ಪುತ್ತೂರು: ಪರ್ಲಡ್ಕ ಪ್ರಥ್ವಿ ನಿವಾಸಿ, ಫಿಯೋನಾ ಜೋೖಲಿನ್ ಮಸ್ಕರೇನ್ಹಸ್ ರವರು ಪ್ರತಿಷ್ಠಿತ ಸಂಸ್ಥೆ ಎನ್.ಐ.ಟಿ.ಕೆ ಸುರತ್ಕಲ್ ಇಲ್ಲಿ ಪ್ರೊ.ರಾಮಚಂದ್ರ ಭಟ್ ರವರ ಮಾರ್ಗದರ್ಶನದಲ್ಲಿ “Synthesis and characterization of transition metal chalcogenides for high performance supercapacitors” ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿಯನ್ನು ಗಳಿಸಿರುತ್ತಾರೆ.
ಡಾ.ಜೋೖಲಿನ್ ಮಸ್ಕರೇನ್ಹಸ್ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲಾ ಶಿಕ್ಷಣವನ್ನು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣವನ್ನು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಬಿಎಸ್ಸಿ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಮೂರನೇ ರ್ಯಾಂಕ್ ನೊಂದಿಗೆ, ಸ್ನಾತಕೋತ್ತರ ಎಂಎಸ್ಸಿ ಹಾಗೂ ಪಿ.ಎಚ್.ಡಿ ಪದವಿಯನ್ನು ಸುರತ್ಕಲ್ ಎನ್.ಐ.ಟಿ.ಕೆ ಇಲ್ಲಿ ಪೂರೈಸಿರುತ್ತಾರೆ. ಕೇಂದ್ರ ಸರಕಾರದ ಎಂ.ಎಚ್.ಆರ್.ಡಿ ಯೋಜನೆಯಡಿಯಲ್ಲಿ ಸಂಶೋಧನೆ ಮಾಡಿ ಪಿ.ಎಚ್.ಡಿ ಪದವಿಯನ್ನು ಪಡೆದಿರುತ್ತಾರೆ.
ಇವರು ಪರ್ಲಡ್ಕ ನಿವಾಸಿ, ತಂದೆ ಸಂತ ಫಿಲೋಮಿನಾ ಕಾಲೇಜು ಹಾಗೂ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನ ನಿವೃತ್ತ ಆಡಳಿತ ಸಿಬ್ಬಂದಿ ಶೆರಿ ಮಸ್ಕರೇನ್ಹಸ್, ತಾಯಿ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಜಾನೆಟ್ ಪಾಯಿಸ್, ಪತಿ ಬೆಂಗಳೂರಿನ ಕೋಲ್ಕಂ ಸಂಸ್ಥೆಯಲ್ಲಿ ಸ್ಟಾಫ್ ಇಂಜಿನಿಯರ್ ಆಗಿರುವ ಆನ್ಸಿಲ್ ಮಿನೇಜಸ್, ತಮ್ಮ ಹೈದರಾಬಾದ್ ನಲ್ಲಿ ಡಾಟ ಸೈಂಟಿಸ್ಟ್ ಆಗಿರುವ ಫ್ರಾನ್ ಸ್ಟೀವ್ ಮಸ್ಕರೇನ್ಹಸ್ ರವರನ್ನು ಹೊಂದಿರುತ್ತಾರೆ.