ಪುತ್ತೂರು: ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ವಿಭಾಗದಲ್ಲಿ ಮಕ್ಕಳ ದಿನಾಚರಣೆ ಹಾಗೂ ಛದ್ಮವೇಷ ಸ್ಪರ್ಧೆಯನ್ನು ನ.14 ರಂದು ನಡೆಸಲಾಯಿತು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾಜಿ ಕಾರ್ಯಾಧ್ಯಕ್ಷ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ದೀಪ ಬೆಳಗಿಸಿ, ನೆಹರೂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದ ಪ್ರಥಮ ಪ್ರಧಾನಿ ಜವಹರಲಾಲ ನೆಹರೂರವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದ್ದು ಈ ಬಗ್ಗೆ ಇಂದಿನ ಮಕ್ಕಳಿಗೆ ನೆಹರೂರವರ ಜೀವನದ ಆದರ್ಶಗಳನ್ನು ತಿಳಿಸಿ ಹೇಳಬೇಕಾದ ಅಗತ್ಯತೆ ಇದೆ ಎಂದರು.
ಛದ್ಮವೇಷ ಸ್ಪರ್ಧೆಯ ಬಗ್ಗೆ ಮಾತನಾಡಿದ ಅವರು, ಕುಂಬ್ರ ಶಾಲೆಯಲ್ಲಿ ಹಿಂದಿನಿಂದಲೇ ಛದ್ಮವೇಷ ಸ್ಪರ್ಧೆಗಳು ನಡೆದುಕೊಂಡು ಬರುತ್ತಿದ್ದವು ಒಮ್ಮೆ ನಿಂತು ಹೋಗಿದ್ದ ಈ ಕಲಾಪ್ರಕಾರವನ್ನು ಮತ್ತೆ ತರುವ ಪ್ರಯತ್ನವನ್ನು ಮಾಡಿರುವುದು ಶ್ಲಾಘನೀಯ, ನಾನು ಕೂಡ ಛದ್ಮವೇಷ ಸ್ಪರ್ಧೆಯಿಂದಲೇ ಒಬ್ಬ ಕಲಾವಿದನಾಗಿ ಮೇಲೆ ಬಂದವ ಎಂದು ಹೇಳಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ನ್ಯಾಯವಾದಿ ನಾರಾಯಣ ನಾಯ್ಕ್, ಪತ್ರಕರ್ತ ಸಿಶೇ ಕಜೆಮಾರ್, ಕೆಪಿಎಸ್ ಪ್ರೌಢ ಶಾಲಾ ವಿಭಾಗದ ಹಿಂದಿ ಮುಖ್ಯಸ್ಥೆ ಸಂದ್ಯಾ ಉಪಸ್ಥಿತರಿದ್ದರು. ಕೆಪಿಎಸ್ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರು ಜ್ಯೂಲಿಯಾನ ಮೊರಸ್ ಸ್ವಾಗತಿಸಿದರು. ಸಹ ಶಿಕ್ಷಕ ಶಿವಪ್ಪ ರಾಥೋಡ್ ವಂದಿಸಿದರು. ಸಹ ಶಿಕ್ಷಕಿ ಪ್ರಶಾಂತಿ ಬಿ.ಕಾರ್ಯಕ್ರಮ ನಿರೂಪಿಸಿದರು ಸಹ ಶಿಕ್ಷಕಿಯರಾದ ದೇವಕಿ, ಶೋಭಾ, ಚಂದ್ರಕಲಾ, ವಿದ್ಯಾ, ಪ್ರತಿಮಾ, ಸೌಮ್ಯ, ನಳಿನಿ, ಚಿತ್ರಾ, ಭಾಗ್ಯಜ್ಯೋತಿ, ದಿವ್ಯಾ, ಅಂಗನವಾಡಿ ಶಿಕ್ಷಕಿ ಆಶಾಲತಾ ರೈ, ಸಹಾಯಕಿಯರಾದ ರಾಜೀವಿ, ನವೀನಾ, ಬಿ.ಎಡ್ ವಿದ್ಯಾರ್ಥಿ ಶಿಕ್ಷಕಿಯರಾದ ಚರಿತಾ, ರೇಷ್ಮಾ ಸಹಕರಿಸಿದ್ದರು.
ಗಮನ ಸೆಳೆದ ಛದ್ಮವೇಷ ಸ್ಪರ್ಧೆ
ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಪುಟಾಣಿಗಳಿಂದ ಹಿಡಿದು ಎಲ್‌ಕೆಜಿ, ಯುಕೆಜಿ ಹಾಗೂ 7 ನೇ ತರಗತಿ ತನಕದ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ ನಡೆಯಿತು. ಹಲವು ಮಂದಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತೀರ್ಪುಗಾರರಾಗಿ ಪತ್ರಕರ್ತ ಸಿಶೇ ಕಜೆಮಾರ್, ಕೆಪಿಎಸ್ ಹಿಂದಿ ಶಿಕ್ಷಕಿ ಸಂದ್ಯಾ,ಬಿ.ಎಡ್ ವಿದ್ಯಾರ್ಥಿ ಶಿಕ್ಷಕಿ ದೀಕ್ಷಾ ಸಹಕರಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.