ಪುತ್ತೂರು:ಎಂಪಾಸಿಸ್ ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೆಜ್ಮೆಂಟ್ ಕಾಲೇಜ್ ಅಡ್ಯಾರ್ ಆಯೋಜಿಸಿದ ಸಿನರ್ಜಿ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ 2024 ಸ್ಪರ್ಧೆಯಲ್ಲಿ ಭಾಗವಹಿಸಿದ ಸುದಾನ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಬಿ ಧ್ಯಾನ್ ಶೆಟ್ಟಿ ಹಾಗೂ ಕೆ ಜೆ ತ್ರಿಶಾಲ್ ಕುಮಾರ್ ದ್ವಿತೀಯ ಸ್ಥಾನವನ್ನು ಹಾಗೂ ನಗದು ಬಹುಮಾನ ರು.10 ಸಾವಿರವನ್ನು ಪಡೆದಿರುತ್ತಾರೆ.
ಇವರಿಗೆ ಉಪನ್ಯಾಸಕಿ ಧನ್ಯಶ್ರೀ ತರಬೇತಿ ನೀಡಿರುತ್ತಾರೆ. ಬಿ ಧ್ಯಾನ್ ಶೆಟ್ಟಿಯವರು ಬನ್ನೂರು ಆನೆಮಜಲು ನಿವಾಸಿ ಉಮೇಶ್ ಶೆಟ್ಟಿ ಬಿ ಮತ್ತು ಶಾಂತಿ ದಂಪತಿಯ ಪುತ್ರ ಹಾಗೂ ಕೆ ಜೆ ತ್ರಿಶಾಲ್ ಕುಮಾರ್ ಕೆದಿಲ ನಿವಾಸಿ ಜಿನ್ನಪ್ಪ ಕೆ ಮತ್ತು ವಿಜಯಲಕ್ಷ್ಮಿ ಕೆ ಜೆ ಇವರ ಪುತ್ರ. ವಿಜೇತ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರಾದ ಸುಪ್ರೀತ್ ಕೆಸಿ ಅಭಿನಂದಿಸಿದ್ದಾರೆ.