ರಾಮಕುಂಜ: ದಾರುಸ್ಸಲಾಮ್ ಎಜುಕೇಶನ್ ಸೆಂಟರ್ ಬೆಳ್ತಂಗಡಿ ಇದರ ಅಧೀನದಲ್ಲಿ ದಾರುಸ್ಸಲಾಮ್ ಆತೂರು ಝೋನ್ ನೂತನ ಸಮಿತಿ ರಚನೆ ಗಂಡಿಬಾಗಿಲು ಖುತುಬಿಯ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಸಮಿತಿ ಅಧ್ಯಕ್ಷರಾಗಿ ರಫೀಕ್ ಗಂಡಿಬಾಗಿಲು, ಕಾರ್ಯದರ್ಶಿಯಾಗಿ ಸಿದ್ದೀಕ್ ಎನ್, ಖಜಾಂಚಿಯಾಗಿ ಶಾಹುಲ್ ಹಮೀದ್ ಕುಂಡಾಜೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನಝಿರ್ ಕೆ.ಕೆ, ಸಿದ್ದಿಕ್ ಸಿ.ಕೆ., ಎನ್.ಎ.ಇಸಾಕ್, ಜೊತೆ ಕಾರ್ಯದರ್ಶಿಗಳಾಗಿ ಖಲಂದರ್, ಇಬ್ರಾಹಿಂ, ಝಿಯಾದ್, ಮೀಡಿಯಾ ಇಂಚಾರ್ಜ್ ನಝೀರ್ ಕೊಯಿಲ, ಸಿದ್ದೀಕ್, ಆಸೀಫ್ ಗಂಡಿಬಾಗಿಲು, ಝೈನುದ್ದಿನ್ ಆತೂರು, ಸಂಘಟನೆ ಕಾರ್ಯದರ್ಶಿಯಾಗಿ ಮುನೀರ್ ಆತೂರು ಹಾಗೂ 11 ಸದಸ್ಯರನ್ನು ನೇಮಕ ಮಾಡಲಾಯಿತು. ಗೌರವ ಸಲಹೆಗರರಾಗಿ ಬಿ.ಕೆ ಮುಹಮ್ಮದ್ ಹಾಜಿ ಕುಂಡಾಜೆ, ಹಸೈನಾರ್ ಹಾಜಿ ಕೊಯಿಲ, ಬಡಿಲ ಹುಸೈನ್‌ರವರನ್ನು ಆಯ್ಕೆ ಮಾಡಲಾಯಿತು.
ದಾರುಸ್ಸಲಾಮ್ ಎಜುಕೇಶನ್ ಸೆಂಟರ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ಸಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಅಬ್ದುಲ್ ಹಮೀದ್ ಸೌಕತ್ ಫೈಝಿ ದಿಕ್ಸೂಚಿ ಭಾಷಣ ಮಾಡಿದರು. ಇಸಾಕ್ ಕೌಸರಿ ಹಾಗು ಅಶ್ರಫ್ ಯಾಮಾನಿ ಪ್ರಾಸ್ತಾವಿಕ ಭಾಷಣ ಮಾಡಿದರು. ಬಿ.ಕೆ ಅಬ್ದುಲ್ ಅಝೀಝ್, ಶಿಹಾಬ್ ಆಝ್‌ಹರಿ ಉಪಸ್ಥಿತರಿದ್ದರು. ಜಿ ಮುಹಮ್ಮದ್ ರಫೀಕ್ ಸ್ವಾಗತಿಸಿದರು. ಅಬ್ದುಲ್ ರಝಕ್ ಬೆಳ್ತಂಗಡಿ ವಂದಿಸಿದರು. ಇಸ್ಮಾಯಿಲ್ ತಂಗಳ್ ಉಪ್ಪಿನಂಗಡಿ ಕಾರ್ಯಕ್ರಮ ನಿರೂಪಿಸಿದರು.