ಪುತ್ತೂರು: ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಅಧ್ಯಕ್ಷ ಡಾ.ವೀರ ಭದ್ರಪ್ಪ ಚಿನಿವಾಲರ್ ಅವರು ನ.24ರಂದು ಪುತ್ತೂರು ಘಟಕ್ಕೆ ಭೇಟಕ್ಕೆ ನೀಡಲಿದ್ದಾರೆ. ಇದೇ ಸಂದರ್ಭ ಬೆಳಿಗ್ಗೆ ದರ್ಬೆ ಕಾನಾವು ಸ್ಕಿನ್ ಕ್ಲಿನಿಕ್‌ನ ಶಂಕರಿ ಗೋಪಾಲಕೃಷ್ಣ ಆರ್ಕೆಟ್‌ನಲ್ಲಿರುವ ಕಾನ್ಪರೆನ್ಸ್ ಹಾಲ್‌ನಲ್ಲಿ ಬೆಳಿಗ್ಗೆ ಗಂಟೆ 11ಕ್ಕೆ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ಕಾರ್ಯಗಾರವು ನಡೆಯಲಿದೆ.
ಆರೋಗ್ಯ ರಕ್ಷಣೆಯಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ನಮ್ಮ ರೋಗಿಗಳಿಗೆ ಗುಣಮಟ್ಟದ ಆರೈಕೆಯನ್ನು ಒದಗಿಸುವಲ್ಲಿ ನಾವು ಎದುರಿಸುತ್ತಿರುವ ಸವಾಲುಗಳು ಸೇರಿದಂತೆ ನಮ್ಮ ವೈದ್ಯಕೀಯ ಸಮುದಾಯದ ಮೇಲೆ ಪರಿಣಾಮ ಬೀರುವ ವಿವಿಧ ಪ್ರಮುಖ ಸಮಸ್ಯೆಗಳ ಕುರಿತು ಅವರೊಂದಿಗೆ ಚರ್ಚಿಸುವ ಸಾಧ್ಯತೆಗಳಿವೆ. ಕಾರ್ಯಕ್ರಮದಲ್ಲಿ ಮನೋವೈದ್ಯಕೀಯ ವಿಚಾರದಲ್ಲಿ ಮಂಗಳೂರು ಏನಪೋಯ ಮೆಡಿಕಲ್ ಕಾಲೇಜಿನ ಮನೋವೈದ್ಯ ಡಾ. ಅನಿಲ್ ಕಾಕುಂಜೆ ಅವರು ಮಾಹಿತಿ ಕಾರ್ಯಾಗಾರ ನಡೆಸಲಿದ್ದಾರೆ. ಭಾರತೀಯ ವೈದ್ಯಕೀಯ ಸಂಘದ ಹಿರಿಯ ಉಪಾಧ್ಯಕ್ಷ ಡಾ. ಟಿ.ಎನ್.ಮರಿ ಗೌಡ, ಜಿಲ್ಲಾ ಸಮನ್ವಯಕಾರ ಡಾ. ಜಿ.ಕೆ ಭಟ್ ಶಂಖಬಿತ್ತಿಲು, ಜಿಲ್ಲಾ ಪ್ರತಿನಿಧಿ ಡಾ ಮನೋಹರ್ ರೇವಂಕರ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಪುತ್ತೂರು ಘಟಕದ ಅಧ್ಯಕ್ಷ ಡಾ. ನರಸಿಂಹ ಶರ್ಮ ಕಾನಾವು ಮತ್ತು ಕಾರ್ಯದರ್ಶಿ ಗಣೇಶ್‌ಪ್ರಸಾದ್ ಮುದ್ರಾಜೆ ಅವರು ತಿಳಿಸಿದ್ದಾರೆ.
