ಕಡಬ: ಇಲ್ಲಿನ ಪಂಜರಸ್ತೆಯ ಯೋಗಕ್ಷೇಮ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಸಂಪೂರ್ಣ ಪಾಲಿ ಕ್ಲಿನಿಕ್ನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಇವರ ಸಹಭಾಗಿತ್ವದಲ್ಲಿ ತಜ್ಞರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ನ.24ರಂದು ನಡೆಯಲಿದೆ.
ಶಿಬಿರದಲ್ಲಿ ಜನರಲ್ ಸರ್ಜನ್ ಡಾ|ಬಾಲಾಜಿ, ಮೂಳೆ ತಜ್ಞ ಡಾ| ಶತಾನಂದ ಪ್ರಸಾದ್ ರಾವ್, ವೈದ್ಯಕೀಯ ಶಾಸ್ತ್ರ ವಿಭಾಗದ ಡಾ| ಯಶಸ್ವಿನಿ ಎಂ. ಅಮಿನ್, ಕಿವಿ, ಮೂಗು, ಗಂಟಲು ತಜ್ಞ ಡಾ| ರೋಹನ್ ದೀಕ್ಷಿತ್, ಕಣ್ಣಿನ ತಜ್ಞರಾದ ಡಾ| ಸುಭಾಷ್ ಚಂದ್ರ, ಮಕ್ಕಳ ತಜ್ಞರಾದ ಡಾ| ನಿಕಿತ ಮಿರ್ಲೆ, ಡಾ| ಪ್ರತೀತ್ ಪಿ. ಅಜಿಲ, ಚರ್ಮ ತಜ್ಞರಾದ ಡಾ| ಭವಿಷ್ಯ ಕೆ. ಶೆಟ್ಟಿ ಅವರುಗಳು ಲಭ್ಯರಿದ್ದು ಅಗತ್ಯವುಳ್ಳವರು ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬಹುದಾಗಿದೆ ಅಲ್ಲದೆ ಶಿಬಿರದಲ್ಲಿ ಉಚಿತ ಇ.ಸಿ.ಜಿ., ರಕ್ತದೊತ್ತಡ ತಪಾಸಣೆ, ಮಧುಮೇಹ ತಪಾಸಣೆ, ಹಿಮೋಗ್ಲೋಬಿನ್ ತಪಾಸಣೆ ನಡೆಯಲಿದ್ದು ಉಚಿತ ಔಷಧಿಯು ವಿತರಣೆ ಮಾಡಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.