-50 ವರ್ಷ ದಾಂಪತ್ಯ ಜೀವನ ಪೂರೈಸಿದ ಇಚ್ಲಂಪಾಡಿ ಗ್ರಾಮ ಒಕ್ಕೂಟದ ಮಾದರಿ ದಂಪತಿಗಳಿಗೆ ಸನ್ಮಾನ
ಇಚ್ಲಂಪಾಡಿ:ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಒಕ್ಕಲಿಗ ಸ್ವ ಸಹಾಯ ಸಂಘಗಳಿರುವ ಎಲ್ಲ ಗ್ರಾಮಗಳಲ್ಲಿ ದಾಂಪತ್ಯ ಜೀವನದ ಐವತ್ತು ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನೆಲ್ಯಾಡಿ ವಲಯದ ಇಚ್ಲಂಪಾಡಿ ಗ್ರಾಮ ಒಕ್ಕೂಟದ ಕಲ್ಯ ಮೋನಪ್ಪ ಗೌಡರ ಮನೆಯಲ್ಲಿ ಸನ್ಮಾನ ಕಾರ್ಯಕ್ರಮ ನ 9 ರಂದು ನಡೆಯಿತು.
ಕಾರ್ಯಕ್ರಮವನ್ನು ಊರ ಗೌಡರಾದ ರಾಮಕೃಷ್ಣ ಗೌಡ ಊರಮೇರು ಇವರು ದೀಪ ಬೆಳಗಿಸಿ ಶುಭ ಹಾರೈಸಿದರು.ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಅಧ್ಯಕ್ಷರಾದ ಡಿ ವಿ ಮನೋಹರ ಗೌಡರು ಪ್ರಾಸ್ತಾವಿಕವಾಗಿ ಮಾತನಾಡಿ ಟ್ರಸ್ಟ್ ನ ಸಮಗ್ರ ಮಾಹಿತಿಯನ್ನು ನೀಡಿದರು.
ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ 50 ವರ್ಷ ಪೂರೈಸಿದ ಮಾದರಿ ದಂಪತಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ಗ್ರಾಮ ಸಮಿತಿ ಅಧ್ಯಕ್ಷರಾದ ಭಾಸ್ಕರ ಗೌಡ ಒಡ್ಯತ್ತಡ್ಕ ವಲಯಾಧ್ಯಕ್ಷರಾದ ವಸಂತ ಗೌಡ ಬಿಜೇರು, ವಲಯ ಟ್ರಸ್ಟ್ ನಿರ್ದೇಶಕರಾದ ರವಿಚಂದ್ರ ಹೊಸವಕ್ಲು ರಾಧಾಕೃಷ್ಣ ಗೌಡ ಕೇರ್ನಡ್ಕ ಮತ್ತು ಸಂಘಗಳ ಸದಸ್ಯರು ಉಪಸ್ಥಿತರಿದ್ದರು.
ನಂದಾ ಪಾದೆ ಪಾರ್ಥಿಸಿದರು.ರೇಖಾ ಚಿಂತನ ವಾಚಿಸಿದರು. ಹರೀಶ್ ಗೌಡ ನೇರ್ಲ ಸ್ವಾಗತಿಸಿದರು.ಮೇಲ್ವಿಚಾರಕರಾದ ವಿಜಯ ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿದರು. ವಲಯದ ಪ್ರೇರಕರಾದ ಪರಮೇಶ್ವರ ಗೌಡ ಕೊಂಬಾರು ವಂದನಾರ್ಪಣೆಯನ್ನು ಮಾಡಿದರು.
ಸನ್ಮಾನಿಸಲಾದ ಇಚ್ಲಂಪಾಡಿ ಗ್ರಾಮ ಒಕ್ಕೂಟ ಮಾದರಿ ದಂಪತಿಗಳು
ಶ್ರೀಮತಿ ಸೀತಮ್ಮ ಮತ್ತು ಶ್ರೀ ಬಾಲಪ್ಪ ಗೌಡ ಪೈಸಾರಿ ಮನೆ
ಶ್ರೀಮತಿ ವಿಜಲಯಲಕ್ಷ್ಮಿ ಮತ್ತು ಶ್ರೀ ಮೋನಪ್ಪ ಗೌಡ ಕಲ್ಯ ಮನೆ
ಶ್ರೀಮತಿ ಕುಸುಮಾವತಿ ಮತ್ತು ಕುಶಾಲಪ್ಪ ಗೌಡ ಕುಡಾಲ ಮನೆ
ಶ್ರೀಮತಿ ಕುಸುಮಾವತಿ ಮತ್ತು ಶ್ರೀ ಚಂದ್ರಶೇಖರ ಗೌಡ ನಡುಮನೆ
ಶ್ರೀಮತಿ ಲಕ್ಷ್ಮಿ ಮತ್ತು ಶೀನಪ್ಪ ಗೌಡ ಕುಡಾಲ ಮನೆ