ಪ್ಲಾಸ್ಟಿಕ್ ಸಂಪೂರ್ಣ ನಿರ್ಮೂಲನೆ ಮಾಡದಿದ್ದಲ್ಲಿ ಮುಂದೊಂದು ದಿನ ಅಪಾಯ ನಿಶ್ಚಿತ -ಜಗತ್
ಬಡಗನ್ನೂರು: ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮಗಳ ಗ್ರಾಮ ನೈರ್ಮಲ್ಯ ಮೇಲುಸ್ತುವಾರಿ ಸಭೆಯು ನ.8 ರಂದು ಗ್ರಾ.ಪಂ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪುತ್ತೂರು ಗ್ರಾಮ ನೈರ್ಮಲ್ಯ ಮೇಲ್ವಿಚಾರಕ ಭಗತ್ ಮಾತನಾಡಿ ಸ್ವಚ್ಚತೆ ಮನೆಯಿಂದ ಆರಂಭ ಆಗಬೇಕು. ಪ್ಲಾಸ್ಟಿಕ್ ಸಂಪೂರ್ಣ ನಿರ್ಮೂಲನೆ ಮಾಡದಿದ್ದಲ್ಲಿ ಮುಂದೊಂದು ದಿನ ಅಪಾಯ ನಿಶ್ಚಿತ. ಈ ನಿಟ್ಟಿನಲ್ಲಿ ಗ್ರಾ.ಪಂ ನ ಪ್ರತಿ ವಾರ್ಡ್ ಮಟ್ಟದಲ್ಲಿ ಸಭೆ ಕರೆದು ಪ್ಲಾಸ್ಟಿಕ್ ಹೊತ್ತಿಸುವುದರಿಂದ ಉಂಟಾಗುವ ಮಾರಣಾಂತಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುವಲ್ಲಿ ಗ್ರಾ.ಪಂ ಸದಸ್ಯರು, ವಿವಿಧ ಸಂಘ ಸಂಸ್ಥೆಗಳು ,ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಸಹಕರಿಸುವಂತೆ ಕರೆ ನೀಡಿದರು.
ಪ್ರತಿ ಮನೆಯಿಂದಲೂ ತ್ಯಾಜ್ಯ ಸಂಗ್ರಹಣೆ:-
ಹಳ್ಳಿಯ ಪ್ರತಿ ಮನೆಯನ್ನು ಸಂಪರ್ಕ ಮಾಡಿಕೊಂಡು ಪ್ಲಾಸ್ಟಿಕ್ ಹೊತ್ತಿಸುವುದರಿಂದ ಮನುಕುಲಕ್ಕೆ ಉಂಟಾಗುವ ಹಾನಿಕಾರಕ ಪರಿಣಾಮದ ಬಗ್ಗೆ ಕರಪತ್ರ ಹಂಚಿಕೆ, ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳುವುದು, ರೂಟ್ ಮ್ಯಾಪ್ ಮಾಡಿಕೊಂಡು ಕಸ ವಿಲೇವಾರಿ ಮಾಡಲಾಗುವುದು. ಪ್ರತಿ ಮನೆಯಿಂದಲೂ ತ್ಯಾಜ್ಯ ಸಂಗ್ರಹಣೆಗೆ ತಿಂಗಳಿಗೆ 50 ರೂಪಾಯಿ ನಿಗದಿಪಡಿಸಲಾಗುವುದು. ಗ್ರಾಮಸ್ಥರು ತಮ್ಮ ಮನೆಯ ತ್ಯಾಜ್ಯವನ್ನು ಸಂಗ್ರಹಿಸಿ ಸ್ವಚ್ಛವಾಹಿಯು ನಿಗದಿಪಡಿಸಿದ ಕೇಂದ್ರ ಸಂಗ್ರಹಣೆ ಮಾಡಿ ಸಹಕರಿಸುವಂತೆ ವಿನಂತಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್, ಸದಸ್ಯರಾದ ರವಿರಾಜ ರೈ ಸಜಂಕಾಡಿ, ಸಂತೋಷ್ ಆಳ್ವ ಗಿರಿಮನೆ, ಕುಮಾರ ಅಂಬಟೆಮೂಲೆ, ವಸಂತ ಗೌಡ ಕನ್ನಯ, ಪದ್ಮನಾಭ ಕನ್ನಡ್ಕ, ಲಿಂಗಪ್ಪ ಗೌಡ ಮೋಡಿಕೆ, ಧರ್ಮೇಂದ್ರ ಕುಲಾಲ್ ಪದಡ್ಕ, ಕಲಾವತಿ ಗೌಡ, ಪಟ್ಲಡ್ಕ, ಶ್ರೀಮತಿ ಕನ್ನಡ್ಕ, ಹೇಮಾವತಿ ಮೋಡಿಕೆ, ಸುಜಾತ ಮೈಂದನಡ್ಕ, ಜ್ಯೋತಿ ಅಂಬಟೆಮೂಲೆ ಉಪಸ್ಥಿತರಿದ್ದರು.
ಗ್ರಾ.ಪಂ ಪ್ರಬಾರ ಅಭಿವೃದ್ಧಿ ಅಧಿಕಾರಿ ಮೋನಪ್ಪ ಕೆ ಸ್ವಾಗತಿಸಿ ,ವಂದಿಸಿದರು.