ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ ನೂತನ ಶಾಲಾ ಕೊಠಡಿಗೆ ಶಿಲಾನ್ಯಾಸ

0

ಎಂ. ಆರ್. ಪಿ .ಎಲ್, (ಸಿ ಎಸ್ ಆರ್ )ಅನುದಾನದಡಿ 30 ಲಕ್ಷ ರೂಪಾಯಿಯ ಎರಡು ತರಗತಿ ಕೊಠಡಿ ಮತ್ತು ಶೌಚಾಲಯಕ್ಕೆ ಶಿಲಾನ್ಯಾಸ

ಪುತ್ತೂರು: ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಇಲ್ಲಿಗೆ ಎಂ ಆರ್ ಪಿ ಎಲ್ (ಸಿ ಎಸ್ ಆರ್ )ಅನುದಾನದಲ್ಲಿ ಎರಡು ತರಗತಿ ಕೊಠಡಿಗಳು ಮತ್ತು ಶೌಚಾಲಯದ ಶಿಲಾನ್ಯಾಸವನ್ನು ಶಾಸಕ ಅಶೋಕ್ ಕುಮಾರ್ ರೈ ನೆರವೇರಿಸಿದರು. ಆ ಬಳಿಕ ಮಾತನಾಡಿದ ಅವರು ಈ ಸರಕಾರಿ ಪ್ರೌಢಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಖಂಡಿತ ಮಾಡುತ್ತೇನೆ ಆ ಮೂಲಕ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಕನಸನ್ನು ನನಸಾಗಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಫೌಝಿಯಾ ಇಬ್ರಾಹಿಂ,ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಇದರ ಕಾರ್ಯಾಧ್ಯಕ್ಷ ಶ್ರೀರಾಮ್ ಪಕ್ಕಳ. ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಮೇನಾಲ, ಗ್ರಾಮ ಪಂಚಾಯತಿ ಸದಸ್ಯರಾದ ಇಬ್ರಾಹಿಂ ಪಳ್ಳತ್ತೂರು, ವೆಂಕಪ್ಪ ನಾಯ್ಕ ಮೇನಾಲ,ಇಂದಿರಾ, ಪ್ರಪುಲ್ಲಾ ರೈ, ಮುಖಂಡರಾದ ಎನ್ ಮೂಸನ್, ಶಿಕ್ಷಣ ತಜ್ಞರಾದ ಸದಾಶಿವ ರೈ ನಡುಬೈಲು, ಖಾದರ್ ಕರ್ನೂರು, ಕರ್ನೂರು ಪ್ರಾಥಮಿಕ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸೂಫಿ ಬಾಂಟ್ಟಡ್ಕ, ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಸಮಿತಿಯ ಸದಸ್ಯರಾದ ವಿಕ್ರಂ ರೈ ಮೂಲೆ, ಮಹಮ್ಮದ್ ಪಳ್ಳತ್ತೂರು, ಕೆ ಎಂ ಸಾಂತ್ಯ, ಅಬ್ದುಲ್ ಖಾದರ್ ಸುರುಳಿ, ಮೊಹಮ್ಮದ್ ಮೇನಾಲ, ಅಶ್ರಫ್ ಕತಾರ್, ಕಟ್ಟಡ ಗುತ್ತಿಗೆದಾರ ಅಜೀಜ್ ಓಣಿಯಡ್ಕ, ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಪ್ರೇಮ್ ಕುಮಾರ್ ಸ್ವಾಗತಿಸಿದರು, ಶಿಕ್ಷಕರಾದ ಪುರುಷೋತ್ತಮ, ಇಂದಿರಾ, ರಮಿತಾ ಹಾಗೂ ಅತಿಥಿ ಶಿಕ್ಷಕರಾದ ಮೀನಾಕ್ಷಿ, ದಮಯಂತಿ
ಮೋನಿಷಾ ಹಾಗೂ ಕಚೇರಿ ಸಿಬ್ಬಂದಿಯಾದ ಹೇಮಾವತಿ ಸಹಕರಿಸಿದರು.ವಿಶ್ರಾಂತ ಮುಖ್ಯ ಶಿಕ್ಷಕ ಮಹಾಬಲ ರೈ ಕರ್ನೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here