ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ -ದ.ಕ.ಜಿಲ್ಲಾ ಬಿಜೆಪಿ ಯುವಮೋರ್ಛ ಜಿಲ್ಲಾ ಕಾರ್ಯದರ್ಶಿ ಶ್ರೀಕೃಷ್ಣ ಎಂ. ಆರ್

0

ಕಡಬ: ಕಸ್ತೂರಿರಂಗನ್ ವರದಿ ವಿರೋಧಿಸಿ ನ.15ರಂದು ಗುಂಡ್ಯದಲ್ಲಿ ನಡೆಯುವ ಬೃಹತ್ ಪ್ರತಿಭಟನೆಗೆ ಎಲ್ಲರೂ ಬೆಂಬಲಿಸಿ, ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ದ.ಕ.ಜಿಲ್ಲಾ ಬಿಜೆಪಿ ಯುವಮೋರ್ಛದ ಜಿಲ್ಲಾ ಕಾರ್ಯದರ್ಶಿ ಶ್ರೀಕೃಷ್ಣ ಎಂ. ಆರ್.ವಿನಂತಿಸಿದ್ದಾರೆ.


ಈ ಪ್ರತಿಭಟನೆ ಪಶ್ಚಿಮಘಟ್ಟ ತಪ್ಪಲಿನ ಜನರ ಬದುಕಿಗೆ ಬೇಕಾಗಿ ನಡೆಯುತ್ತಿದೆ. ಇದರಲ್ಲಿ ಜಾತಿ, ಧರ್ಮ, ಪಕ್ಷ ಯಾವುದೂ ಇಲ್ಲ, ಯೋಜನೆ ಜಾರಿಯಾಗುವ ಮುನ್ನ ನಾವು ಎಚ್ಚೆತ್ತುಕೊಳ್ಳದಿದ್ದರೆ, ಪಶ್ಚಿಮ ಘಟ್ಟ ತಪ್ಪಲಿನ ಮೂರು ತಾಲೂಕುಗಳ ಭಾದಿತ ಗ್ರಾಮ ಮತ್ತು ಇತರ ಗ್ರಾಮಗಳ ಅಭಿವೃದ್ದಿ ಕುಂಠಿತವಾಗಿ ಜೀವನ ನಡೆಸಲು ಕಷ್ಟ ಆಗುವ ದಿನ ಬರಲಿದೆ. ಆದುದರಿಂದ ಎಲ್ಲರೂ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here