ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿರುವ ರಸ್ತೆಗಳು ಸಂಪೂರ್ಣ ಹದೆಗೆಟ್ಟಿದ್ದು, ವಾಹನ ಚಾಲಕರಿಗೆ ತೊಂದರೆ ಉಂಟಾಗಿದೆ. ಹಾಗಾಗಿ ರಸ್ತೆ ದುರಸ್ತಿಗೊಳಿಸುವಂತೆ ಪುತ್ತೂರು ಕರ್ನಾಟಕ ರಿಕ್ಷಾ ಮಾಲಕರ ಸಂಘದಿಂದ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಪೌರಾಯುಕ್ತರಿಗೆ ಮನವಿ ಮಾಡಿದ್ದಾರೆ.
ಹದಗೆಟ್ಟ ರಸ್ತೆಯಿಂದಾಗಿ ನಾವು ದುಡಿದ ಹಣ ರಿಕ್ಷಾ ರಿಪೇರಿಗೆ ಹಾಕುವ ಪರಿಸ್ಥಿತಿ ಬಂದಿದೆ. ಧೂಳಿನಿಂದಾಗಿ ನಮ್ಮ ಆರೋಗ್ಯವೂ ಕೆಟ್ಟು ಹೋಗಿದೆ. ಹಾಗಾಗಿ ತಕ್ಷಣ ರಸ್ತೆ ದುರಸ್ತಿಗೊಳಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಸಂಘದ ಅಧ್ಯಕ್ಷ ಅರುಣ್ ಕುಮಾರ್ ಸಂಪ್ಯ, ಕಾರ್ಯದರ್ಶಿ ಮಹಮ್ಮದ್ ಎ, ಕಾರ್ಯಾಧ್ಯಕ್ಷ ಕೆ.ಜಯರಾಮ ಕುಲಾಲ್, ಸಲಹೆಗಾರರಾದ ಗಿರೀಶ್ ನಾಯ್ಕ್ ಸೊರಕೆ, ಸದಸ್ಯರಾದ ಯತೀಶ್, ಕೃಷ್ಣಪ್ಪ, ಉಮ್ಮರ್, ಬಾಲಕೃಷ್ಣ ಗೌಡ, ಕೆ ವಿಠಲ ನಾಯ್ಕ, ಹಮೀದ್ ಮನವಿ ನೀಡುವ ಸಂದರ್ಭ ಉಪಸ್ಥಿತರಿದ್ದರು.