ಆಲಂಕಾರು: ಆಲಂಕಾರು ಗ್ರಾ.ಪಂ ನಲ್ಲಿ ನ.20, 2024 ರಿಂದ ನ.19, 2025ರ ತನಕದ ಒಂದು ವರ್ಷದ ಅವಧಿಗೆ ಆಲಂಕಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಹಸಿಮೀನು ಮಾರಾಟ ಮಾಡುವ ಅನುಭೋಗದ ಹಕ್ಕಿನ ಬಹಿರಂಗ ಏಲಂ ನ.19ರಂದು ಮಂಗಳವಾರ ಅಪರಾಹ್ನ 2:30ಕ್ಕೆ ಆಲಂಕಾರು ಗ್ರಾ.ಪಂ ಸಭಾಭವನದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಸುಶೀಲ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ.ಕೆ ಯವರು ಏಲಂ ನ ಶರ್ತಗಳನ್ನು ಬಿಡ್ಡುದಾರರಿಗೆ ತಿಳಿಸಿದರು. ಒಟ್ಟು ಆರು ಮಂದಿ ಬಿಡ್ಡುದಾರರು ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಆಲಂಕಾರು ಸ್ಟಾಲ್ ನಂಬರ್ ಒಂದಕ್ಕೆ ಪಂಚಾಯತ್ ಬಿಡ್ಡು 1,50,000,ಆಗಿತ್ತು. ಆನಂತರ ಏಲಂ ಪ್ರಕ್ರಿಯೆ ಪ್ರಾರಂಭವಾಗಿ ಅಂತಿಮವಾಗಿ ಮಹಮ್ಮದ್ ಯಾನೆ ಸತ್ತಾರ್ ಮತ್ತು ಫಯಾಝ್ ರವರ ಬಿರುಸಿನ ಪೈಪೋಟಿಯಲ್ಲಿ ಮಹಮ್ಮದ್ ಯಾನೆ ಸತ್ತಾರ್ ರವರು ಸ್ಟಾಲ್ ನಂಬರ್ ಒಂದನ್ನು 5,55,000 ಕ್ಕೆ ಪಡೆದುಕೊಂಡರು.
ಸ್ಟಾಲ್ ನಂಬರ್ ಎರಡಕ್ಕೆ ಪಂಚಾಯತ್ ಆರಂಭಿಕ ಬಿಡ್ಡು 1,00,000 ಆಗಿತ್ತು. ಆನಂತರ ಏಲಂ ಪ್ರಕ್ರಿಯೆ ಪ್ರಾರಂಭವಾಗಿ ಅಬ್ದುಲ್ ಸಮಾದ್ ಮತ್ತು ಝಕೀರ್ ರವರ ನಡುವೆ ಪೈಪೋಟಿ ನಡೆದು 1,70,000 ಕ್ಕೆ ಅಬ್ದುಲ್ ಸಮಾದ್ ರವರು 2ನೇ ಸ್ಟಾಲ್ ಏಲಂ ನಲ್ಲಿ ಪಡೆದುಕೊಂಡರು. ಏಲಂ ನಲ್ಲಿ ಕೇಶವ ಗೌಡ ಆಲಡ್ಕ, ಮಹಮ್ಮದ್ ಅಸೀಫ್ ಸೇರಿದಂತೆ ಒಟ್ಟು ಆರು ಮಂದಿ ಪಾಲ್ಗೊಂಡಿದ್ದರು.
ಗ್ರಾ.ಪಂ ಕಾರ್ಯದರ್ಶಿ ವಸಂತ ಶೆಟ್ಟಿ ಯವರು ಏಲಂ ಪ್ರಕ್ರಿಯೆ ನಡೆಸಿ ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ರವಿಪೂಜಾರಿ, ಕೆ ಗ್ರಾ.ಪಂ ಸದಸ್ಯ ಶ್ವೇತಕುಮಾರ್ ಉಪಸ್ಥಿತರಿದ್ದರು. ಗ್ರಾ.ಪಂ ಸಿಬ್ಬಂದಿಗಳು ಸಹಕರಿಸಿದರು.