ನಮ್ಮ ಊರು ನಮ್ಮ ಹೆಮ್ಮೆ -ನಮ್ಮ ತಾಲೂಕು ನಮ್ಮ ಹೆಮ್ಮೆ: ಈ ಅಭಿಯಾನದ ಪ್ರಥಮ ಪಂಚಾಯತ್ ಆಗಿ ಬೆಟ್ಟಂಪಾಡಿ ಆಯ್ಕೆ

0

ಯಾವುದೇ ಊರಿನ ಅಭಿವೃದ್ಧಿಗೆ ಸರಕಾರದ ಜವಾಬ್ದಾರಿಯ ಜತೆಗೆ ಜನರ, ದಾನಿಗಳ, ಸಂಘ ಸಂಸ್ಥೆಗಳ ಸಹಭಾಗಿತ್ವವೂ ಬೇಕು.
ಆಯಾ ಊರು ಊರಿನ ಜನರಿಗೆ ಹೆಮ್ಮೆ. ಇದನ್ನೇ ನಮ್ಮೂರು ನಮ್ಮ ಹೆಮ್ಮೆ ಎಂದು ವ್ಯಾಖ್ಯಾನಿಸಬಹುದು. ಜವಾವ್ದಾರಿಯುತ ಮಾಧ್ಯಮವಾಗಿ ಸುದ್ದಿ ಕೂಡಾ ಈ ಆಶಯದಡಿಯಲ್ಲೇ ಕೆಲಸ ನಿರ್ವಹಿಸುತ್ತಿದೆ.


ಈ ಮೇಲಿನ ವಿಚಾರಧಾರೆ ಮಹಾತ್ಮ ಗಾಂಽಯವರ ಗ್ರಾಮ ಸ್ವರಾಜ್ಯದ, ಸ್ವಾವಲಂಬಿ ಜೀವನದ ಆಶಯದಿಂದ ಪ್ರೇರಿತವಾದದ್ದು ಕೂಡಾ.
ಮಾಹಿತಿ ಮತ್ತು ಜನಾಂದೋಲನದ ಭಾಗವಾಗಿ ಪತ್ರಿಕೆ ಆರಂಭಿಸಿದ ಡಾ. ಯು.ಪಿ. ಶಿವಾನಂದರು ಒಂದೆರಡು ವರ್ಷಗಳ ಹಿಂದೆಯೇ ಈ ವಿಷಯ ಮತ್ತು ಆಶಯ ಪ್ರಸ್ತಾಪಿಸಿದ್ದರು. ಅದಕ್ಕೆ ದೆಹಲಿ ಮತ್ತು ಬೆಂಗಳೂರಿನಲ್ಲಿ ಉತ್ತಮ ಸ್ಪಂದನೆಯೂ ದೊರಕಿತ್ತು.


ಆದರೆ ಕಾರಣಾಂತರಗಳಿಂದ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಈಗ ಡಾ. ಶಿವಾನಂದರು ಈ ವಿಚಾರವನ್ನು ಮತ್ತೆ ಮುನ್ನಲೆಗೆ ತರುತ್ತಿದ್ದಾರೆ.
ನಮ್ಮೂರು ನಮ್ಮ ಹೆಮ್ಮೆ, ನಮ್ಮ ತಾಲೂಕು ನಮ್ಮ ಹೆಮ್ಮೆ ಎಂಬ ಚಿಂತನೆಯನ್ನು ನಮ್ಮ ಊರಿನಲ್ಲಿ ಮತ್ತು ಜಗತ್ತಿನಾದ್ಯಂತ ಇರುವ ನಮ್ಮ ಊರಿನವರಿಗೆ ಹರಡುವಂತೆ ಮಾಡಬೇಕೆಂಬ ಯೋಚನೆ, ಯೋಜನೆ ಅವರದು. ಆ ಮೂಲಕ ಜಗತ್ತಿನಾದ್ಯಂತ ಇರುವ ಊರಿನವರನ್ನು ಊರಿನವರೊಂದಿಗೆ ಸಂಪರ್ಕ, ಸಂವಹನ ಇಟ್ಟುಕೊಳ್ಳುವಂತೆ ಮಾಡುವುದರೊಂದಿಗೆ ಊರಿನ ಅಭಿವೃದ್ಧಿಗೆ ಕೈಜೋಡಿಸುವಂತೆ ಮಾಡುವುದು ಇದರ ಉದ್ದೇಶ.


ಇಂಥದ್ದೊಂದು ಮನಸ್ಸು ಅನೇಕರಲ್ಲಿ ಇದ್ದರೂ ಸಮರ್ಪಕ ಮಾಹಿತಿ ಮತ್ತು ಸಂವಹನದ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸುದ್ದಿ ಮಹತ್ವದ ಹೆಜ್ಜೆ ಇಡುತ್ತಿದೆ.
ಜಗತ್ತಿನಾದ್ಯಂತ ಮುಕ್ತ ಮಾರುಕಟ್ಟೆಗೆ ಅವಕಾಶ ದೊರಕಬೇಕು. ಆ ಮೂಲಕ ನಮ್ಮ ಊರು ಜಾಗತಿಕ ಮಟ್ಟದ ಸೌಲಭ್ಯ ಪಡೆಯಬೇಕು, ಅಭಿವೃದ್ದಿ ಹೊಂದಬೇಕು. ಜಗತ್ತಿನಲ್ಲಿರುವ ನಮ್ಮ ಊರಿನ ಎಲ್ಲರೂ ನಮ್ಮ ಊರು ನಮ್ಮ ಹೆಮ್ಮೆ, ನಮ್ಮ ತಾಲೂಕು ನಮ್ಮ ಹೆಮ್ಮೆ ಎಂದು ಹೇಳಿಕೊಳ್ಳುವಂತೆ ಮಾಡುವುದು ಈ ಯೋಜನೆಯ ಉದ್ದೇಶ. ಇದರ ಅನುಷ್ಠಾನದ ಹಿನ್ನೆಲೆಯಲ್ಲಿ ಗ್ರಾಮ ಗ್ರಾಮಗಳಲ್ಲಿ ಚಿಂತನಾ ಸಭೆಯೊಂದು ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ಊರಿನ ಬೇಡಿಕೆಗಳ ಪಟ್ಟಿ ತಯಾರಿಕೆಯೂ ನಡೆಯಲಿದೆ. ಸಾರ್ವಜನಿಕರು, ಸಂಘ ಸಂಸ್ಥೆಗಳು ಕೈ ಜೋಡಿಸಬೇಕೆಂಬುದು ‘ಸುದ್ದಿ’ಯ ಮನವಿಯಾಗಿದೆ.
*ಸುದ್ದಿ ಬಳಗ ಪುತ್ತೂರು

ಬೆಟ್ಟಂಪಾಡಿಯಲ್ಲಿ ಈ ವಾರ ‘ಅರಿವು’ ಅಭಿಯಾನ
‘ಸುದ್ದಿ’ ಸಹಯೋಗದಲ್ಲಿ ನಮ್ಮೂರು ನಮ್ಮ ಹೆಮ್ಮೆ ಮತ್ತು ‘ಅರಿವು’ ಕೇಂದ್ರ ಯೋಜನೆ ಹಿನ್ನೆಲೆಯಲ್ಲಿ ಗ್ರಾಮ ಭೇಟಿ ಮತ್ತು ಮಾಹಿತಿ ವಿನಿಮಯ ಸಭೆ ಡಿಸೆಂಬರ್ ತಿಂಗಳಿನಲ್ಲಿ ಬೆಟ್ಟಂಪಾಡಿಯಲ್ಲಿ ನಡೆಯಲಿದ್ದು ಇದಕ್ಕೆ ಪೂರ್ವಭಾವಿಯಾಗಿ ಬೆಟ್ಟಂಪಾಡಿ ಗ್ರಾಮದಲ್ಲಿ ಈ ವಾರ ಕ್ಷೇತ್ರ ಪರ್ಯಟನೆ ನಡೆಸಲಿದ್ದೇವೆ. ಗ್ರಾಮಸ್ಥರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮಾಹಿತಿ ನೀಡಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here