ಉಪ್ಪಿನಂಗಡಿ ಇಂಡಿಯನ್ ಸ್ಕೂಲ್‌ ನಲ್ಲಿ 20ನೇ ವಾರ್ಷಿಕ ಹಬ್ಬ ನಲಿವು- 2024

0

puttur:ಉಪ್ಪಿನಂಗಡಿ ಇಂಡಿಯನ್ ಸ್ಕೂಲ್‌ ನಲ್ಲಿ 20ನೇ ವಾರ್ಷಿಕ ಹಬ್ಬ ನಲಿವು- 2024 ಕಾರ್ಯಕ್ರಮ ನ.20ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಇಂಡಿಯನ್ ಸ್ಕೂಲಿನ ಹಿರಿಯ ವಿದ್ಯಾರ್ಥಿಗಳಾದ ಬೆಳ್ತಂಗಡಿ ಗ್ರಾಮ ಆಡಳಿತ ಅಧಿಕಾರಿ ಶೈನಾಝ್, ಮಂಗಳೂರು ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಡಾ. ಕತೀಜಾ ರಶಾ BAMS, ಮಾತನಾಡಿ ಶುಭಹಾರೈಸಿದರು.

ಅತಿಥಿ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾಕ್ಟರ್ ಶಾಮಿಲ್ ಅಬ್ಬಾಸ್ MBBS ಮಾತನಾಡಿ ಯಾವುದೇ ಒಂದು ಮನೆ ಅಥವಾ ಶಾಲೆಗೆ ಅಡಿಪಾಯ ಸ್ಟ್ರಾಂಗ್ ಆಗಿರಬೇಕು. ಅದು ನನಗೆ ಇಂಡಿಯನ್ ಸ್ಕೂಲ್ ಹಾಗೂ ನನ್ನ ಎಲ್‌ ಕೆ ಜಿ ಶಿಕ್ಷಕಿ ಸ್ವರ್ಣಲತಾ ಮೇಡಂ ಅವರಿಂದ ಲಭಿಸಿದೆ. ಗುರುಗಳ ಋಣ ಸಂದಾಯ ಮಾಡಲು ಸಾಧ್ಯವಿಲ್ಲ ಎಂದರು.


ಶಾಲಾ ಅಧ್ಯಕ್ಷ ಹಾಜಿ ಎಚ್ ಯೂಸುಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಲಾ ವಾರ್ಷಿಕೋತ್ಸವ ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳನ್ನು ಹೊರತೆಗೆಯುವ ಸೂಕ್ತ ವೇದಿಕೆ ಎಂದರು. ವೇದಿಕೆಯಲ್ಲಿ ಶಾಲಾ ಕಾರ್ಯದರ್ಶಿ ಹಾಜಿ ಶುಕೂರ್, ಕೋಶಾಧಿಕಾರಿ ಮಹಮ್ಮದ್ ಮುಸ್ತಫಾ, ಕಮಿಟಿ ಸದಸ್ಯರಾದ ಹಾರೂನ್ ರಶೀದ್, ಅಗ್ನಾಡಿ, ಮಹಮ್ಮದ್ ಬಶೀರ್ ಇಬ್ರಾಹಿಂ (ಆಚಿ), ಶಬೀರ್ ಕೆಂಪಿ , ತೌಶಿಫ್ ಯು ಟಿ, ಯೂಸುಫ್ ರವರು ಉಪಸ್ಥಿತರಿದ್ದರು.

20 ವರ್ಷಗಳ ಕಾಲ ಸ್ಥಾಪಕ ಶಿಕ್ಷಕಿಯಾಗಿದ್ದ ಸ್ವರ್ಣಲತಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶಾಲಾ ಪ್ರಾಂಶುಪಾಲೆ ಸಂಶಾದ್ ಬೇಗಂ ಸ್ವಾಗತಿಸಿ, ಶಾಲಾ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕಿ ನಿರ್ಮಲಾಕ್ಷಿ ವಂದಿಸಿದರು.ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

LEAVE A REPLY

Please enter your comment!
Please enter your name here