ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಯು ಡಿ. ಐಡಿ ಪ್ರಮಾಣ ಪತ್ರ ಶಿಬಿರ

0

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಆಡಳಿತ ವೈದಾಧಿಕಾರಿ ಡಾಕ್ಟರ್ ಆಶಾಜ್ಯೋತಿ ಅಧ್ಯಕ್ಷತೆಯಲ್ಲಿ ಪುತ್ತೂರು ವಿಕಲ ಚೇತನರ ನೋಡೆಲ್ ಅಧಿಕಾರಿ ವಾಣಿ ಶ್ರೀ ರವರ ಮಾರ್ಗದರ್ಶನದಲ್ಲಿ ಹಾಗೂ ಪುತ್ತೂರು ತಾಲ್ಲೂಕು ಮಟ್ಟದ ಬಹುಮಟ್ಟದ ಪುನರ್ ವಸತಿ ಕಾರ್ಯಕರ್ತ ನವೀನ್ ಕುಮಾರ್ ರವರ ಉಪಸ್ಥಿತಿಯಲ್ಲಿ ವಿಕಲ ಚೇತನರ ಯು ಡಿ. ಐಡಿ ಪ್ರಮಾಣ ಪತ್ರ ಶಿಬಿರ ನ.22ರಂದು ನಡೆಯಿತು.

ಈ ಪ್ರಮಾಣ ಪತ್ರ ಶಿಬಿರದಲ್ಲಿ ಹೊಸತು /ನವಿಕರಣ ವಿಕಲ ಚೇತನರ ಪ್ರಮಾಣ ಪತ್ರ ಶಿಬಿರವು ಪುತ್ತೂರು ಸರಕಾರಿ ಆಸ್ಪತ್ರೆಯ ಎಲುಬು ಕೀಲು ತಜ್ಞರಾದ ಡಾಕ್ಟರ್ ಅಜಯ್ ಎಂ. ಬಿ, ಪುತ್ತೂರು ಸರಕಾರಿ ಆಸ್ಪತ್ರೆಯ ಹಿರಿಯ ತಜ್ಞರಾದ ಫಿಸಿಷಿಯನ್ ಡಾಕ್ಟರ್ ಯದು ರಾಜ್ ಡಿ.ಕೆ, ಕಿವಿ ಮೂಗು ಗಂಟಲು ತಜ್ಞರಾದ ದಕ್ಷಿಣ ಕನ್ನಡ ಜಿಲ್ಲೆಯ ಆಡಿಯೋಲಿಸ್ಟ್ ಸುಶಾಂತ್ ,ಡಾಕ್ಟರ್ ಜೈನಾಬ್ ಸುನು ಆಲಿ, ಉಪಸ್ಥಿತಿಯಲ್ಲಿ ಪುತ್ತೂರು ತಾಲ್ಲೂಕು ಹಾಗೂ ಕಡಬ ತಾಲೂಕಿನ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರು ಸಹಕರಿಸಿದರು.

LEAVE A REPLY

Please enter your comment!
Please enter your name here