ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯಲ್ಲಿ ‘ಸ್ಪಾರ್ಕ್ -2024’ ಪ್ರೇರಕ ತರಗತಿ-ಧನಾತ್ಮಕ ಚಿಂತನೆ ಬೆಳೆಸಿಕೊಂಡ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಧಕರಾಗುತ್ತಾರೆ-ರಫೀಕ್ ಮಾಸ್ಟರ್

0

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನದೇ ಆದ ಪ್ರತಿಭೆ ಇದೆ, ‘ನನ್ನಿಂದ ಸಾಧ್ಯವಿದೆ’ ಎನ್ನುವ ಧನಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡು ಮುನ್ನಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಧಕರಾಗಿ ಗುರುತಿಸಿಕೊಳ್ಳುತ್ತಾರೆ ಎಂದು ಖ್ಯಾತ ತರಬೇತುದಾರ ರಫೀಕ್ ಮಾಸ್ಟರ್ ಮಂಗಳೂರು ಹೇಳಿದರು.

ನ.10ರಂದು ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯಲ್ಲಿ ಎಜುಕೇಷನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಆಯೋಜಿಸಿದ “ಸ್ಪಾರ್ಕ್ 2024” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಬೇತಿ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಕಲಿಕಾ ಸಮಯದಲ್ಲಿ ಇತರ ವಿಷಯಗಳಿಗೆ ಆದ್ಯತೆ ಕೊಡದೆ ಕಲಿಕೆಗೆ ಮಾತ್ರ ಗಮನ ಕೊಡಬೇಕು, ಕಲಿಕಾ ಸಂದರ್ಭದಲ್ಲಿ ಕಷ್ಟ ಕಾರ್ಪಣ್ಯಗಳಿದ್ದರೂ ಅದನ್ನು ಮೆಟ್ಟಿ ನಿಂತು ವಿದ್ಯೆ ಪಡೆಯಬೇಕು, ನಿರ್ಧಿಷ್ಟ ಗುರಿಯೊಂದಿಗೆ ಮುನ್ನಡೆದಾಗ ತಾವು ಕಂಡ ಕನಸು ನನಸಾಗಿಸಲು ಸಾಧ್ಯ ಎಂದ ಅವರು ಪೋಷಕರು ತಮ್ಮ ಮಕ್ಕಳು ಕೇಳಿದ್ದನ್ನೆಲ್ಲಾ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳಬಾರದು ಎಂದು ಹೇಳಿದರು.


ದಾರುಲ್ ಹಸನಿಯಾ ಅಕಾಡೆಮಿಯ ಅಧ್ಯಕ್ಷ ಸಯ್ಯಿದ್ ಶರಫುದ್ದೀನ್ ತಂಙಳ್ ಸಾಲ್ಮರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಲ್ಮರ ಅಸ್ವಾಲಿಹಾ ವುಮೆನ್ಸ್ ಕಾಲೇಜ್‌ನ ಉಸ್ತಾದ್ ಕೆ.ಎಂ.ಎ ಕೊಡುಂಗಾಯಿ, ಸಂಸ್ಥೆಯ ಮುದರ್ರಿಸ್ ಇಸ್ಮಾಯಿಲ್ ಅನ್ಸಾರಿ, ಉದ್ಯಮಿ ಜುನೈದ್ ಸಾಲ್ಮರ, ಪತ್ರಕರ್ತ ಯೂಸುಫ್ ರೆಂಜಲಾಡಿ ಮೊದಲಾದವರು ಶುಭ ಹಾರೈಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್ ಪುತ್ತೂರು, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಹಾಜಿ ಬಾಳಾಯ, ಸಂಸ್ಥೆಯ ಅಧ್ಯಾಪಕ ಹಾಫಿಳ್ ಸಲ್ಮಾನ್ ಅನ್ಸಾರಿ ಉಪಸ್ಥಿತರಿದ್ದರು.

ಲೋಗೋ ಬಿಡುಗಡೆ:
ಡಿಸೆಂಬರ್ 1.ರಂದು ನಡೆಯಲಿರುವ ಸಂಸ್ಥೆಯ ವಿದ್ಯಾರ್ಥಿಗಳ ವಾರ್ಷಿಕ ಕಲಾ ಪ್ರತಿಭಾ ಕಾರ್ಯಕ್ರಮದ ಲೋಗೋವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಕರೀಂ ದಾರಿಮಿ ಸ್ವಾಗತಿಸಿದರು. ಸಂಸ್ಥೆಯ ವಕ್ತಾರ ಅನ್ವರ್ ಮುಸ್ಲಿಯಾರ್ ಮೊಟ್ಟೆತ್ತಡ್ಕ ವಿವಿಧ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

LEAVE A REPLY

Please enter your comment!
Please enter your name here