ನ.13: ಕಾಚಿಲದಲ್ಲಿ ದೈವಗಳ ಪ್ರತಿಷ್ಠಾ ಕಲಶ

0

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ ಗುತ್ತು ಮನೆ ಮತ್ತು ಕಾಚಿಲ ಮೂಲಸ್ಥಳದಲ್ಲಿ ಗ್ರಾಮ ದೈವ ಶಿರಾಡಿ ಮತ್ತು ಪರಿಹಾರ ದೈವಗಳ ಚಾವಡಿಯು ಜೀರ್ಣೋದ್ಧಾರಗೊಂಡು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಅಡೆಕ್ಕಲ್ ಗುತ್ತು ಮನೆ ಮತ್ತು ಕಾಚಿಲ ಮೂಲ ಸ್ಥಾನದಲ್ಲಿ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳೊಂದಿಗೆ ನ.13ರಂದು ದೈವಗಳ ಪ್ರತಿಷ್ಠಾ ಕಲಶವು ನಡೆಯಲಿದೆ.


ನ.12ರಂದು ಸಂಜೆ 6:3೦ರಿಂದ ವಿವಿಧ ಧಾರ್ಮಿಕ ವಿಧಿ- ವಿಧಾನಗಳು ನಡೆದು, ಪ್ರಸಾದ ವಿತರಣೆಯಾಗಲಿದ್ದು, ನ.13ರಂದು ಬೆಳಗ್ಗೆ 6:3೦ರಿಂದ ಮಹಾಗಣಪತಿ ಹೋಮ, ಕಲಶ ಪೂಜೆ ಅಡೆಕ್ಕಲ್‌ಗುತ್ತು ಮನೆಯಲ್ಲಿ ನಡೆಯಲಿದ್ದು, ಬೆಳಗ್ಗೆ 9:3೦ರಿಂದ 1೦:34ರ ಧನು ಲಗ್ನದ ಶುಭ ಮುಹೂರ್ತದಲ್ಲಿ ಕಾಚಿಲದಲ್ಲಿ ಶಿರಾಡಿ, ಪಂಜುರ್ಲಿ, ಕಲ್ಕುಡ, ಕಲ್ಲುರ್ಟಿ ದೈವಗಳ ಪ್ರತಿಷ್ಠೆ, ಆಶ್ಲೇಷ ಬಲಿ, ಸಾನಿಧ್ಯ ಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5:30ರಿಂದ ಅಡೆಕ್ಕಲ್ ಗುತ್ತು ಮನೆಯಿಂದ ಶಿರಾಡಿ ಹಾಗೂ ಪರಿವಾರ ದೈವಗಳ ಭಂಡಾರ ಹೊರಟು ಕಾಚಿಲ ಮೂಲ ಸ್ಥಾನದಲ್ಲಿ ನೇಮೋತ್ಸವ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here