ಕಡಬ: ಕಡಬ ತಾಲೂಕು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ನ.16ರಂದು ಸಂಜೆ ನಡೆದ ಸಂಕ್ರಾತಿ ಪೂಜೆ ಸಂದರ್ಭ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಸ್ಯಾಕ್ಸೋಫೋನ್ ವಾದನದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತರಾದ ವೇಣುಗೋಪಾಲ್ ಪುತ್ತೂರು, ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ಇತ್ತೀಚೆಗೆ ಗುಜರಾತ್‌ನಲ್ಲಿ ನಡೆದ ಪ್ರಧಾನಮಂತ್ರಿಯವರ ರ‍್ಯಾಲಿಯಲ್ಲಿ ಎನ್‌ಸಿಸಿಯ ಕರ್ನಾಟಕ-ಗೋವಾ ಡೈರಕ್ಟರೇಟ್ ಪ್ರತಿನಿಧಿಸಿ ಡಿ ಜಿ ಎಪ್ರೀಸಿಯೇಟ್ ಕೆಡೆಟ್ ಗೌರವ ಪಡೆದ ಕಲಾ ಪ್ರತಿಭೆ ಅನುಜ್ಞಾ ವೈ.ಟಿ ಆನೆಗುಂಡಿ, ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಕಬಡ್ಡಿಯಲ್ಲಿ ಸಾಧನೆಗೈದ ವಾತ್ಸಲ್ಯಾ ಬಿ. ಗೌಡ ಬೆಂಗದಪಡ್ಪು, ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ವಾಲಿಬಾಲ್‌ನಲ್ಲಿ ಸಾಧನೆಗೈದ ಶ್ರೀಯಾ ಎಸ್ ಶೆಟ್ಟಿ ಬಂತೆಜಾಲು ಅವರನ್ನು ಸನ್ಮಾನಿಸಲಾಯಿತು.
ಕೊಯಿಲ-ಗೋಕುಲನಗರ ಯಕ್ಷನಂದನಾ ಕಲಾ ಸಂಘ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ, ದೇವಸ್ಥಾನದ ಅಭಿವೃದ್ದಿ ಸಮಿತಿ ಪದಾಧಿಕಾರಿಗಳಿಗೆ, ಗ್ರಾಮದ ಬೈಲುವಾರು ಭಜನಾ ತಂಡಗಳಿಗೆ ಗೌರವಾರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಮಾಜಿ ಸದಸ್ಯರಾದ ವಿನಯ ರೈ ಕೊಯಿಲಪಟ್ಟೆ, ಶ್ರೀರಾಮ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಯಕ್ಷನಂದನಾ ಕಲಾ ಸಂಘದ ಭಾಸ್ಕರ ಬಟ್ಟೋಡಿ, ಗಣರಾಜ ಕುಂಬ್ಳೆ, ಮುರಳಿಕೃಷ್ಣ ಬಡಿಲ, ದೇವಸ್ಥಾನದ ಅಭಿವೃದ್ದಿ ಸಮಿತಿ, ಬೈಲುವಾರು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಭಿವೃದ್ದಿ ಸಮಿತಿ ಪ್ರಧಾನ ಕಾರ್ಯದರ್ಶಿ ಚೇತನ್ ಆನೆಗುಂಡಿ ಸ್ವಾಗತಿಸಿ, ವಂದಿಸಿದರು.