ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 22ನೇ ಮಡಂತ್ಯಾರು ಶಾಖೆ ಉದ್ಘಾಟನೆ

0

ಪುತ್ತೂರು: ಸಂಸ್ಥೆ ಪಾರದರ್ಶಕವಾಗಿ ವ್ಯವಹಾರ ನಡೆಸಿದಾಗ ಯಶಸ್ಸು ಸಾಧ್ಯ.ನಮ್ಮನ್ನು ನಾವು ಅರಿತು ಬದುಕಾಗಬೇಕು. ಅರಿವೇ ಗುರು ಎನ್ನುವ ಮನಸ್ಸು ಎಲ್ಲರಲ್ಲೂ ಮೂಡಬೇಕು. ಸಮಾಜದ ಉನ್ನತಿಗೆ ಸಹಕಾರ ತತ್ವದ ಪಾತ್ರ ಮಹತ್ವದ್ದು, ಮಾನವೀಯ ಮೌಲ್ಯವನ್ನ ಗಟ್ಟಿಗೊಳಿಸುವ ಕೆಲಸ ಆಗಬೇಕಿದೆ.
ಬದುಕು ಗಟ್ಟಿಯಾಗಲು ಸಂಸ್ಕಾರ, ಸಹಕಾರ, ಸಂಘಟನೆ, ಸಮೃದ್ದಿ ಅಗತ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ನ.18ರಂದು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 22ನೇ ಮಡಂತ್ಯಾರು ಶಾಖೆಯನ್ನು ಬೆಳ್ತಂಗಡಿ ತಾಲೂಕಿನ ಪಾರಂಕಿ ಗ್ರಾಮದ ಮಡಂತ್ಯಾರು ‘ಆಲ್ಫಾ ಕಾಂಪ್ಲೆಕ್ಸ್’ ನ ಮೊದಲನೇ ಮಹಡಿಯಲ್ಲಿ ಉದ್ಘಾಟನೆಗೊಳಿಸಿ ಆಶೀರ್ವಚನ ನೀಡಿದರು.

ಅರ್ಹತೆ ನೋಡಿ ಸಹಕಾರ ನೀಡುವ ಕೆಲಸವಾಗಬೇಕು. ಸಂಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ. ಸಾಮಾನ್ಯ ಜನರಿಗೆ ಸೇವೆ ಸಿಗಬೇಕೆನ್ನುವ ನಿಟ್ಟಿನಲ್ಲಿ ಸಂಸ್ಥೆಯ ಹುಟ್ಟಾಗಿದೆ. ಕೊಡು ಕೊಳ್ಳುವಿಕೆಯ ಗುಣ ಇಲ್ಲಿ ಅಗತ್ಯ. ಧರ್ಮ ಶ್ರದ್ದೆ ತುಂಬಿದ ಜನರು ನಮ್ಮೊಂದಿಗಿರಬೇಕು. ಒಗ್ಗಟ್ಟಿನಿಂದ ಸಹಕಾರಿ ಸಂಘಗಳು ಮತ್ತಷ್ಟು ಗಟ್ಟಿಯಾಗುತ್ತದೆ. ಗ್ರಾಹಕರು ಸಹಕಾರಿಯ ಜೀವಾಳ, ಮಾನವೀಯ ಮೌಲ್ಯ ಬಹಳಷ್ಟು ಶ್ರೇಷ್ಟವಾದುದು. ಅದನ್ನು ಬೆಳೆಸುವ ಕೆಲಸವಾಗಬೇಕು. ಮನಸ್ಸಿನ ಭಾರ ಕಡಿಮೆಮಾಡಲು ಧ್ಯಾನ ಅಗತ್ಯ. ಸಂಪತ್ತಿನ ಧಾನ ಜೀವನದಲ್ಲಿ ಅತೀ ಅಗತ್ಯ. ಸಮಾಜದ ಋಣ ನಮ್ಮೆಲ್ಲರಲ್ಲಿದೆ. ಲೋಕ ಹಿತದ ಕಾರ್ಯ ಎಲ್ಲರಿಂದಲೂ ಆಗಲಿ. ಶಾಖೆ ಬೆಳವಣಿಗೆಯೊಂದಿಗೆ ಸಮಾಜಹಿತ ಸಾಧ್ಯ. ಆದ್ಯಾತ್ಮಿಕ ಬದುಕು ನಮ್ಮದಾದಾಗ ಬದುಕು ಹಸನು ಎಂದರು.

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಗೌರವ ಮಾರ್ಗದರ್ಶಕರಾದ ಸಾದ್ವೀ ಶ್ರೀ ಮಾತಾನಂದಮಯೀ ರವರು ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಿ ಕಡಿಮೆ ಅವಧಿಯಲ್ಲಿ ಅತೀ ಎತ್ತರಕ್ಕೆ ಏರಿರುವ ಸಹಕಾರಿ‌ ನಮ್ಮದು ಎನ್ನಲು ಸಂತಸವಾಗುತ್ತಿದೆ. ಆರ್ಥಿಕ ವ್ಯವಸ್ಥೆ ಸದೃಡವಾಗಲು ಭದ್ರ ಬುನಾದಿ ಅಗತ್ಯ. ಸೇವಾ ಮನೊಭಾವದ ಸೇವೆ ನಮ್ಮಲ್ಲಿದ್ದಾಗ ಯಶಸ್ಸು‌ ಹೆಚ್ಚು. ಗ್ರಾಹಕ ಬಂಧುಗಳ ಸಹಕಾರ ಸಂಸ್ಥೆಯ ಏಳಿಗೆಗೆ ಪೂರಕ ಎಂದರು.

ಉದ್ಯಮಿ ಶಶಿಧರ ಶೆಟ್ಟಿ ಬರೋಡರವರು ಮಾತನಾಡಿ ಗ್ರಾಹಕರ ಸೆಳೆತ ಹೆಚ್ಚಾದಾಗ ಸಂಸ್ಥೆ ಅಭಿವೃದ್ಧಿ ಸಾಧ್ಯ. ಹೆಚ್ಚನ ರಾಷ್ಟ್ರೀಕೃತ ಬ್ಯಾಕ್ ಗಳ ಹುಟ್ಟು ನಮ್ಮ ಜಿಲ್ಲೆಯಲ್ಲೇ ಆಗಿದೆ ಎನ್ನುವುದು ಸಂತಸ ತರುವ ವಿಚಾರ. ಜನರ ಏಳಿಗೆ ಇಂತಹ ಸಹಕಾರಿ ಸಂಘದಿಂದ ಸಾಧ್ಯ. ಸರಕಾರಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಅಜಗಜಾಂತರ ವ್ಯತ್ಯಾಸವಿದೆ ಎಂದರು.

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನ ಧರ್ಮಗುರುಗಳಾದ ರೆ. ಫಾದರ್ ಸ್ಟಾನಿ ಗೋವೆಸ್
ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಉದ್ಘಾಟನಾ ಸಂದರ್ಭದಲ್ಲಿ ಶುಭಹಾರೈಸಿ ತೆರಳಿದರು.ಗುರುವಾಯನಕೆರೆ ಬಂಟರ ಸಂಘದ ಅಧ್ಯಕ್ಷರಾದ ಜಯಂತ್ ಶೆಟ್ಟಿ, ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿಅಧ್ಯಕ್ಷರಾದ ಯು. ಚಂದ್ರಶೇಖರ ಭಟ್, ವೇದಮೂರ್ತಿ ಶ್ರೀ ಚಂದ್ರಶೇಖರ ಉಪಾಧ್ಯಾಯ ನಂದಿಬೆಟ್ಟ, ದಂತವೈದ್ಯರಾದ ಡಾ.ವಿಶುಕುಮಾರ್ ಶೆಟ್ಟಿ, ಶ್ರೀ ಕ್ಷೇತ್ರ ಪಾರಂಕಿಯ ಮಾಜಿ ಆಡಳಿತ ಮೊಕ್ತೇಸರರಾದ ಬಿ.ರತ್ನಾಕರ ಶೆಟ್ಟಿ ಮುಡಯೂರು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೂಪ ನವೀನ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಭಾರತಿ ಬಿ. ಭಟ್, ಮೈಸೂರು ಪ್ರಾಂತೀಯ ಹಿರಿಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು, ಕಟ್ಟಡದ ಮಾಲಕರಾದ ಲಾವ್ಯಮೀನ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರುಗಳಾದ ವೇಣುಗೋಪಾಲ್ ಮಾರ್ಲ ಮಂಗಳೂರು, ತಾರಾನಾಥ ಶೆಟ್ಟಿ ಒಡಿಯೂರು, ಲೋಕನಾಥ ಶೆಟ್ಟಿ ಮಂಗಳೂರು, ಶಾರದಾಮಣಿ ಸುಳ್ಯ, ಸರಿತಾ ಅಶೋಕ್ ಮಂಗಳೂರು, ದೇವಪ್ಪ ನಾಯ್ಕ್ ಉಪ್ಪಳಿಗೆ, ಗಣಪತಿ ಭಟ್ ಸೇರಾಜೆ, ಮೋನಪ್ಪ ಪೂಜಾರಿ ಕೆರೆಮಾರು,ಸೋಮಪ್ಪ ನಾಯ್ಕ್ ಕಡಬ, ಜಯಪ್ರಕಾಶ್ ರೈ ನೂಜಿಬೈಲು, ಭವಾನಿಶಂಕರ ಶೆಟ್ಟಿ ಪುತ್ತೂರು, ಅಶೋಕ್ ಕುಮಾರ್ ಯು.ಎಸ್. ಬಿ.ಸಿ.ರೋಡ್, ಎಂ.ಉಗ್ಗಪ್ಪ ಶೆಟ್ಟಿ ಕೊಂಬಿಲ,ಕರುಣಾಕರ ಜೆ. ಉಚ್ಚಿಲ್ ಉಪಸ್ಥಿತರಿದ್ದರು.

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಎ. ಸುರೇಶ್ ರೈರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಡಂತ್ಯಾರು ಶಾಖಾ ವ್ಯವಸ್ಥಾಪಕರಾದ ಪವಿತ್ರ ಎನ್ ಪ್ರಾರ್ಥಿಸಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷರಾದ ಲಿಂಗಪ್ಪ ಗೌಡ ಪನೆಯಡ್ಕ ವಂದಿಸಿದರು. ಲೊಕೇಶ್ ರೈ ಬಾಕ್ರಬೈಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here