ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯದ ಆಶ್ರಯದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ಮತ್ತು ರೋಟರಿ ಯುವ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಗೀತೆ ಗಾಯನ ಸ್ಪರ್ಧೆ ಮತ್ತು ಜೀವನದ ಬೆಳವಣಿಗೆಗೆ ಶಿಕ್ಷಣದಲ್ಲಿ ಕನ್ನಡ ಭಾಷೆ ಬೇಕೆ.. ? ಬೇಡವೇ….? ಚರ್ಚಾ ಸ್ಪರ್ಧೆ ನ. 11ರಂದು ನೆಹರೂನಗರ ವಿವೇಕಾನಂದ ಸ್ನಾತಕೋತ್ತರ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಮತ್ತು ರೋಟರಿ ಯುವ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ ಉದ್ಘಾಟಿದರು.
ಚರ್ಚಾ ಸ್ಪರ್ಧಾ ತೀರ್ಪುಗಾರರಾಗಿ ಬೆವೆಲ್ ಫಾರ್ಮಾ ಮಂಗಳೂರು ಸಿಇಒ ಡಾ. ಅನಿಲ ದೀಪಕ್ ಶೆಟ್ಟಿ, ನ್ಯಾಯವಾದಿ ಸೀಮಾ ನಾಗರಾಜ್ ಮತ್ತು ಕನ್ನಡ ಉಪನ್ಯಾಸಕರಾದ ಮಧು ಕುಮಾರ್ ಹಾಗೂ ಕನ್ನಡ ಗೀತೆ ಗಾಯನ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಕವಿತಾ ದಿನಕರ್, ಚೈತ್ರಿಕಾ ಮತ್ತು ಗೀತಾ ಗಂಗಾಧರ್ ಆಚಾರ್ಯ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮವನ್ನು ರೇಡಿಯೋ ಪಾಂಚಜನ್ಯ ನಿಲಯ ನಿರ್ದೇಶಕಿ ತೇಜಸ್ವಿನಿ ರಾಜೇಶ್ ನಿರೂಪಿಸಿದರು. ತಾಂತ್ರಿಕ ಸಲಹೆಗಾರ ಪ್ರಶಾಂತ್, ಪ್ರಜ್ಞಾ ಸಿದ್ಧಾರ್ಥ್ ಮತ್ತು ತ್ರಿವೇಣಿ ಗಣೇಶ್ ಸಹಕರಿಸಿದರು.
ಚರ್ಚಾ ಸ್ಪರ್ಧೆಯ ವಿಜೇತರಾಗಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಪ್ರಜ್ಞಾ ನಿಡ್ವಣ್ಣಾಯ ಮತ್ತು ಗಗನ (ಪ್ರಥಮ), ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ಅಧ್ವೈತಕೃಷ್ಣ ಮತ್ತು ಜ್ವಲನ್ ಜೋಶಿ (ದ್ವಿತೀಯ), ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಧನುಷ್ ಮತ್ತು ಕೌಶಿಕ್ (ತೃತೀಯ)ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕನ್ನಡ ಗೀತೆ ಗಾಯನ ಸ್ಪರ್ಧೆಯ 5 ರಿಂದ 7ನೇ ತರಗತಿ ವಿಭಾಗದಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಅನುಪ್ರಿಯ (ಪ್ರಥಮ), ನೆಹರೂನಗರ ವಿವೇಕಾನಂದ ಸೆಂಟ್ರಲ್ ಸ್ಕೂಲ್ನ ವಿದ್ಯಾರ್ಥಿನಿ ಧೃತಿ ಬಿ ಮತ್ತು ದರ್ಬೇತ್ತಡ್ಕ ಶಾಲಾ ವಿದ್ಯಾರ್ಥಿ ತೇಜಸ್ ಎಲ್.ಕೆ (ದ್ವಿತೀಯ), ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಗರೀಮಾ (ತೃತೀಯ) ಸ್ಥಾನವನ್ನು ಪಡೆದುಕೊಂಡಿದ್ದಾರೆ.
8 ರಿಂದ 10 ನೇ ತರಗತಿ ವಿಭಾಗದ ಕನ್ನಡ ಗೀತೆ ಗಾಯನ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಆದ್ಯಾ (ಪ್ರಥಮ), ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಸಿರಿ ಹಿಳ್ಳೇಮನೆ ಮತ್ತು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿ ನೇಹಾಲ್ (ದ್ವಿತೀಯ), ಪುತ್ತೂರು ರಾಮಕೃಷ್ಣ ಪ್ರೌಢ ಶಾಲಾ ವಿದ್ಯಾರ್ಥಿಗಳಾದ ಸಮರ್ಥ್ ಪಿ. ಮತ್ತು ಅವನಿ ನಾಯಕ್ (ತೃತೀಯ) ಸ್ಥಾನವನ್ನು ಪಡೆದುಕೊಂಡಿದ್ದಾರೆ.