ರೋಟರಿ ಪುತ್ತೂರು ಸ್ವರ್ಣದಿಂದ ಮಗುವಿನ ಚಿಕಿತ್ಸೆಗೆ ಸಹಾಯಧನ ವಿತರಣೆ

0

ಪುತ್ತೂರು: ಬಿಸಿ ನೀರು ತಾಗಿ ಮೈ ಸುಟ್ಟು ಚಿಕಿತ್ಸೆ ಪಡೆಯುತ್ತಿರುವ ಮೂಲತಃ ಹಾವೇರಿ ಜಿಲ್ಲೆ ಮೇವುಂಡಿ ಗ್ರಾಮದ ನಿವಾಸಿ ಪ್ರಸ್ತುತ ಪುತ್ತೂರು ದರ್ಬೆ ಕಾವೇರಿ ಕಟ್ಟೆ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಲಕ್ಷ್ಮಿ ವೆಂಕಟೇಶ ದಂಪತಿ ಪುತ್ರಿ ಕುಮಾರಿ ವಂಶಿಕಾ ಎಂಬ ಚಿಕ್ಕ ಮಗುವಿನ ಚಿಕಿತ್ಸೆಗೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ವತಿಯಿಂದ ಧನ ಸಹಾಯವನ್ನು ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷರಾದ ಸುರೇಶ್ ಪಿ, ವಲಯ ಸೇನಾನಿ ವೆಂಕಟರಮಣ ಗೌಡ ಕಳುವಾಜೆ, ಮಾಜಿ ಅಧ್ಯಕ್ಷ ಭಾಸ್ಕರ ಕೋಡಿಂಬಾಳ, ಉಮೇಶ್ ಮನವೇಲು, ವಿಜಯ್ ವಿಲ್ಫ್ರೆಡ್ ಡಿ ಸೋಜಾ ಹಾಗೂ ಕೆ.ಪಿ. ನಾರಾಯಣ ರೈ ಇವರು ಉಪಸ್ಥಿತರಿದ್ದರು. ಈ ಮಗುವಿನ ಚಿಕಿತ್ಸೆಗೆ ಇನ್ನೂ ಕೂಡಾ ಹಣದ ಅವಶ್ಯಕತೆಯಿದ್ದು ತೀರಾ ಬಡ ಕುಟುಂಬದ ಹಿನ್ನಲೆಯುಳ್ಳ ಇವರಿಗೆ ಮಗುವಿನ ಚಿಕಿತ್ಸೆಗೆ ಸಹಾಯವನ್ನು ಮಾಡುವಂತೆ ಕ್ಲಬ್ ಅಧ್ಯಕ್ಷರಾದ ಸುರೇಶ್ ಪಿ ಇವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಮಗುವಿನ ಚಿಕಿತ್ಸೆಗೆ ಧನ ಸಹಾಯ ನೀಡಲು ಬಯಸುವವರು ಮಗುವಿನ ತಂದೆಯ ದೂರವಾಣಿ ಸಂಖ್ಯೆ  63638 90975‬ ಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here