು ಕ್ಷೇತ್ರದಲ್ಲಿ 30 ವರ್ಷಗಳ ಅನುಭವದೊಂದಿಗೆ ಕರ್ನಾಟಕ ರಾಜ್ಯದ 15 ಜಿಲ್ಲೆಗಳಲ್ಲಿ ಗ್ರಾಹಕರನ್ನು ಹೊಂದಿದೆ. ಆರ್ಥಿಕ ವರ್ಷದಲ್ಲಿ 350 ಕೋಟಿ ರೂಪಾಯಿ ವಹಿವಾಟನ್ನು ತಲುಪುವ ಗುರಿ ಹೊಂದಿದ್ದೇವೆ. ಬೆಳ್ತಂಗಡಿಯಲ್ಲಿ 500 ಗ್ರಾಹಕರಿದ್ದು 2025-26ರಲ್ಲಿ ಕರ್ನಾಟಕದ ಪ್ರತೀ ಜಿಲ್ಲೆಯಲ್ಲಿಯೂ ಸಂಸ್ಥೆ ಪ್ರಾರಂಭಿಸಲು ಯೋಜನೆ ರೂಪಿಸಿದ್ದೇವೆ ಎಂದರು. 1994ರಲ್ಲಿ ನಮ್ಮ ಕಂಪನಿ ಸ್ಥಾಪನೆಯಾಗಿದೆ. 13ನೇ ಶಾಖೆ ಇದೀಗ ಆರಂಭಗೊಂಡಿದೆ. ಈ ಸಂಸ್ಥೆಯಲ್ಲಿ ಹೊಸ ಮತ್ತು ಹಳೆಯ ವಾಹನಗಳಿಗೆ ಸಾಲ ಸೌಲಭ್ಯ, ಭೂ ಅಡಮಾನ ಸಾಲವನ್ನು ಆಕರ್ಷಕ ಬಡ್ಡಿ ದರದಲ್ಲಿ ಅತೀ ಶೀಘ್ರವಾಗಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಸದುಪಯೋಗ ಪಡೆದುಕೊಳ್ಳಬೇಕು-ಪ್ರದೀಪ್ ಬಂಗೇರ:
ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್‌ನ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ಪ್ರದೀಪ್ ಬಂಗೇರ ಮಾತನಾಡಿ ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್‌ನ 13ನೇ ಶಾಖೆಯನ್ನು ಬೆಳ್ತಂಗಡಿಯಲ್ಲಿ ಪ್ರಾರಂಭ ಮಾಡಿದ್ದೇವೆ. ಹಳೆ ಮತ್ತು ಹೊಸ ವಾಹನಗಳಿಗೆ ಸಾಲ ಸೌಲಭ್ಯ ನೀಡುವ ಒಂದು ಸಂಸ್ಥೆಯಾಗಿದೆ. ವಾಹನ ಚಾಲಕರು ಮತ್ತು ಮಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರಾದೇಶಿಕ ವ್ಯವಸ್ಥಾಪಕ ಉದಯ್ ಶ್ಯಾಮ್ ಮಾತನಾಡಿ ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಪುತ್ತೂರಿನಲ್ಲಿ ಮುಖ್ಯ ಕಚೇರಿ ಹೊಂದಿದೆ. ಇವತ್ತು ಬೆಳ್ತಂಗಡಿಯಲ್ಲಿ ಪ್ರಾರಂಭ ಮಾಡಿದ್ದೇವೆ. ನಮ್ಮ ಸಂಸ್ಥೆ ಇನ್ನಷ್ಟು ಬೆಳೆಯಬೇಕು. ಬೆಳ್ತಂಗಡಿ ಮತ್ತು ಸುತ್ತ ಮುತ್ತಲಿನ ಜನರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು. ಪುತ್ತೂರು ಬ್ರಾಂಚ್‌ನ ವ್ಯವಸ್ಥಾಪಕ ಶಿವಕುಮಾರ್ ಮಾತನಾಡಿ ನಮಗೆ ಜನರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಈ ಸಂಸ್ಥೆಯಿಂದ ಹಲವು ಮಂದಿಗೆ ಉದ್ಯೋಗ ಸಿಕ್ಕಿದೆ. ಬಿಂದು, ಜೀರ ಇದರ ಸಹ ಸಂಸ್ಥೆಯಾಗಿದೆ. ಬೆಳ್ತಂಗಡಿಯಲ್ಲಿ ಬ್ರಾಂಚ್ ಆರಂಭಗೊಂಡಿರುವುದು ತುಂಬಾ ಖುಷಿಯಾಗಿದೆ ಎಂದರು.
ಡಿಜಿಎಮ್ ಶ್ರೀವತ್ಸರಾಜ್, ಚಾರ್ಟರ್ಡ್ ಅಕೌಂಟೆಂಟ್ ಹೇಮಂತ್ ಪೈ, ಬೆಳ್ತಂಗಡಿ ಹನುಮಾನ್ ಕಾಂಪ್ಲೆಕ್ಸ್ ಮಾಲಕ ಯಶವಂತ್ ಬಾಳಿಗ, ತಾ.ಪಂ. ಮಾಜಿ ಸದಸ್ಯ ಶಶಿಧರ ಕಲ್ಮಂಜ, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ವಕೀಲ ಪ್ರಶಾಂತ್, ಸ್ಪಂದನ ಲ್ಯಾಬೋರೇಟರಿಯ ಮುಖ್ಯಸ್ಥ ಮೆಲ್ಬಿ, ಸಂಜೀವ ಎ, ಭಾರತ್ ಆಟೋ ಕಾರ್‌ನ ಪ್ರವೀಣ್ ಕುಮಾರ್ ಹೆಚ್, ಶ್ರೀರಾಮ್ ಫೈನಾನ್ಸ್ ಮ್ಯಾನೇಜರ್ ಸುಭಾಶ್ ಪುದ್ದರಬೈಲು, ಪ್ರಮೋದ್ ಬಂಗೇರ ನೆರಿಯ ಮೊದಲಾದವರು ಉಪಸ್ಥಿತರಿದ್ದರು.
ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಸ್ಥೆ
ಮ್ಯಾನೇಜಿಂಗ್ ಡೈರೆಕ್ಟರ್ ಸತ್ಯಶಂಕರ್ ಕೆ, ಎಕ್ಸಿಕ್ಯೂಟಿವ್ ಡೈರೆಕ್ಟರ್ ರಂಜಿತ ಶಂಕರ್ ಮತ್ತು ಚೀಫ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಮೋಘ ಜೆ. ರೈ ಅವರ ಮುಂದಾಳತ್ವದೊಂದಿಗೆ ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರವೀಣ್ ಕ್ಯಾಪಿಟಲ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಹಣಕಾಸು ಕ್ಷೇತ್ರದಲ್ಲಿ 30 ವರ್ಷಗಳ ಅನುಭವದೊಂದಿಗೆ ರಾಜ್ಯದ 15 ಜಿಲ್ಲೆಗಳಲ್ಲಿ ಗ್ರಾಹಕರನ್ನು ಹೊಂದಿದೆ. ಪ್ರಸ್ತುತ ಪುತ್ತೂರು, ಮಂಗಳೂರು, ಮೂಡುಬಿದಿರೆ, ಮಡಿಕೇರಿ, ಮೈಸೂರು, ಸಕಲೇಶಪುರ, ಶಿರಸಿ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ, ದಾವಣಗೆರೆ ಮತ್ತು ಸಾಗರದಲ್ಲಿ ಶಾಖೆಗಳನ್ನು ಹೊಂದಿದೆ. ಅತಿ ಶೀಘ್ರದಲ್ಲಿ ಕುಂದಾಪುರ, ಧಾರವಾಡ ಹಾಗೂ ಹುಣಸೂರಿನಲ್ಲಿ ಶಾಖೆಗಳು ಪ್ರಾರಂಭಗೊಳ್ಳಲಿದೆ. 2025-26ನೇ ಆರ್ಥಿಕ ವರ್ಷದಲ್ಲಿ ರಾಜ್ಯಾದ್ಯಂತ ಶಾಖೆಗಳನ್ನು ಆರಂಭಿಸುವುದು ಹಾಗೂ 2024-25ನೇ ಆರ್ಥಿಕ ವರ್ಷದಲ್ಲಿ 350 ಕೋಟಿ ರೂ. ವಹಿವಾಟನ್ನು ತಲುಪುವ ಗುರಿಯನ್ನು ಹೊಂದಿದೆ. ಸಂಸ್ಥೆಯಲ್ಲಿ ಹೊಸ ಮತ್ತು ಹಳೆಯ ವಾಹನಗಳ ಮೇಲೆ ಹಾಗೂ ಖರೀದಿಸಲು ಸಾಲ ಸೌಲಭ್ಯ, ಭೂ ಅಡಮಾನ ಸಾಲಗಳನ್ನು ಆಕರ್ಷಕ ಬಡ್ಡಿ ದರದಲ್ಲಿ ಅತೀ ಶೀಘ್ರವಾಗಿ ಗ್ರಾಹಕರಿಗೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಚಿನ್ನ ಅಡಮಾನ ಸಾಲ, ವ್ಯಾಪಾರಾಭಿವೃದ್ಧಿ ಸಾಲ ಯೋಜನೆ ಜಾರಿಗೊಳಿಸಲಿದೆ. ಇದು ಬಿಂದು ಮಿನರಲ್ ವಾಟರ್, ಬಿಂದು ಜೀರಾ ಮಸಾಲಾ, ಸಿಪ್ಪಾನ್ ಸೇರಿದಂತೆ 50ಕ್ಕೂ ಅಧಿಕ ಪಾನೀಯ ಮತ್ತು ತಿನಿಸುಗಳ ತಯಾರಕರಾದ ಪ್ರತಿಷ್ಠಿತ ಎಸ್.ಜಿ. ಗ್ರೂಪ್‌ನ ಸಹ ಸಂಸ್ಥೆಯಾಗಿದೆ.