ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ಕ್ಷೇತ್ರ ಸಮಿತಿ ಪುತ್ತೂರು ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಟೈಲರ್ ಕುಟುಂಬ ಸಮ್ಮಿಲನ ಕಾರ್ಯಕ್ರಮ ನ.17ರಂದು ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪದ್ಮಶ್ರೀ ಸೋಲಾರ್ ಸಿಸ್ಟಂನ ಮಾಲಕ, ಉದ್ಯಮಿ ಕೆದಂಬಾಡಿಗುತ್ತು ಸೀತಾರಾಮ ರೈ ಹಾಗೂ ವಕೀಲರಾದ ತೇಜಸ್ ನಾೃಕ್ ಕೊಂಬೆಟ್ಟು, ಅಸೋಷಿಯೋಷನ್ ಪದಾಧಿಕಾರಿಗಳು ನೆರವೇರಿಸಿದರು.
ಜಿಲ್ಲಾ ಮಾಜಿ ಅಧ್ಯಕ್ಷ ಜಯಂತ ಉರ್ಲಾಂಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷರ ಶ್ರೀಮತಿ ವಿದ್ಯಾಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಎಸ್ ಕೋಡಿ, ರಾಜ್ಯ ಅಂತರಿಕ ಲೆಕ್ಕ ಪರಿಶೋಧಕ ರಘುನಾಥ್ ಬಿ, ಜಿಲ್ಲಾ ಉಪಾಧ್ಯಕ್ಷರಾದ ಶಂಭು ಬಲ್ಯಾಯ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಚಿತ್ರ ಬಿ.ಸಿ., ಕೋಶಾಧಿಕಾರಿ ಪರಮೇಶ್ವರ ಅನಿಲ ಉಪಸ್ಥಿತರಿದ್ದರು.
ಹರಿಣಿ ಗೌಡ ಪ್ರಾರ್ಥಿಸಿ, ಕಾರ್ಯಕ್ರಮ ನಿರ್ವಹಣೆ ನಿರೂಪಿಸಿದರು. ಶಂಭು ಬಲ್ಯಾಯ ವಂದಿಸಿದರು.