ಪುತ್ತೂರು:ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಬೀಟಿಗೆ ದಿವಂಗತ ಮೋನು ಎಂಬವರ ಪತ್ನಿ ಸೇಲ್ಮರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಗತಿಕ ಮಾಸಾಶನ ಕೈಪಿಡಿಯನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.
ವಿಟ್ಲ ತಾಲೂಕು ಕೃಷಿ ಅಧಿಕಾರಿ ಚಿದಾನಂದರವರು ವಿತರಿಸಿದರು. ಈ ಸಂದರ್ಭದಲ್ಲಿ ಪೆರ್ನೆ ಮೇಲ್ವಿಚಾರಕರಾದ ಶಾರದಾ, ಜ್ಞಾನವಿಕಾಸ ದೀಪಾ, ಸೇವಾ ಪ್ರತಿನಿಧಿ ಶಾರದಾ, ಕೆದಿಲ ಶೌರ್ಯ ವಿಪತ್ತು ನಿರ್ವಹಣಾ ಸದಸ್ಯರಾದ ಜಗದೀಶ, ಗಿರೀಶ, ವೆಂಕಪ್ಪ ಉಪಸ್ಥಿತರಿದ್ದರು.