ಪುತ್ತೂರು: ಅರಬಿ ರಾಷ್ಟ್ರಗಳಲ್ಲಿ ಪ್ರಮುಖವಾದ ಬಹರೈನ್ ಕನ್ನಡ ಸಂಘದ ಅಧ್ಯಕ್ಷ ದಕ್ಷಿಣ ಕನ್ನಡ ಮೂಲದವರಾದ ಅಮರನಾಥ ರೈ ಮತ್ತು ಪತ್ನಿ ಸ್ನೇಹಲತಾ ರೈ ರವರು ಕಾವು ಹೇಮನಾಥ ಶೆಟ್ಟಿಯವರ ಮನೆಗೆ ಸೌಹಾರ್ದ ಭೇಟಿ ನೀಡಿದರು.
ಇತ್ತೀಚೆಗೆ ಬಹಳ ಅದ್ದೂರಿಯಾಗಿ ಬಹರೈನಲ್ಲಿ ನಡೆದ ಕನ್ನಡ ಸಂಘದ ಕನ್ನಡ ವೈಭವ ಕಾರ್ಯಕ್ರಮದಲ್ಲಿ ಕಾವು ಹೇಮನಾಥ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇಡೀ ಪ್ರಪಂಚದಲ್ಲೆ ಮೊದಲ ಕನ್ನಡ ಭವನವಿರುವ ನಾಡು ಬಹರೈನ್ ಆಗಿದೆ.
ಕಾವು ಹೇಮನಾಥ ಶೆಟ್ಟಿಯವರ ಮನೆಯಲ್ಲಿ ಅಮರನಾಥ್ ರೈ ದಂಪತಿಗಳನ್ನು ಗೌರವ ಪೂರ್ವಕವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ರಾಮಯ್ಯ ರೈ ತಿಂಗಳಾಡಿ, ನಾರಾಯಣ ರೈ ಮೈಸೂರು, ಶರತ್ ಕುಮಾರ್ ರೈ ಕಾವು, ಶ್ಯಾಮ್ ಸುಂದರ್ ರೈ ಪಾಂಬಾರು, ವಿಜಯ ಕುಮಾರ್ ಸೊರಕೆ, ರಮೇಶ್ ಸಾಂತ್ಯ, ಅನಿತಾ ಹೇಮನಾಥ ಶೆಟ್ಟಿ, ಜಯರಾಮ ರೈ ನುಳಿಯಾಲು, ಶಶಿಕಲಾ ಚೌಟ, ಕವಿತಾ ಸಿ ರೈ, ಆಶಾ ಶರತ್ ಕುಮಾರ್ ರೈ, ಬಾಲಕೃಷ್ಣ ಕಣ್ಣರಾಯ, ಸುಪ್ರೀತ್ ಕಣ್ಣರಾಯ, ಪ್ರೇಮನಾಥ ಶೆಟ್ಟಿ ಕಾವು, ದಿವ್ಯನಾಥ ಶೆಟ್ಟಿ ಕಾವು, ತ್ರಿಶಾಲ ಶೆಟ್ಟಿ, ಕಿಶೋರಿ ಪಿ ಶೆಟ್ಟಿ, ಸುರೇಖಾ ಡಿ ಶೆಟ್ಟಿ, ಡಾ| ವಾಸ್ತವಿ ಶೆಟ್ಟಿ, ಡಾ| ರಂಜಿತಾ ಶೆಟ್ಟಿ, ಸೈಫುದ್ದೀನ್ ದರ್ಬೆ, ರವಿಪ್ರಸಾದ್ ಶೆಟ್ಟಿ ಬನ್ನೂರ್, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ ಮತ್ತಿತರು ಉಪಸ್ಥಿತರಿದ್ದರು.